ಯಶ್ ರವರ ಬಳಿ ಶಿವಾಜಿ ರವರ ಸಿನಿಮಾ ಮಾಡಿ ಎಂದ ಮಹಾರಾಷ್ಟ್ರ ಫ್ಯಾನ್ಸ್. ಆದರೆ ಕನ್ನಡಿಗರು ಏನಂದ್ರು ಗೊತ್ತೇ??

ಯಶ್ ರವರ ಬಳಿ ಶಿವಾಜಿ ರವರ ಸಿನಿಮಾ ಮಾಡಿ ಎಂದ ಮಹಾರಾಷ್ಟ್ರ ಫ್ಯಾನ್ಸ್. ಆದರೆ ಕನ್ನಡಿಗರು ಏನಂದ್ರು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೇ ಜೂನ್ 3 ರಂದು ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ 50 ದಿನಗಳನ್ನು ಪೂರ್ಣಗೊಳಿಸಲಿದೆ. ಇದೇ ದಿನದಂದು ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾ ಕೂಡ ಘೋಷಣೆಯಾಗಲಿದೆ ಎಂಬುದಾಗಿ ಗಾಳಿಸುದ್ದಿ ಹೆಚ್ಚಿದೆ.

ಹೌದು ಗೆಳೆಯರೇ ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ರವರು ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದು ಅಭಿಮಾನಿಗಳಿಗೆ ಗೊಂದಲಮಯವಾಗಿದೆ. ಯಶ್ ರವರ ಮುಂದಿನ ಸಿನಿಮಾ ಕುರಿತಂತೆ ಚಿಕ್ಕ ಸುಳಿವನ್ನು ಕೂಡ ಯಶ್ ಸೇರಿದಂತೆ ಅವರ ತಂಡವು ಕೂಡ ಬಿಟ್ಟುಕೊಡುತ್ತಿಲ್ಲ. ನಿಮಗೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸರಣಿ ಚಿತ್ರಗಳ ನಂತರ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ಕನ್ನಡ ಚಿತ್ರರಂಗದ ನಟ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ನಟ ಕೂಡ ಆಗಿದ್ದಾರೆ. ಪ್ರತಿಯೊಂದು ರಾಜ್ಯಗಳಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ರವರಿಗೆ ಅಭಿಮಾನಿಗಳ ಸಂಘವಿದೆ. ಅದರಲ್ಲೂ ಇತ್ತೀಚಿಗೆ ಮಹಾರಾಷ್ಟ್ರದ ಅಭಿಮಾನಿಗಳು ಯಶ ರವರನ್ನು ಅವರ ಐಕಾನ್ ಆಗಿರುವ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ಅಲ್ಲಿ ನಟಿಸುವಂತೆ ಬೇಡಿಕೆ ಇಟ್ಟಿದೆ.

ಇದರ ಕುರಿತಂತೆ ಮಹಾರಾಷ್ಟ್ರದ ಅಭಿಮಾನಿಗಳು ಯಶ್ ರವರನ್ನು ಮಹಾರಾಜ ಛತ್ರಪತಿ ಶಿವಾಜಿ ರವರಿಗೆ ಹೋಲಿಸಿ ಕಾಲ್ಪನಿಕ ಪೋಸ್ಟರನ್ನು ಕೂಡ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಆದರೆ ಕನ್ನಡದ ಅಭಿಮಾನಿಗಳ ಬೇಡಿಕೆ ಬೇರೆನೆ ಇದೆ.ಹೌದು ಗೆಳೆಯ ಕನ್ನಡದ ಧೀಮಂತ ರಾಜ ಆಗಿರುವ ಇಮ್ಮಡಿ ಪುಲಿಕೇಶಿ ರವರ ಬಯೋಪಿಕ್ ನಲ್ಲಿ ನಟಿಸುವಂತೆ ಕರ್ನಾಟಕದ ಅಭಿಮಾನಿಗಳು ಯಶ್ ರವರಲ್ಲಿ ಬೇಡಿಕೆ ಇಟ್ಟಿದ್ದಾರೆ. ಒಟ್ಟಾರೆಯಾಗಿ ರಾಕಿಂಗ್ ಸ್ಟಾರ್ ಯಶ್ ರವರು ನರ್ತನ್ ರವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎಂಬುದಾಗಿ ಕೇಳಿದೆ. ಹಾಗಿದ್ದರೆ ಯಾರ ಅಥವಾ ಯಾವ ಸಿನಿಮಾದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಧಿಕೃತವಾಗಿ ತಿಳಿದುಬರಬೇಕಾಗಿದೆ ಅಷ್ಟೇ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.