ನೇರವಾಗಿ ಭವಿಷ್ಯದ ನಾಯಕರಲ್ಲಿ ಒಬ್ಬರಾಗಿರುವ ರಿಷಬ್ ರವರನ್ನು ದುರಹಂಕಾರಿ ಎಂದ ಆಕಾಶ್ ಚೋಪ್ರಾ. ಯಾಕೆ ಗೊತ್ತೇ?? ಈ ಕಠಿಣ ಮಾತು ಹೇಳಲು ಕಾರಣವೇನು ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂದಿನ ಭವಿಷ್ಯದ ಭಾರತೀಯ ಕ್ರಿಕೆಟ್ ತಂಡದ ನಾಯಕರ ರೇಸ್ನಲ್ಲಿ ಯುವ ಉದಯೋನ್ಮುಖ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ರಿಷಬ್ ಪಂತ್ ರವರು ಕೂಡ ಮುಂಚೂಣಿಯಲ್ಲಿದ್ದಾರೆ. ಇನ್ನು ಈ ಬಾರಿ ಐಪಿಎಲ್ ನಲ್ಲಿ ಡೆಲ್ಲಿ ತಂಡದ ಕಪ್ತಾನನಾಗಿ ಕಳಪೆ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಬಹುದಾಗಿದೆ.

ಕೊನೆಯ ಪಂದ್ಯವನ್ನು ಮುಂಬೈ ತಂಡದ ವಿರುದ್ಧ ಗೆದ್ದಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗಬಹುದಾಗಿತ್ತು. ಆದರೆ ಇಲ್ಲಿ ರಿಷಬ್ ಪಂತ್ ರವರು ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಧಾರಗಳು ತಂಡದ ಸೋಲಿಗೆ ಕಾರಣವಾಗಿದೆ ಎಂಬುದಾಗಿ ಕಾಮೆಂಟೇಟರ್ ಹಾಗೂ ಮಾಜಿ ಕ್ರಿಕೆಟಿಗ ಆಗಿರುವ ಆಕಾಶ್ ಚೋಪ್ರಾ ಅವರು ಅಭಿಪ್ರಾಯಪಟ್ಟಿದ್ದಾರೆ. ಹೌದು ಗೆಳೆಯರೇ ಆಕಾಶ್ ಚೋಪ್ರಾ ರವರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಕೇವಲ ರಿಷಬ್ ಪಂತ್ ರವರ ಕೆಟ್ಟ ಆಟದ ಮೇಲೆ ಮಾತ್ರವಲ್ಲದೆ ಅವರನ್ನು ಅಹಂಕಾರಿ ಎಂಬುದಾಗಿ ಕೂಡ ಸಂಬೋಧಿಸಿದ್ದಾರೆ. ತನ್ನ ಜವಾಬ್ದಾರಿಯನ್ನು ತಿಳಿದುಕೊಂಡಿದ್ದರು ಕೂಡ ಅನವಶ್ಯಕವಾಗಿ ಹಾಗೂ ಬೇಜವಾಬ್ದಾರಿತನದಿಂದ ಹಲವಾರು ಲಾಂಗ್ ಶಾಟ್ ಗಳನ್ನು ಹೊಡೆಯಲು ಹೋಗುತ್ತಾರೆ ಇದು ಅವರ ಅಹಂಕಾರವನ್ನು ತೋರಿಸುತ್ತದೆ ಎಂಬುದಾಗಿ ಆಕಾಶ್ ಚೋಪ್ರಾ ರವರು ಯುಟ್ಯೂಬ್ ಚಾನಲ್ ನಲ್ಲಿ ಹೇಳಿದ್ದಾರೆ. ತನ್ನ ನಂತರ ಯಾವುದೇ ಪ್ರಮುಖ ಬ್ಯಾಟ್ಸ್ ಮ್ಯಾನ್ ಇಲ್ಲ ಎಂಬುದನ್ನು ತಿಳಿದಿದ್ದರೂ ಕೂಡ ಕೆಲವೊಮ್ಮೆ ಹೀಗೆ ಮಾಡಲು ಹೋಗಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾರೆ.

ರಿಷಬ್ ಪಂತ್ ರವರು ಗಳಿಸಿರುವ ರಂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ ಸಹಕಾರಿ ಆಗಿರಲಿಲ್ಲ ಹಾಗೂ ಹಲವಾರು ಬಾರಿ ಕಳಪೆ ಬ್ಯಾಟಿಂಗ್ ಫಾರ್ಮ್ ಕೂಡ ತಂಡದ ತಲೆನೋ’ವಿಗೆ ಕಾರಣವಾಗಿದೆ. ಇಷ್ಟೆಲ್ಲಾ ಟೀಕೆಗಳ ನಡುವೆಯೂ ಕೂಡ ಆಕಾಶ್ ಚೋಪ್ರಾ ರವರು ಕುಲದೀಪ್ ಯಾದವ್ ರವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಲು ಕಾರಣವಾಗಿದ್ದು ರಿಷಬ್ ಪಂತ್ ಅವರ ಮಾರ್ಗದರ್ಶನ ಎಂಬುದಾಗಿ ಕೂಡ ಹೇಳಿದ್ದಾರೆ. ಇದರ ನಡುವೆ ಕುಲದೀಪ್ ಯಾದವ್ ರವರು ತಂಡದ ಪ್ರಮುಖ ಬೌಲರ್ ಆಗಿದ್ದರು ಅವರಿಗೆ ಹಲವಾರು ಬಾರಿ 4 ಓವರುಗಳನ್ನು ರಿಷಬ್ ಪಂತ್ ನೀಡಿಲ್ಲ ಎಂಬುದನ್ನು ಕೂಡ ಇಲ್ಲಿ ಟೀಕಿಸಿದ್ದಾರೆ.