ಮೊದಲ ಪ್ರಯತ್ನದಲ್ಲಿಯೇ ಟ್ರೋಫಿ ಗೆದ್ದಿದ್ದರೂ ಕೂಡ ನಾಲ್ವರನ್ನು ಹೊರ ಹಾಕಲಿದೆಯೇ ಗುಜರಾತ್ ಟೈಟನ್ಸ್. ಯಾರ್ಯಾರು ಗೊತ್ತೆ??

ಮೊದಲ ಪ್ರಯತ್ನದಲ್ಲಿಯೇ ಟ್ರೋಫಿ ಗೆದ್ದಿದ್ದರೂ ಕೂಡ ನಾಲ್ವರನ್ನು ಹೊರ ಹಾಕಲಿದೆಯೇ ಗುಜರಾತ್ ಟೈಟನ್ಸ್. ಯಾರ್ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೆ ಐಪಿಎಲ್ ಗೆ ಪಾದರ್ಪಣೆ ನೀಡಿದ ಮೊದಲ ಸೀಸನ್ನಿನಲ್ಲಿಯೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹೌದು ಗೆಳೆಯರೇ ಇದು ಪಂದ್ಯಗಳಿಂದ ಪ್ರಾರಂಭಿಸಿ ಫೈನಲ್ ವರೆಗೂ ಹಾರ್ದಿಕ್ ಪಾಂಡೆ ನಾಯಕತ್ವದ ಗುಜರಾತ್ ತಂಡ ತನ್ನ ಪ್ರಾಬಲ್ಯವನ್ನು ಕಾಯ್ದಿರಿಸಿಕೊಂಡಿತ್ತು. ಇಷ್ಟೊಂದು ಅದ್ಭುತವಾಗಿ ಪ್ರದರ್ಶನ ನೀಡಿರುವ ತಂಡದಿಂದಲೂ ಕೂಡ ಮುಂದಿನ ಐಪಿಎಲ್ ಒಳಗೆ ನಾಲ್ಕು ಆಟಗಾರರು ತಂಡದಿಂದ ಗೇಟ್ ಪಾಸ್ ಪಡೆಯಲಿದ್ದಾರೆ. ಹಾಗಿದ್ದರೆ ಅವರು ಯಾರು ಮೊದಲು ತಿಳಿಯೋಣ ಬನ್ನಿ.

ವಿಜಯಶಂಕರ್; ಈ ಬಾರಿ ಗುಜರಾತ್ ತಂಡ ತಮಿಳುನಾಡು ಮೂಲದ ಆಲ್ರೌಂಡರ್ ವಿಜಯ್ ಶಂಕರ್ ರವರನ್ನು ನಾಲ್ಕು ಪಂದ್ಯಗಳಲ್ಲಿ ಒನ್ ಡೌನ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಲು ಕಳಿಸಿದ್ದು ಆದರೆ ಅವರು ಗಳಿಸಿರುವುದು ಕೇವಲ 19ರನ್ ಮಾತ್ರ. ಬೌಲರ್ ಆಗಿ ಕೂಡ ತಂಡದಲ್ಲಿ 10 ಎಕಾನಮಿ ದರದಲ್ಲಿ ರನ್ ನೀಡುವ ಮೂಲಕ ದುಬಾರಿ ಆಗಿದ್ದಾರೆ.

ಮ್ಯಾಥ್ಯೂ ವೇಡ್; ಆಸ್ಟ್ರೇಲಿಯಾ ಮೂಲ ಆಟಗಾರ ಆಗಿರುವ ಮ್ಯಾಥ್ಯೂ ವೇಡ್ ಆಡಿರುವ 10 ಪಂದ್ಯಗಳಲ್ಲಿ ಗಳಿಸಿರುವುದು ಕೇವಲ 157 ರನ್ನು ಮಾತ್ರ. ಈ ಬಾರಿ ಕಳಪೆಯಾಗಿ ಆಟವಾಡಿದ್ದೇನೆ ಎಂಬುದಾಗಿ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷ ಜೇಸನ್ ರಾಯ್ ರವರಿಗಾಗಿ ಅವರು ಸ್ಥಾನವನ್ನು ಬಿಟ್ಟು ಕೊಡಬೇಕಾಗಿರುವ ಪರಿಸ್ಥಿತಿ ದಟ್ಟವಾಗಿದೆ.

ವರುಣ್ ಆರೋನ್; ಗುಜರಾತ್ ಐಪಿಎಲ್ನಲ್ಲಿ ಇವರನ್ನು ಎರಡು ಪಂದ್ಯಗಳಲ್ಲಿ ಆಡಿಸಿತ್ತು. ಒಟ್ಟಾರೆಯಾಗಿ 5 ಓವರ್ ಬೌಲಿಂಗ್ ಮಾಡಿದ್ದು ಬರೋಬರಿ 52 ರನ್ನುಗಳನ್ನು ನೀಡಿ ಕೇವಲ ಎರಡು ವಿಕೆಟ್ ಕಬಳಿಸಿ ರುವ ಇವರು ಇಂಜುರಿ ಕಾರಣದಿಂದಾಗಿ ತಂಡದ ಹೊರಗಿದ್ದು ಮುಂದಿನ ಬಾರಿ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆಯಾಗಿದೆ.

ದರ್ಶನ್ ನಾಲ್ಕಂಡೆ; ಖಂಡದ ಮತ್ತೊಬ್ಬ ಯುವ ಬೌಲರ್ ಆಗಿರುವ ದರ್ಶನ್ ಆಡಿರುವ ಎರಡು ಪಂದ್ಯಗಳಲ್ಲಿ ಹನ್ನೊಂದರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅನುಭವದಲ್ಲಿ ಸಾಕಷ್ಟು ಕೊರತೆಯನ್ನು ಹೊಂದಿರುವ ಈ ಆಟಗಾರರನ್ನು ಮುಂದಿನ ಸೀಸನ್ನಲ್ಲಿ ಮುಂದುವರೆಸುವುದು ಸಾಕಷ್ಟು ಅನುಮಾನ ಎನ್ನುವುದಾಗಿ ಹೇಳಬಹುದಾಗಿದೆ. ಈ ನಾಲ್ಕು ಆಟಗಾರರು ಮುಂದಿನ ಸೀಸನ್ ನಿಂದ ಗುಜರಾತ್ ತಂಡದಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ.