ಮತ್ತೊಂದು ಧರ್ಮದ ಮಹಿಳೆಯರನ್ನು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??

ಮತ್ತೊಂದು ಧರ್ಮದ ಮಹಿಳೆಯರನ್ನು ಮದುವೆಯಾಗಿರುವ ಭಾರತೀಯ ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಲೇಖನಿಯಲ್ಲಿ ನಾವು ಕೆಲವು ಕ್ರಿಕೆಟಿಗರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಕ್ರಿಕೆಟಿಗರ ಕುರಿತಂತೆ ಎಂದಾಕ್ಷಣ ನಾವು ಅವರ ಕ್ರಿಕೆಟ್ ಜೀವನದ ಸಾಧನೆ ಕುರಿತಂತೆ ಮಾತನಾಡಿದ ಹೊರಟಿದ್ದೇವೆ ಎಂದಲ್ಲ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕ್ರಿಕೆಟಿಗರ ವೈಯಕ್ತಿಕ ಜೀವನದ ಕುರಿತಂತೆ. ಪ್ರೀತಿಗಾಗಿ ಧರ್ಮವನ್ನು ನೋಡದೆ ಪರ ಧರ್ಮಿಯರನ್ನು ಕೂಡ ಮದುವೆಯಾಗಿರುವ ಕ್ರಿಕೆಟಿಗರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನೋಡೋಣ ಬನ್ನಿ.

ಮೊಹಮ್ಮದ್ ಕೈಫ್; ಮೋಹಮ್ಮದ್ ಕೈಫ್ ರವರು 2002 ರ ಇಂಗ್ಲೆಂಡ್ ವಿರುದ್ಧದ ನಾಟ್ ವೆಸ್ಟ್ ಸರಣಿ ಸೇರಿದಂತೆ ಹಲವಾರು ಸರಣಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು. ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಹಲವಾರು ವರ್ಷಗಳ ಕಾಲ ಕ್ರಿಕೆಟ್ ಆಡದಿದ್ದರೂ ಕೂಡ ಪ್ರಮುಖ ಆಟಗಾರರ ಹೆಸರಲ್ಲಿ ತಮ್ಮ ಹೆಸರನ್ನು ಶಾಮೀಲಾಗಿಸಿದ್ದಾರೆ. ಇನ್ನು ಇವರು 2011 ರಲ್ಲಿ ಪೂಜಾ ಯಾದವ್ ಎನ್ನುವ ಹಿಂದೂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರಿದ್ದಾರೆ. ಸದ್ಯಕ್ಕೆ ಕೈಫ್ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುವರಾಜ್ ಸಿಂಗ್; ಟಿ-ಟ್ವೆಂಟಿ ಹಾಗೂ ಏಕದಿನ ವರ್ಲ್ಡ್ ಕಪ್ ಅನ್ನು ಭಾರತೀಯ ಕ್ರಿಕೆಟ್ ತಂಡ ಗೆಲ್ಲಲು ಪ್ರಮುಖ ಕಾರಣರಾಗಿದ್ದವರು ಯುವರಾಜ್ ಸಿಂಗ್ ರವರು. ಸ್ಟುವರ್ಟ್ ಬ್ರಾಡ್ ಪ್ರವರ ಆರು ವಸ್ತುಗಳ ಮುಂದೆ ಆರು ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದವರು. ಇನ್ನು ಇವರು ಕ್ರಿಶ್ಚಿಯನ್ ಧರ್ಮದ ಹೇಝಲ್ ಕೀಚ್ ರವರನ್ನು ರವರನ್ನು ಮದುವೆಯಾಗಿದ್ದಾರೆ.

ಜಹೀರ್ ಖಾನ್; ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಸರ್ವ ಶ್ರೇಷ್ಠ ಸ್ವಿಂಗ್ ಬೌಲರ್ ಆಗಿರುವ ಜಹೀರ್ ಖಾನ್ ರವರು ಸಾಕಷ್ಟು ಸಾಧನೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಇನ್ನು ಇವರು ನಟಿ ಹಾಗೂ ಹಿಂದೂ ಧರ್ಮ ಮೂಲದ ಮರಾಠಿ ಕುಟುಂಬದ ಹುಡುಗಿ ಯಾಗಿರುವ ಸಾಗರಿಕಾ ಘಾಟ್ಗೆ ರವರನ್ನು 2017 ರಲ್ಲಿ ಮದುವೆಯಾಗುವ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮನ್ಸೂರ್ ಅಲಿ ಖಾನ್ ಪಟೌಡಿ; ನವಾಬ ವಂಶದ ಮನ್ಸೂರ್ ಆಲಿ ಖಾನ್ ಪಟೌಡಿ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಅದ್ಭುತ ಆಟದಿಂದಾಗಿ ಭಾರತೀಯ ಕ್ರಿಕೆಟ್ ತಂಡದ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದಂತಹ ಅಧ್ಯಾಯವನ್ನು ಬರೆದಿದ್ದಾರೆ. ಇನ್ನು ಇವರು ಅಭಿನೇತ್ರಿ ಹಿಂದೂ ಧರ್ಮದ ಶರ್ಮಿಳಾ ಟಾಗೋರ್ ಅವರನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಪ್ರೀತಿಗೆ ಯಾವ ಧರ್ಮದ ಅಣೆಕಟ್ಟು ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಪಟೌಡಿ ರವರು 2011 ರಲ್ಲಿ ಮರಣವನ್ನು ಹೊಂದಿದ್ದಾರೆ.

ದಿನೇಶ್ ಕಾರ್ತಿಕ್; ದಿನೇಶ್ ಕಾರ್ತಿಕ್ ರವರ ಮೊದಲ ಮದುವೆ ಯಶಸ್ವಿ ಆಗಿರದ ಹಿನ್ನೆಲೆಯಲ್ಲಿ ಯಶಸ್ವಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ರವರನ್ನು 2015 ರಲ್ಲಿ ಮದುವೆಯಾಗುತ್ತಾರೆ. ದೀಪಿಕಾ ಪಳ್ಳಿಕಲ್ ರವರು ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ.

ಮೊಹಮ್ಮದ್ ಅಜರುದ್ದಿನ್; ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಹಲವಾರು ವಿವಾದಾತ್ಮಕ ವಿಚಾರಗಳ ರಾಜ ಆಗಿರುವ ಮೊಹಮ್ಮದ್ ಅದರಲ್ಲಿ ಅವರು ತಮ್ಮ ಮೊದಲನೇ ಪತ್ನಿ ನೌರಿನ್ ಗೆ 1996 ರಲ್ಲಿ ವಿವಾಹ ವಿಚ್ಛೇದನವನ್ನು ನೀಡಿ ತಾವು ಪ್ರೀತಿಸಿರುವ ಬಾಲಿವುಡ್ ನಟಿ ಸಂಗೀತ ಬಿಜ್ಲಾನಿ ರವರನ್ನು ಮದುವೆಯಾಗುತ್ತಾರೆ. ಆದರೆ ಇವರಿಬ್ಬರ ವಿವಾಹ ಸಂಬಂಧವು ಕೂಡ ಹೆಚ್ಚು ವರ್ಷಗಳ ಕಾಲ ಉಳಿಯಲಿಲ್ಲ.

ಅಜಿತ್ ಅಗರ್ಕರ್; ಭಾರತೀಯ ಕ್ರಿಕೆಟ್ ತಂಡದಲ್ಲಿ ಫಾಸ್ಟ್ ಬೌಲರ್ ಆಗಿ ಅಜಿತ್ ಅಗರ್ಕರ್ ರವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇನ್ನು ಮರಾಠಿ ಕುಟುಂಬಕ್ಕೆ ಸೇರಿರುವ ಅಜಿತ್ ಅಗರ್ಕರ್ ಅವರು ತಮ್ಮ ಸ್ನೇಹಿತನ ಸಹೋದರಿ ಆಗಿರುವ ಮುಸ್ಲಿಂ ಕುಟುಂಬದ ಫಾತಿಮಾ ರವರನ್ನು 2007 ರಲ್ಲಿ ಮದುವೆಯಾಗುತ್ತಾರೆ. ಕ್ರಿಕೆಟಿಗರ ಈ ನಿರ್ಧಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.