ಈ ಬಾರಿಯ ಐಪಿಎಲ್ ನಲ್ಲಿ ನಡೆದಿರುವ ಯಾರು ಊಹಿಸಲಾಗದ ಟಾಪ್ 5 ಘಟನೆಗಳು ಯಾವ್ಯಾವು ಗೊತ್ತೇ??

ಈ ಬಾರಿಯ ಐಪಿಎಲ್ ನಲ್ಲಿ ನಡೆದಿರುವ ಯಾರು ಊಹಿಸಲಾಗದ ಟಾಪ್ 5 ಘಟನೆಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈ ಬಾರಿಯ ಐಪಿಎಲ್ ಮುಗಿದು ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ರನ್ನರ್ ಅಪ್ ಆಗಿದೆ. ಈ ಬಾರಿ ಐಪಿಎಲ್ ನಲ್ಲಿ 5 ಊಹಿಸಲಾಗದ ಘಟನೆಗಳು ನಡೆದಿವೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ..

ಮೊದಲನೇದಾಗಿ ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅವರು ಮೂರು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ. ಈ ಬಾರಿ ಅವರು ಕೇವಲ 18 ಪಂದ್ಯಗಳಿಂದ ಕೇವಲ 341 ರನ್ ಗಳಿಸಿದ್ದಾರೆ. ಎರಡನೇದಾಗಿ ಈ ಬಾರಿ ಚೆನ್ನೈ ತಂಡ ಜಡೇಜಾ ಅವರನ್ನು ನಾಯಕನನ್ನಾಗಿ ಘೋಷಿಸಿತ್ತು. ಆದರೆ ಅವರ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡುವ ಮೂಲಕ ಅವರನ್ನು ತಂಡ ನಾಯಕತ್ವದಿಂದ ವಜಾಗೊಳಿಸಿದೆ. ಅವರ ವೈಯಕ್ತಿಕ ಪ್ರದರ್ಶನ ಕೂಡ ಅಷ್ಟೊಂದು ಉತ್ತಮವಾಗಿರಲಿಲ್ಲ. ಮೂರನೇದಾಗಿ ರಾಯುಡು ಈ ಬಾರಿ ಐಪಿಎಲ್ ಮುಗಿದ ನಂತರ ಟ್ವಿಟರ್ನಲ್ಲಿ ಇದು ನನ್ನ ಕೊನೆಯ ಐಪಿಎಲ್ ಎಂಬುದಾಗಿ ಟ್ವೀಟ್ ಮಾಡಿದ್ದರು. ಹಾಗೂ ನಾನು ಮುಂದಿನ ಐಪಿಎಲ್ ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂಬುದಾಗಿ ಟ್ವೀಟ್ ಮಾಡಿದ್ದರು. ನಂತರ ಚೆನ್ನೈ ತಂಡದ ಸಿಇಓ ಅವರು ನಿವೃತ್ತಿ ಹೊಂದುತ್ತಿಲ್ಲ ಎಂಬುದಾಗಿ ಮತ್ತೆ ಕ್ಲಾರಿಫಿಕೇಶನ್ ನೀಡಿದ್ದರು ಆ ಸಂದರ್ಭದಲ್ಲಿ ರಾಯ್ಡು ಮಾಡಿರುವ ಟ್ವೀಟ್ ಅನ್ನು ಕೂಡ ಡಿಲೀಟ್ ಮಾಡಿದ್ದರು.

ನಾಲ್ಕನೇದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಯಜುವೇಂದ್ರ ಚಹಾಲ್ ರವರು ಕಳೆದ ಬಾರಿ ಆರ್ಸಿಬಿ ತಂಡದಲ್ಲಿದ್ದರು. ಆದರೆ ಈ ಬಾರಿ ಅವರು ರಾಜಸ್ಥಾನ ರಾಜಸ್ಥಾನದಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ರಾಜಸ್ತಾನ ರಾಯಲ್ಸ್ ಹಾಗು ಆರ್ಸಿಬಿ ತಂಡದ ನಡುವಿನ ಪಂದ್ಯಾಟದಲ್ಲಿ ವಿರಾಟ್ ಕೊಹ್ಲಿ ರವರನ್ನು ಚಹಲ್ ರವರು ರನೌಟ್ ಮಾಡಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು. ಇನ್ನು ಕೊನೆಯದಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ನೋಬಾಲ್ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತಿತ್ತು. ಈ ಸಂದರ್ಭದಲ್ಲಿ ಅಂಪೈರ್ಗಳು ತಪ್ಪು ನಿರ್ಣಯ ನೀಡಿದ್ದರಿಂದಾಗಿ ಡೆಲ್ಲಿ ತಂಡದ ಕಪ್ತಾನ ರಿಷಬ್ ಪಂತ್ ತಂಡದ ಆಟಗಾರರನ್ನು ಪೆವಿಲಿಯನ್ಗೆ ಹಿಂದಿರುಗುವಂತೆ ಸನ್ನಿ ನೀಡಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಗೆ ಕಾರಣವಾಗಿತ್ತು ಹಾಗೂ ಈ ಐಪಿಎಲ್ನ ದೊಡ್ಡ ವಿ’ವಾದಾತ್ಮಕ ವಿಚಾರವೂ ಕೂಡ ಇದೇ ಆಗಿದೆ. ಈ ವಿಚಾರಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.