ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತನ್ನದೇ ಆದ ಲೆಕ್ಕಾಚಾರದ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ಮಿಂಚಿದ ಎಲ್ಲಾ ಆಟಗಾರರನ್ನು ಸೇರಿಸಿ ತಂಡ ಕಟ್ಟಿದ ಸಚಿನ್. ಆಯ್ಕೆಯಾದವರು ಯಾರ್ಯಾರು ಗೊತ್ತೆ??

817

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಸಚಿನ್ ತೆಂಡೂಲ್ಕರ್ ಅವರನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಕ್ರಿಕೆಟ್ ಜಗತ್ತಿನ ದೇವರು ಎನ್ನುವುದಾಗಿ ಕರೆಯಲಾಗುತ್ತದೆ. ಅವರು ನಿರ್ಮಿಸಿರುವ ಅದೆಷ್ಟು ದಾಖಲೆಗಳನ್ನು ಇಂದಿಗೂ ಕೂಡ ಯಾರಿಂದಲೂ ಸರಿಗಟ್ಟಲು ಕೂಡ ಸಾಧ್ಯವಾಗಿಲ್ಲ. ಸದ್ಯಕ್ಕೆ ಈ ಬಾರಿಯ ಐಪಿಎಲ್ ಮುಗಿಯುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಅವರು ಈ ಬಾರಿಯ ಐಪಿಎಲ್ ನ ಬೆಸ್ಟ್ ಪ್ಲೇಯಿಂಗ್ 11ನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಪ್ರಕಟಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಆಗಿದೆ. ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಕಪ್ತಾನನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ಆರಂಭಿಕ ಆಟಗಾರರಾಗಿ ರಾಜಸ್ಥಾನ್ ನ ಜಾಸ್ ಬಟ್ಲರ್ ಹಾಗೂ ಪಂಜಾಬ್ ತಂಡದ ಶಿಖರ್ ಧವನ್ ಅವರು ಆಯ್ಕೆಯಾಗಿದ್ದಾರೆ. ಬಟ್ಲರ್ ರವರು 17 ಪಂದ್ಯಗಳಿಂದ 863 ರನ್ನುಗಳನ್ನು ಬಾರಿಸಿ ಆರೆಂಜ್ ಕ್ಯಾಪ್ ಹೊಂದಿದ್ದರೆ ಶಿಖರ್ ಧವನ್ 14 ಪಂದ್ಯಗಳಿಂದ 460 ರನ್ನುಗಳನ್ನು ಬಾರಿಸಿದ್ದಾರೆ. ಅತಿ ಹೆಚ್ಚು ರನ್ನುಗಳನ್ನು ಬಾರಿಸಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಕ್ನೋ ತಂಡದ ನಾಯಕ ಆಗಿರುವ ಕೆಎಲ್ ರಾಹುಲ್ ರವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಲ್ಲಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ರವರು ನಂತರ ಕ್ರಮಾಂಕದಲ್ಲಿ ಅನುಗುಣವಾಗಿ ಲಿಯಾನ್ ಲಿವಿಂಗ್ಸ್ಟೋನ್ ಹಾಗೂ ದಿನೇಶ್ ಕಾರ್ತಿಕ್ ರವರನ್ನು ಸಚಿನ್ ಆಯ್ಕೆ ಮಾಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಆಲ್-ರೌಂಡರ್ ರಶೀದ್ ಖಾನ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬೂಮ್ರಾ ಹಾಗೂ ಪರ್ಪಲ್ ಕ್ಯಾಪ್ ವಿನ್ನರ್ ಆಗಿರುವ ಯಜುವೇಂದ್ರ ಚಹಲ್ ರವರನ್ನು ಆಯ್ಕೆಮಾಡಲಾಗಿದೆ. ವನಿಂದು ಹಸರಂಗ ಸೇರಿದಂತೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರವರಂತಹ ಅನುಭವಿ ಆಟಗಾರರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಿಕೊಂಡಿಲ್ಲ. ಒಟ್ಟಾರೆಯಾಗಿ ಸಚಿನ್ ತೆಂಡೂಲ್ಕರ್ ರವರ ಬೆಸ್ಟ್ ಪ್ಲೇಯಿಂಗ್ 11 ನೋಡುವುದಾದರೆ ಜಾಸ್ ಬಟ್ಲರ್ ಶಿಖರ್ ಧವನ್ ಕೆ ಎಲ್ ರಾಹುಲ್ ಹಾರ್ದಿಕ್ ಪಾಂಡ್ಯ ಲಿಯಮ್ ಲಿವಿಂಗ್ಸ್ಟೋನ್ ದಿನೇಶ್ ಕಾರ್ತಿಕ್ ರಶೀದ್ ಖಾನ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಹಾಗೂ ಯಜುವೇಂದ್ರ ಚಹಾಲ್. ಸಚಿನ್ ಅವರ ಈ ಆಯ್ಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Get real time updates directly on you device, subscribe now.