ವೃಷಭ ರಾಶಿಯಲ್ಲಿ ಬುಧ-ಆದಿತ್ಯ ಯೋಗದಿಂದಾಗಿ ತುಂಬಾ ಅದೃಷ್ಟದ ಸಮಯವನ್ನು ಹೊಂದುವ ಮೂರು ರಾಶಿಯವರು ಯಾರ್ಯಾರು ಗೊತ್ತೇ?

ವೃಷಭ ರಾಶಿಯಲ್ಲಿ ಬುಧ-ಆದಿತ್ಯ ಯೋಗದಿಂದಾಗಿ ತುಂಬಾ ಅದೃಷ್ಟದ ಸಮಯವನ್ನು ಹೊಂದುವ ಮೂರು ರಾಶಿಯವರು ಯಾರ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಬಾರಿ ಗ್ರಹಗಳ ರಾಶಿ ಬದಲಾವಣೆ ಆದಾಗಲೆಲ್ಲ ಕೆಲವೊಂದು ರಾಶಿಯ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಇನ್ನು ಈ ಬಾರಿ ಬುಧ ಹಾಗೂ ಸೂರ್ಯ ಗ್ರಹಗಳು ವೃಷಭರಾಶಿಯಲ್ಲಿ ಒಟ್ಟಿಗೆ ಸೇರಿವೆ. ಬುಧ ಗ್ರಹ ವಕ್ರವಾದ ಚಾಲನೆಯಲ್ಲಿದ್ದು ಜೂನ್ 3ಕ್ಕೆ ನೇರವಾಗಿ ಚಲಿಸಲಿದ್ದು ಜುಲೈ 2ಕ್ಕೆ ಮಿಥುನರಾಶಿಗೆ ಚಲಿಸಲಿದ್ದಾನೆ. ಸೂರ್ಯ ಗ್ರಹ ಮೇ 15ಕ್ಕೆ ವೃಷಭರಾಶಿಗೆ ಕಾಲಿಟ್ಟಿದ್ದಾನೆ ಜೂನ್ 15 ಈ ರಾಶಿಯಿಂದ ಮಿಥುನ ರಾಶಿಗೆ ಸ್ಥಾನಪಲ್ಲಟವನ್ನು ಮಾಡಲಿದ್ದಾನೆ. ಇಲ್ಲಿಯವರೆಗೂ ಬುಧಾದಿತ್ಯ ಯೋಗ ಮೂರು ರಾಶಿಯವರ ಮೇಲೆ ಇರಲಿದೆ. ಹಾಗಿದ್ದರೆ 3 ರಾಶಿಯವರು ಯಾರೆಲ್ಲ ಅವರಿಗೆ ಸಿಗುವ ಲಾಭಗಳು ಏನೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ; ಬುಧಾದಿತ್ಯ ಯೋಗವು ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ತರುವುದು ಮಾತ್ರವಲ್ಲದೆ ಉದ್ಯೋಗದಲ್ಲಿಯೂ ಕೂಡ ಸಾಕಷ್ಟು ಯಶಸ್ಸನ್ನು ತಂದುಕೊಡುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟವರಿಗೆ ಕೂಡ ಯಶಸ್ಸು ಸಿಗಲೆಂದು ನಿಮ್ಮ ಮಾತಿನ ಪ್ರಭಾವದಿಂದ ಯಾವ ಕೆಲಸಗಳು ಕೂಡ ನಡೆಯಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಕೈಯಿಂದ ದೊಡ್ಡ ಕಾರ್ಯ ಸಾಧನೆಯಾಗಲಿದೆ.

ಕರ್ಕ ರಾಶಿ; ನಿಮ್ಮ ಜೀವನದಲ್ಲಿ ಆರ್ಥಿಕ ಸಂಕಟ ಗಳು ದೂರವಾಗಲಿದೆ ನಿಮ್ಮ ಕೈಗೆ ಹಲವಾರು ಮೂಲಗಳಿಂದ ಹಣ ಹರಿದು ಬರಲಿದೆ. ವ್ಯಾಪಾರ ವ್ಯವಹಾರ ಮಾಡಿಕೊಂಡಿರುವವರಿಗೆ ದೊಡ್ಡಮಟ್ಟದ ಬೇಡಿಕೆ ಸಿಗಲಿದೆ ಹಾಗೂ ಅತಿ ಶೀಘ್ರದಲ್ಲಿಯೇ ನಿಮ್ಮ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಉಂಟಾಗಲಿದೆ. ಒಟ್ಟಾರೆಯಾಗಿ ಬುಧಾದಿತ್ಯ ಯೋಗ ನಿಮ್ಮ ಜೇಬನ್ನು ತುಂಬಿಸಲಿದೆ.

ಸಿಂಹ ರಾಶಿ; ಹಲವಾರು ಮೂಲಗಳಿಂದ ಸಿಂಹರಾಶಿಯವರಿಗೆ ಹಣದ ಹರಿವು ಬರಲಿದೆ. ಉದ್ಯೋಗದಲ್ಲಿ ಕೇವಲ ಸಂಭಾವನೆಯ ಹೆಚ್ಚಳ ಮಾತ್ರವಲ್ಲದೆ ಎಲ್ಲರೂ ನಿಮ್ಮ ಕಾರ್ಯಕ್ಕೆ ಗೌರವವನ್ನು ಕೂಡ ನೀಡಲಿದ್ದಾರೆ. ಉದ್ಯೋಗದಲ್ಲಿ ನಿಮ್ಮ ಕೆಲಸದಿಂದಾಗಿ ನೀವು ನಿಮ್ಮ ಉನ್ನತ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ನಿಮ್ಮ ರಾಶಿ ಕೂಡ ಇದರಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.