ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸ್ಟಾರ್ ಆಟಗಾರರನ್ನು ಹೊರಗಿಟ್ಟು ಆಫ್ರಿಕಾ ಸರಣಿಗೆ ಯುವತಂಡ ಘೋಷಣೆ ಮಾಡಿದ ನಿಖಿಲ್ ಚೋಪ್ರಾ, ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??

6,524

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಪ್ಲೇ ಆಫ್ ರೇಸ್ ಹೆಚ್ಚು ಕಾವು ಪಡೆಯುತ್ತಿದೆ.ಮುಂದಿನ ಭಾನುವಾರ ಎನ್ನುವಷ್ಟರಲ್ಲಿ ಐಪಿಎಲ್ 2022ರ ನೂತನ ಚಾಂಪಿಯನ್ ಯಾರು ಎಂಬುದು ಜಗಜ್ಜಾಹೀರಾಗಿರುತ್ತದೆ. ಇನ್ನು ಐಪಿಎಲ್ ಮುಗಿದ ನಂತರ ಭಾರತ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಬಯೋ ಬಬಲ್ ಕಾರಣ ಭಾರತದ ಎರಡು ತಂಡಗಳು ಏಕಕಾಲದಲ್ಲಿ ಕ್ರಿಕೆಟ್ ಆಡುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿ ನಡೆಯುವ ಕಾರಣ ಸಂಪೂರ್ಣ ಯುವ ತಂಡ ಹಾಗೂ ಐಪಿಎಲ್ ನಲ್ಲಿ ಉತ್ತಮ ಸಾಧನೆಗೈದ ಆಟಗಾರರನ್ನು ಆಯ್ಕೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಸಂಬಂಧ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ನಿಖಿಲ್ ಚೋಪ್ರಾ ಸಂಪೂರ್ಣ ಯುವ ತಂಡವನ್ನು ತಂಡಕ್ಕೆ ಅನುಭವಿ ಆಟಗಾರ ಶಿಖರ್ ಧವನ್ ರನ್ನು ನಾಯಕನನ್ನಾಗಿಸಿದ್ದಾರೆ. ಬನ್ನಿ ಆ ತಂಡದಲ್ಲಿ ಸ್ಥಾನ ಪಡೆದ ಉಳಿದ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ಈ ತಂಡದಲ್ಲಿ ಐವರು ತಜ್ಞ ಬ್ಯಾಟ್ಸ್ಮನ್ ಗಳು, ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸಮನ್ ಗಳು, ಇಬ್ಬರು ಆಲ್ ರೌಂಡರ್ ಗಳು ಹಾಗೂ ಇಬ್ಬರು ಸ್ಪಿನ್ನರ್ ಗಳು ಮತ್ತು ಮೂವರು ವೇಗಿಗಳಿಗೆ ಸ್ಥಾನ ಕಲ್ಪಿಸಿದ್ದಾರೆ. ಆಡುವ ಹನ್ನೊಂದರ ಬಳಗ ಸಹ ಸಮತೋಲನದಿಂದ ಕೂಡಿರಲಿದೆ. ಆದರೇ ದಕ್ಷಿಣ ಆಫ್ರಿಕಾದ ಪಿಚ್ ನಲ್ಲಿ ಈ ಅನನುಭವಿ ಆಟಗಾರರ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಕುತೂಹಲವಾಗಿದೆ. ತಂಡ ಇಂತಿದೆ – ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ಪೃಥ್ವಿ ಶಾ, ರಾಹುಲ್ ತ್ರಿಪಾಠಿ,ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್,ತಿಲಕ್ ವರ್ಮಾ, ದಿನೇಶ್ ಕಾರ್ತಿಕ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆವೇಶ್ ಖಾನ್, ಉಮ್ರಾನ್ ಮಲೀಕ್, ಖಲೀಲ್ ಅಹಮದ್.

Get real time updates directly on you device, subscribe now.