ಹುಡುಗಿಯ ಮನೆಯವರ ವಿರೋಧಧ ನಡುವೆಯೂ ಕೂಡ ಮಗುವಿನೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಜೋಡಿಗೆ ಹುಡುಗಿ ಪೋಷಕರು ಎಂತಹ ಪರಿಸ್ಥಿತಿ ತಂದಿದ್ದಾರೆ ಗೊತ್ತೇ??

ಹುಡುಗಿಯ ಮನೆಯವರ ವಿರೋಧಧ ನಡುವೆಯೂ ಕೂಡ ಮಗುವಿನೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಜೋಡಿಗೆ ಹುಡುಗಿ ಪೋಷಕರು ಎಂತಹ ಪರಿಸ್ಥಿತಿ ತಂದಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿಮಾದಲ್ಲಿ ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎನ್ನುವುದಾಗಿ ಹೇಳಿರುತ್ತಾರೆ ಆದರೆ ನಿಜ ಜೀವನದಲ್ಲಿ ಇದು ಅನ್ವಯಿಸುವುದಿಲ್ಲ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾದರೆ ಮಾತ್ರ ಇಂದಿನ ಜಗತ್ತಿನಲ್ಲಿ ಜೀವಂತವಾಗಿ ಅಥವಾ ಸುಖವಾಗಿ ಬದುಕಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗಿರುವ ಹಲವಾರು ಜೋಡಿಗಳು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿರುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಕೆಲವೊಂದು ಪ್ರಕರಣಗಳನ್ನು ನ್ಯೂಸ್ ಪೇಪರ್ ನಲ್ಲಿ ನೋಡಿದಾಗ ನಿಜಕ್ಕೂ ಕೂಡ ಪ್ರೀತಿಸಿ ಮದುವೆಯಾಗುವುದು ಬೇಡವೇ ಬೇಡ ಎಂಬ ಮನೋಭಾವನೆ ಮೂಡುವಂತೆ ಮಾಡುತ್ತದೆ.

ಹೌದು ಗೆಳೆಯರೆ ಹೈದರಾಬಾದ್ನ ಬೇಗುಂ ಬಜಾರ್ ನಲ್ಲಿ ನಡೆದಿರುವಂತಹ ಈ ಒಂದು ಘಟನೆ ಈಗ ಈ ಹೇಳಿಕೆಗೆ ಜೀವಂತ ಸಾಕ್ಷಿಯಾಗಿದೆ. ಹೌದು ಗೆಳೆಯರೇ ನೀರಜ್ ಪನ್ವಾರ್ ಎನ್ನುವ 21 ವರ್ಷದ ಯುವಕ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮದುವೆಗೆ ಹುಡುಗಿ ಅವರ ಮನೆಯವರಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು ವಿರೋಧದ ನಡುವೆಯೂ ಕೂಡ ನೀರಜ್ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದ.

ಇನ್ನು ನೀರಜ್ ಬೇಗುಂ ಬಜಾರ್ ನಲ್ಲಿ ಒಂದು ಅಂಗಡಿಯನ್ನು ಕೂಡ ಇಟ್ಟುಕೊಂಡಿದ್ದ. ಇನ್ನು ಈ ದಂಪತಿಗಳಿಗೆ ಎರಡೂವರೆ ತಿಂಗಳ ಚಿಕ್ಕ ಮಗು ಕೂಡ ಇತ್ತು. ಈ ಸಂದರ್ಭದಲ್ಲಿ ಆಗ ಬಾರದಂತಹ ಅನಾಚಾರ ನಡೆದುಬಿಟ್ಟಿದೆ. ಹೌದು ಗೆಳೆಯರೇ ಬೇಗುಂ ಬಜಾರ್ ನಲ್ಲಿ ಐದು ಜನ ಹುಡುಗರ ಗುಂಪೊಂದು ನೀರಜ್ ನನ್ನು ಎಲ್ಲರ ಎದುರು ಶುಕ್ರವಾರ ರಾತ್ರಿ 7.30 ರ ಸುಮಾರಿಗೆ ಮಾರ’ಕಾಸ್ತ್ರಗಳಿಂದ ಹಲ್ಲೆ ಮಾಡಿ ಆತನ ಉಸಿರು ನಿಲ್ಲಿಸಿದ್ದಾರೆ. ಈ ಕುರಿತಂತೆ ನೀರಜ್ ನ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಹುಡುಗಿಯ ಮನೆಯವರೇ ಈ ಕೆಲಸವನ್ನು ಮಾಡಿಸಿದ್ದಾರೆ ಎಂಬುದಾಗಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಈಗಾಗಲೇ ತನಿಖೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಇದರ ಹಿಂದಿನ ಕೈವಾಡ ಯಾರದ್ದು ಎಂಬುದು ತಿಳಿದುಬರಲಿದೆ ಎಂಬುದಾಗಿ ಪೊಲೀಸರು ಭರವಸೆ ವ್ಯಕ್ತಪಡಿಸಿದ್ದಾರೆ.