ಉತ್ತಮ ಫಾರ್ಮ್ ಗೆ ಮರಳಿದ ಕೊಹ್ಲಿ ಕಡೆಯಿಂದ ಅಭಿಮಾನಿಗಳಿಗೆ ಕಹಿ ಸುದ್ದಿ, ಶಾಕ್ ನೀಡಿದ ವಿರಾಟ್ ನಿರ್ಧಾರ. ಏನು ಗೊತ್ತೇ??

ಉತ್ತಮ ಫಾರ್ಮ್ ಗೆ ಮರಳಿದ ಕೊಹ್ಲಿ ಕಡೆಯಿಂದ ಅಭಿಮಾನಿಗಳಿಗೆ ಕಹಿ ಸುದ್ದಿ, ಶಾಕ್ ನೀಡಿದ ವಿರಾಟ್ ನಿರ್ಧಾರ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ರವರನ್ನು ಕ್ರಿಕೆಟ್ ಜಗತ್ತಿನ ಚೇಸಿಂಗ್ ಮಾಸ್ಟರ್ ಅಥವಾ ರನ್ ಮೆಷಿನ್ ಎನ್ನುವುದಾಗಿ ಕರೆಯುತ್ತಾರೆ. ಅಷ್ಟರಮಟ್ಟಿಗೆ ತಮ್ಮ ಬ್ಯಾಟಿಂಗ್ ಮೂಲಕವೇ ಸಾಧನೆ ಮಾಡಿ ತೋರಿಸಿದ್ದಾರೆ ವಿರಾಟ್ ಕೊಹ್ಲಿ ರವರು. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂಕಾಗಿ ಇದ್ದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನಿಂದ ಒಂದೇ ಒಂದು ಶತಕ ಕೂಡ ಬಂದಿರಲಿಲ್ಲ. ಇಷ್ಟೇ ಯಾಕೆ ಕಳೆದ ಬಾರಿಯ ಐಪಿಎಲ್ ನಲ್ಲಿ ಕೂಡ ಕೊಂಚ ಮಟ್ಟಿಗೆ ಮಂಕಾಗಿ ಆಡಿದ್ದರು.

ಈ ಬಾರಿಯಂತೂ ಸಂಪೂರ್ಣವಾಗಿ ಐಪಿಎಲ್ನಲ್ಲಿ ವಿಫಲರಾಗಿದ್ದರು ಎಂದರೆ ತಪ್ಪಾಗಲಾರದು. ಮೂರು ಬಾರಿ 0 ರನ್ನಿಗೆ ಔಟ್ ಕೂಡ ಆಗಿದ್ದರು. ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ ತಂಡದಿಂದ ಕೆಳಗಿಳಿಸಬೇಕು ಮುಂದಿನ ವಿ ಸೌತ್ ಆಫ್ರಿಕಾ ಪಂದ್ಯದಿಂದ ಹೊರಗಿಡಬೇಕು ಎನ್ನುವುದಾಗಿ ಕೆಲವರು ಮಾತನಾಡಲು ಆರಂಭಿಸಿದರು. ಆದರೆ ಈ ಎಲ್ಲಾ ಟೀಕಾಕಾರರಿಗೆ ವಿರಾಟ್ ಕೊಹ್ಲಿ ಇರುವರು ಗುಜರಾತ್ ಟೈಟನ್ಸ್ ತಂಡದ ವಿರುದ್ಧ 54 ಎಸೆತಗಳ ಮುಂದೆ 73 ರನ್ನುಗಳನ್ನು ಬಾರಿಸುವ ಮೂಲಕ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ ಇದು ಅಭಿಮಾನಿಗಳು ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಮನಸ್ಸಿನಲ್ಲಿ ಸಾಕಷ್ಟು ಸಂತೋಷವನ್ನು ಮೂಡಿಸಿದೆ. ಇನ್ನು ಈಗಾಗಲೇ ತಮ್ಮ ಕಂಬ್ಯಾಕ್ ಘೋಷಿಸಿರುವ ವಿರಾಟ್ ಕೊಹ್ಲಿ ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಕುರಿತಂತೆ ಈ ಹಿಂದೆ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ಅವರು ಕೂಡ ಇದರ ಕುರಿತಂತೆ ಮಾತನಾಡಿದ್ದರು.

ಹೌದು ಗೆಳೆಯರೇ ಕಳೆದ ಹಲವಾರು ವರ್ಷಗಳಿಂದ ವಿರಾಟ್ ಕೊಹ್ಲಿ ರವರು ಸತತವಾಗಿ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಹಾಗೂ ನಾಯಕನಾಗಿ ಬಹುತೇಕ ಎಲ್ಲಾ ಸರಣಿಗಳಲ್ಲಿ ಕೂಡ ವಿಶ್ರಾಂತಿ ಇಲ್ಲದಂತೆ ಆಡಿದ್ದಾರೆ. ಹೀಗಾಗಿ ಐಪಿಎಲ್ ಮುಗಿದ ನಂತರ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಸರಣಿಗಳಲ್ಲಿ ಆಡುವುದರಿಂದ ಹಿಮ್ಮುಖ ರಾಗಿದ್ದಾರೆ. ಹೌದು ಗೆಳೆಯರೆ ವಿರಾಟ್ ಕೊಹ್ಲಿ ರವರು ಮೂರು ತಿಂಗಳ ವಿಶ್ರಾಂತಿಯನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಈ ಕುರಿತಂತೆ ಸ್ವತಹ ವಿರಾಟ್ ಕೊಹ್ಲಿ ಅವರು ಕೋಚ್ ರಾಹುಲ್ ದ್ರಾವಿಡ್ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮುಂದಿನ ಏಷ್ಯಾಕಪ್ ಹಾಗೂ ಟಿ20ವಿಶ್ವಕಪ್ ಗಾಗಿ ಮಾನಸಿಕವಾಗಿ ವಿರಾಟ್ ಕೊಹ್ಲಿ ರವರು ತಯಾರಾಗುವ ಈ ವಿಶ್ರಾಂತಿ ಸಮಯವನ್ನು ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.