ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಮೂರು ಭಾರತೀಯ ನಾಯಕರ ತಂಡಗಳು, ಈ ಮೂರು ಘಟಾನುಘಟಿಗಳ ಮುಂದಿನ ನಡೆ ಏನು ಗೊತ್ತೇ??

ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಮೂರು ಭಾರತೀಯ ನಾಯಕರ ತಂಡಗಳು, ಈ ಮೂರು ಘಟಾನುಘಟಿಗಳ ಮುಂದಿನ ನಡೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರ ಪ್ಲೇ ಆಫ್ ರೇಸ್ ಬಹುತೇಕ ಫೈನಲ್ ಆಗಿದೆ. ಕೊನೆಯ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯೆ ತೀವ್ರ ಪೈಪೋಟಿ ಇದೆ. ಮುಂಬೈ ಇಂಡಿಯನ್ಸ್ ಈಗ ಕಿಂಗ್ ಮೇಕರ್ ಆಗಿದ್ದು, ಆ ತಂಡ ಡೆಲ್ಲಿ ವಿರುದ್ಧ ಗೆದ್ದರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಸಲಿದೆ. ಸೋತರೇ ನಿರಾಯಾಸವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲಿದೆ. ಈ ನಡುವೆ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಮುಂದಿನ ನಿರ್ಧಾರ ಏನು ಎಂಬುದು ಸದ್ಯದ ಕೂತುಹಲವಾಗಿದೆ.

Follow us on Google News

1.ರೋಹಿತ್ ಶರ್ಮಾ – ಐದು ಭಾರಿ ಚಾಂಪಿಯನ್ ಆಗಿದ್ದ ಮುಂಬೈ ತಂಡ ಈ ಭಾರಿ ಕೊನೆಯ ಸ್ಥಾನದಲ್ಲಿ ಇದೆ. ಹೀಗಾಗಿ ರೋಹಿತ್ ಶರ್ಮಾ ಮುಂದೇನು ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ. ಭಾರತ ತಂಡದ ನಾಯಕರಾಗಿರುವ ಕಾರಣ ರೋಹಿತ್ ಬಹಳ ಒತ್ತಡದಲ್ಲಿ ದ್ದಾರೆ. ಹೀಗಾಗಿ ರೋಹಿತ್ ನಾಯಕತ್ವ ತ್ಯಜಿಸಿ ಕೇವಲ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮುಂದುವರೆಯುವ ಸಾಧ್ಯತೆ ಇದೆ.

2.ಮಹೇಂದ್ರ ಸಿಂಗ್ ಧೋನಿ – ಚೆನ್ನೈ ತಂಡದ ನಾಯಕ ಧೋನಿ ಟೂರ್ನಿಯ ಮೊದಲಾರ್ಧದಲ್ಲಿ ನಾಯಕತ್ವ ವಹಿಸಿರಲಿಲ್ಲ. ನಂತರ ನಾಯಕರಾದರೂ ತಂಡ ಉತ್ತಮ ಪ್ರದರ್ಶನ ತೋರಲಿಲ್ಲ. ಹಾಗಾಗಿ ಮುಂದಿನ ಸೀಸನ್ ನಲ್ಲಿ ಧೋನಿ ಯಾವ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

3.ಶ್ರೇಯಸ್ ಅಯ್ಯರ್ – ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈ ಭಾರಿ 12.5 ಕೋಟಿಗೆ ಸೇಲಾಗಿದ್ದರು. ಆದರೇ ಅವರ ಬ್ಯಾಟ್ ನಿಂದ ನೀರಿಕ್ಷಿತ ರನ್ ಬರಲಿಲ್ಲ. ಹಾಗಾಗಿ ಅವರ ಮುಂದಿನ ಸೀಸನ್ ನಲ್ಲಿ ಕೆಕೆಆರ್ ತಂಡದ ಮ್ಯಾನೇಜ್ ಮೆಂಟ್ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತ ತಂಡದ ಮ್ಯಾನೇಜ್ ಮೆಂಟ್ ಅತಿಯಾದ ಹಸ್ತಕ್ಷೇಪ ಸಹ ಕೆಕೆಆರ್ ತಂಡದ ಹಿನ್ನಡೆಗೆ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.