ಪ್ಲೇ ಆಫ್ ಹಂತಕ್ಕೆ ಏರಿದ್ದು ಆಯಿತು, ಮುಂದಿನ ಪಂದ್ಯಗಳು ಹೇಗಿರಲಿವೆ? ಯಾವಾಗ ಮತ್ತು ಯಾವ್ಯಾವ ಕ್ರೀಡಾಂಗಣದಲ್ಲಿ ನಡೆಯಲಿವೆ ಗೊತ್ತೇ?

ಪ್ಲೇ ಆಫ್ ಹಂತಕ್ಕೆ ಏರಿದ್ದು ಆಯಿತು, ಮುಂದಿನ ಪಂದ್ಯಗಳು ಹೇಗಿರಲಿವೆ? ಯಾವಾಗ ಮತ್ತು ಯಾವ್ಯಾವ ಕ್ರೀಡಾಂಗಣದಲ್ಲಿ ನಡೆಯಲಿವೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ಪ್ಲೇಆಫ್ ಹಂತಕ್ಕೆ ಯಾರು ತೇರ್ಗಡೆ ಆಗುತ್ತಾರೆ ಎನ್ನುವುದರ ಕುರಿತಂತೆ ಪರಿಪೂರ್ಣವಾದ ಉತ್ತರ ನಮಗೆ ಸಿಕ್ಕಿದೆ. ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಕೊನೆಗೂ ಕೂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿನ್ನೆ ಸೋಲುವುದರ ಮುಖಾಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಂತದ ಹಾದಿ ಸುಗಮವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 159 ರನ್ನುಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. ಇಶಾನ್ ಕಿಶನ್ ಹಾಗೂ ಟಿಮ್ ಡೇವಿಡ್ ರವರ ಭರ್ಜರಿ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡ ಈ ಗುರಿಯನ್ನು ಬೆನ್ನತ್ತುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಸಹಾಯವನ್ನು ಮಾಡಿದೆ. ಇನ್ನು ಇಂದು ಕೊನೆಯಲ್ಲಿದ್ದ ಪಂದ್ಯವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂಜಾಬ್ ತಂಡ ಆಡಲಿದೆ. ಇದು ಕೇವಲ ಔಪಚಾರಿಕ ಪಂದ್ಯವಾಗಿದ್ದು ಇದರಿಂದ ಯಾವುದೇ ಬದಲಾವಣೆಗಳು ಕ್ವಾಲಿಫೈಡ್ ಆಗಿರುವ ತಂಡಗಳ ನಡುವೆ ನಡೆಯುವುದಿಲ್ಲ. ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲನೇ ಸ್ಥಾನದಲ್ಲಿ ಗುಜರಾತ್ ಟೈಟನ್ಸ್ ತಂಡವಿದ್ದು ಎರಡನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡವಿದೆ. ಮೂರನೇ ಸ್ಥಾನದಲ್ಲಿ ಲಕ್ನೋ ಹಾಗೂ ನಾಲ್ಕನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಹಂತಕ್ಕೆ ರೆಡಿಯಾಗಿದೆ.

ಮೇ 24ರಂದು ಮೊದಲಿಗೆ ಕ್ವಾಲಿಫೈಯರ್ 1 ರಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇರುವ ಗುಜರಾತ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಸೆಣಸಾಡಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲಿಗೆ ತಲುಪಲಿದೆ. ಸೋತ ತಂಡ ಕ್ವಾಲಿಫೈರ್ 2 ಅನ್ನು ಆಡಳಿದೆ. ಮೇ 25ರಂದು ಇದೇ ಗ್ರೌಂಡ್ನಲ್ಲಿ( ಈಡನ್ ಗಾರ್ಡನ್ಸ್ ) ಲಕ್ನೋ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ. ಇವುಗಳಲ್ಲಿ ಸೋತ ತಂಡ ನೇರವಾಗಿ ಹೊರಕ್ಕೆ ಹೋಗಲಿದ್ದು ಗೆದ್ದ ತಂಡ ಕ್ವಾಲಿಫೈಯರ್ 2 ರಲ್ಲಿ ಈ ಮೊದಲು ಸೋತಿರುವ ತಂಡದೊಂದಿಗೆ ಮೇ 27ರಂದು ಅಹಮದಾಬಾದ್ ನಲ್ಲಿರುವ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಆಡಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದ್ದು ಮೇ 29ರಂದು ಅಹಮದಾಬಾದ್ ನಲ್ಲಿರುವ ನರೇಂದ್ರಮೋದಿ ಸ್ಟೇಡಿಯಂನಲ್ಲಿ 8 ಗಂಟೆ ರಾತ್ರಿಗೆ ಫೈನಲ್ನಲ್ಲಿ ಆಡಲಿದೆ. ಇವುಗಳಲ್ಲಿ ನಿಮ್ಮ ನೆಚ್ಚಿನ ತಂಡ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ತಪ್ಪದೇ ತಿಳಿಸಿ.