ರಾಷ್ಟ್ರಗೀತೆ ಕಡ್ಡಾಯ ಗೊಳಿಸಿದ ಒಂದೇ ವಾರದಲ್ಲಿ ಮದರಾಸಗಳಿಗೆ ಮತ್ತೊಂದು ಶಾಕ್ ನೀಡಿದ ಯೋಗಿ ಸರ್ಕಾರ. ಹೊಸ ಆದೇಶದಲ್ಲಿ ಏನೆಲ್ಲಾ ಇದೆ ಗೊತ್ತೇ??

ರಾಷ್ಟ್ರಗೀತೆ ಕಡ್ಡಾಯ ಗೊಳಿಸಿದ ಒಂದೇ ವಾರದಲ್ಲಿ ಮದರಾಸಗಳಿಗೆ ಮತ್ತೊಂದು ಶಾಕ್ ನೀಡಿದ ಯೋಗಿ ಸರ್ಕಾರ. ಹೊಸ ಆದೇಶದಲ್ಲಿ ಏನೆಲ್ಲಾ ಇದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಜಯಗಳಿಸಿದ ಯೋಗಿ ಆದಿತ್ಯನಾಥ್ ಜೀ ತಮ್ಮ ಎರಡನೇ ಸರ್ಕಾರದ ಅವಧಿಯಲ್ಲಿ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಜನತೆಯ ಗಮನಸೆಳೆಯುತ್ತಿದೆ. ಎಲ್ಲರೂ ಸಹ ಯೋಗಿ ಆದಿತ್ಯನಾಥ್ ಮಾದರಿಯನ್ನು ಅನುಸರಿಸಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಸದ್ಯ ಮದರಸಾಗಳ ಮೇಲೆ ಕಣ್ಣಿಟ್ಟಿರುವ ಯೋಗಿ ಆದಿತ್ಯನಾಥ್ ಸರ್ಕಾರ ಕಳೆದ ವಾರವಷ್ಟೇ ರಾಜ್ಯದ ಎಲ್ಲಾ ಮದರಸಾಗಳಲ್ಲಿಯೂ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಬೇಕು ಎಂಬ ನಿಯಮ ಜಾರಿಗೆ ತಂದಿತ್ತು. ನಮ್ಮ ದೇಶದ ತೆರಿಗೆ ಹಣದಲ್ಲಿ ಬದುಕುವ ನೀವು ನಮ್ಮ ರಾಷ್ಟ್ರಗೀತೆಯನ್ನು ಹೇಳದಿದ್ದರೇ ಹೇಗೆ ಎಂದು ಪ್ರಶ್ನಿಸಿ, ರಾಜ್ಯದ ಎಲ್ಲಾ 7000 ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಎಂಬ ಆದೇಶ ಹೊರಡಿಸಿತ್ತು. ಈ ಮೂಲಕ ದೇಶದೆಲ್ಲೆಡೆ ಮತ್ತೊಮ್ಮೆ ಸಂಚಲನವನ್ನು ಸೃಷ್ಟಿಸಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿಯ ನಿರ್ಧಾರದ ಮೂಲಕ ಯೋಗಿ ದೇಶದೆಲ್ಲೆಡೆ ಮತ್ತೊಮ್ಮೆ ಸಂಚಲನವನ್ನು ಸೃಷ್ಟಿಸಿದ್ದಾರೆ.

ಹೌದು ಸ್ನೇಹಿತರೇ ಈಗ ಮದರಸಾಗಳ ಮೇಲೆ ಮತ್ತೊಮ್ಮೆ ಕಣ್ಣು ಬಿಟ್ಟಿರುವ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ಮದರಸಾಗಳಿಗೆ ಸರ್ಕಾರದ ಅನುದಾನವನ್ನು ಹಾಗೂ ಧನ ಸಹಾಯವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ರಾಜ್ಯದ 7000 ಮದರಸಾಗಳ ಪೈಕಿ ಕೆಲವು ಮದರಸಾಗಳು ನಕಲಿ ಎಂಬ ದೂರು ಬಂದಿವೆ. ಹಾಗಾಗಿ ಅವುಗಳನ್ನು ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಯೋಗಿ ಆದಿತ್ಯನಾಥ್ ಮಾದರಿಯ ಕ್ರಮಗಳನ್ನು ಬಿಜೆಪಿ ಸರ್ಕಾರಗಳು ಆಡಳಿತವಿರುವ ಮಧ್ಯಪ್ರದೇಶ,ಹರಿಯಾಣ, ಕರ್ನಾಟಕದಲ್ಲಿ ಶೀಘ್ರವೇ ಜಾರಿಗೆ ತರಲು ಚಿಂತಿಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.