ಹತ್ತಾರು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿದ್ದು ಗೆ ಬಿಗ್ ಶಾಕ್: ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ ಗೊತ್ತೇ?

ಹತ್ತಾರು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿದ್ದು ಗೆ ಬಿಗ್ ಶಾಕ್: ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಪಂಜಾಬ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಆಗಿರುವ ನವಜೋತ್ ಸಿಂಗ್ ಸಿದ್ದು ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಅದು ಕೂಡ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆಗಳಿಗಾಗಿ ಅಲ್ಲ ಬದಲಾಗಿ ತುಂಬಾ ವರ್ಷಗಳ ಹಿಂದಿನ ವಿಚಾರಕ್ಕಾಗಿ ಎಂಬುದು ಮತ್ತೊಂದು ವಿಶೇಷವಾದ ವಿಚಾರ. ಹೌದು ಗೆಳೆಯರೇ ನವಜೋತ್ ಸಿಂಗ್ ಸಿದ್ದು 34 ವರ್ಷದ ಹಿಂದೆ ಮಾಡಿರುವಂತಹ ಎಡವಟ್ಟಿನ ಕೆಲಸದ ಶಿಕ್ಷೆ ಹೀಗೆ ಅವರು ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೆ ನವಜ್ಯೋತ್ ಸಿಂಗ್ ಸಿದ್ದು ಹಾಗೂ ಅವರ ಗೆಳೆಯ ರೂಪಿಂದರ್ ಸಿಂಗ್ ಸಂಧು 1988 ರ ಸಂದರ್ಭದಲ್ಲಿ ಗುರ್ನಾಮ್ ಸಿಂಗ್ ಎನ್ನುವವರ ಮೇಲೆ ಹಲ್ಲೆಯನ್ನು ನಡೆಸಿದ್ದರು.

ಇವರಿಬ್ಬರೂ ಕೂಡ ತಮ್ಮ ಜಿಪ್ಸಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದರು ಇದೇ ಮಾರ್ಗದಲ್ಲಿ ತಮ್ಮ ಕಾರ್ ನಿಂದ ಬರುತ್ತಿದ್ದ 65 ವರ್ಷ ವಯಸ್ಸಿನ ಗುರ್ನಾಮ್ ಸಿಂಗ್ ರವರು ಗಾಡಿಯನ್ನು ಪಕ್ಕಕ್ಕೆ ಇಡುವಂತೆ ಕೇಳುತ್ತಾರೆ. ಆದರೆ ಈ ಸಂದರ್ಭದಲ್ಲಿ ಇವರಿಬ್ಬರೂ ಕೂಡ ಆ ವೃದ್ಧ ವ್ಯಕ್ತಿಗೆ ಸರಿಯಾಗಿ ಥಳಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಆ ವ್ಯಕ್ತಿಗೆ ಆತನ ಗಾಡಿಯ ಕಿ ಸಿಗದಂತೆ ಮಾಡಿ ಹೋಗುತ್ತಾರೆ. ಇದರಿಂದಾಗಿ ಆ ವ್ಯಕ್ತಿಗೆ ಸರಿಯಾದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಆತ ಮರಣಹೊಂದುತ್ತಾನೆ.

ಇದೇ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ನವಜೋತ್ ಸಿಂಗ್ ಸಿದ್ದು ಹಾಗೂ ಅವರ ಸ್ನೇಹಿತರ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಮೊದಲಿಗೆ 99ರಲ್ಲಿ ಈ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ. 2006 ರಲ್ಲಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಇವರಿಬ್ಬರನ್ನು ಕೂಡ ಆರೋಪಿ ಎಂಬುದಾಗಿ ತೀರ್ಮಾನಿಸಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇದನ್ನು ಇಬ್ಬರೂ ಕೂಡ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. 2018 ರಲ್ಲಿ ಸುಪ್ರೀಂಕೋರ್ಟ್ ಕೂಡ ನವಜೋತ್ ಸಿಂಗ್ ಸಿದ್ದು ಗೆ ನೋಟಿಸ್ ನೀಡಿತ್ತು. ಗುರ್ನಾಮ್ ಸಿಂಗ್ ರವರ ಕುಟುಂಬಸ್ಥರು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಈಗ ನವಜೋತ್ ಸಿಂಗ್ ಸಿದ್ದು ಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಕೊನೆಗೂ ಕೂಡ 34 ವರ್ಷಗಳ ನಂತರ ತಪ್ಪಿತಸ್ಥರಿಗೆ ಶಿಕ್ಷೆ ಸಿಗುತ್ತಿರುವುದು ಗುರ್ನಾಮ್ ಸಿಂಗ್ ಪ್ರಕರಣದಲ್ಲಿ ಕನಿಷ್ಠ ಮಟ್ಟಿಗಾದರೂ ನ್ಯಾಯ ಸಿಕ್ಕಿದೆ ಎಂದು ಹೇಳಬಹುದಾಗಿದೆ.