ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭರ್ಜರಿ ಪ್ರದರ್ಶನ ನೀಡುತ್ತಿರುವ ದಿನೇಶ್ ರವರನ್ನು ಟಿ -20 ವಿಶ್ವಕಪ್ ಗೆ ಆಯ್ಕೆ ಮಾಡಲಾಗುತ್ತದೆಯೇ?? ರೋಹಿತ್ ಹೇಳಿದ್ದೇನು ಗೊತ್ತೇ??

ಭರ್ಜರಿ ಪ್ರದರ್ಶನ ನೀಡುತ್ತಿರುವ ದಿನೇಶ್ ರವರನ್ನು ಟಿ -20 ವಿಶ್ವಕಪ್ ಗೆ ಆಯ್ಕೆ ಮಾಡಲಾಗುತ್ತದೆಯೇ?? ರೋಹಿತ್ ಹೇಳಿದ್ದೇನು ಗೊತ್ತೇ??

217

ನಮಸ್ಕಾರ ಸ್ನೇಹಿತರೇ ದಿನೇಶ್ ಕಾರ್ತಿಕ್ ಅಲಿಯಾಸ್ ಡಿಕೆ. ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಆಗಿದ್ದವರು. ಧೋನಿ ಬರುವ ಮುಂಚೆಯೇ ತಂಡದಲ್ಲಿ ಸ್ಥಾನ ಪಡೆದವರು. ಆದರೇ ಕಾರಣಾಂತರಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಖಾಯಂ ಸ್ಥಾನ ದೊರೆಯಲಿಲ್ಲ. ಆದರೇ ಡಿಕೆ ಅವಕಾಶ ಸಿಕ್ಕಾಗಲೆಲ್ಲಾ ಭಾರತ ತಂಡದ ಆಪತ್ಭಾಂದವನಾಗಿ ಕಾಣಿಸಿಕೊಂಡಿದ್ದಾರೆ. ಹಲವಾರು ಭಾರಿ ತಂಡವನ್ನು ತಮ್ಮ ಅದ್ಭುತ ಇನ್ನಿಂಗ್ಸ್ ಗಳಿಂದ ಗೆಲ್ಲಿಸಿದ್ದಾರೆ.

Follow us on Google News

ಸದ್ಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್ ಫಿನಿಶರ್ ಆಗಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿರುವ ದಿನೇಶ್ ಕಾರ್ತಿಕ್ ಗೆ ಈ ಭಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಸ್ಥಾನ ಸಿಗಬೇಕೆಂದು ಅಭಿಮಾನಿಗಳು ಹಾಗೂ ವೀಕ್ಷಕ ವಿವರಣೆಗಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಈ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಏನು ಎಂಬುದನ್ನು ತಿಳಿಯೋಣ ಬನ್ನಿ.

ರೋಹಿತ್ ಪ್ರಕಾರ, ದಿನೇಶ್ ಕಾರ್ತಿಕ್ ಈ ಭಾರಿಯ ಭಾರತೀಯ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಅದಲ್ಲದೇ ವಿಕೇಟ್ ಕೀಪಿಂಗ್ ಹಾಗೂ ಫಿನಿಶರ್ ಎರಡು ಜವಾಬ್ದಾರಿಯನ್ನು ಅವರು ನಿರ್ವಹಿಸಬೇಕು ಎಂದು ಹೇಳಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಮೂರು ನಾಲ್ಕು ವಿಕೆಟ್ ಕೀಪರ್ ಗಳ ಮಧ್ಯ ರೇಸ್ ಇದೆ. ಆದರೇ ದಿನೇಶ್ ಕಾರ್ತಿಕ್ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.