ತಮ್ಮ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಟ್ಟಿಟ್ಟ ಮ್ಯಾಕ್ಸಿ, ಕೊಹ್ಲಿ ಹಾಗೂ ಹಾರ್ಧಿಕ್. ಯಾವ್ಯಾವ ದಾಖಲೆ ಸೃಷ್ಟಿಯಾಗಬಹುದು ಗೊತ್ತೇ??

ತಮ್ಮ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಟ್ಟಿಟ್ಟ ಮ್ಯಾಕ್ಸಿ, ಕೊಹ್ಲಿ ಹಾಗೂ ಹಾರ್ಧಿಕ್. ಯಾವ್ಯಾವ ದಾಖಲೆ ಸೃಷ್ಟಿಯಾಗಬಹುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಯಲ್ಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೇಬಲ್ ಟಾಪರ್ ಆಗಿರುವ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಲೇ ಬೇಕಾದಂತಹ ಅನಿವಾರ್ಯತೆಯಲ್ಲಿದೆ. ಡುಪ್ಲೆಸಿಸ್ ನಾಯಕತ್ವದ ಚಾಲೆಂಜರ್ಸ್ ಬೆಂಗಳೂರು ತಂಡದ ಟೂರ್ನಿಯ ಮೊದಲಾರ್ಧದಲ್ಲಿ ಗೆಲ್ಲುವ ಮೂಲಕ ಉತ್ತಮ ಸ್ಥಾನದಲ್ಲಿ ತನ್ನನ್ನು ತಾನು ಇರಿಸಿತ್ತು.

ಆದರೆ ದ್ವಿತೀಯಾರ್ಧದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ಸೋಲುವ ಮೂಲಕ ತನ್ನನ್ನು ತಾನು ಈಗ ಸದ್ಯಕ್ಕೆ ಪಾಯಿಂಟ್ಸ್ ಟೇಬಲ್ ನಲ್ಲಿ ಐದನೇ ಸ್ಥಾನದಲ್ಲಿ ಇಟ್ಟುಕೊಂಡಿದೆ. ಮುಂದಿನ ಹಂತಕ್ಕೆ ತೇರ್ಗಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೋಲಲೇ ಬೇಕಾಗಿದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೆಲವೊಂದು ಆಟಗಾರರು ತಮ್ಮ ಸಾಧನೆಗಳನ್ನು ಪೂರೈಸುವಂತಹ ಅವಕಾಶವನ್ನು ಹೊಂದಿದ್ದಾರೆ. ಹಾಗಿದ್ದರೆ ಆಟಗಾರರು ಯಾರು ಹಾಗೂ ಯಾವ ಸಾಧನೆಗಳನ್ನು ಪೂರೈಸುವ ಅವಕಾಶವಿದೆ ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೆ ಮೊದಲನೇದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಆಗಿರುವ ವಿರಾಟ್ ಕೊಹ್ಲಿ ಅವರಿಗೆ 7000 ರನ್ನುಗಳನ್ನು ಪೂರೈಸಬಲ್ಲ ಅವಕಾಶ ಇದ್ದು ಇದಕ್ಕಾಗಿ ಅವರು ಮುಂದಿನ ಪಂದ್ಯದಲ್ಲಿ 57 ರನ್ನುಗಳನ್ನು ಗಳಿಸಬೇಕಾದಂತಹ ಅವಶ್ಯಕತೆ ಇದೆ.

ಎರಡು ವಿಕೆಟ್ ಗಳನ್ನು ಕಬಳಿಸಿದರೆ ಮೊಹಮ್ಮದ್ ಸಿರಾಜ್ ರವರು ಆರ್ಸಿಬಿ ತಂಡದ ಪರವಾಗಿ 50 ವಿಕೆಟ್ಗಳನ್ನು ಕಬಳಿಸಿರುವ ನಾಲ್ಕನೇ ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆರ್ಸಿಬಿ ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಆಗಿರುವ ಜೋಶ್ ಹೆಝಲ್ ವುಡ್ ಮುಂದಿನ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತರು ಸಾಕು ಟಿ-ಟ್ವೆಂಟಿಯಲ್ಲಿ ಒಟ್ಟಾರೆ 100 ವಿಕೆಟ್ ಗಳಿಸಿರುವ ದಾಖಲೆಯನ್ನು ಮಾಡಲಿದ್ದಾರೆ. ಹರ್ಷಲ್ ಪಟೇಲ್ 8 ರನ್ನುಗಳನ್ನು ಗಳಿಸಿದರೆ ಐಪಿಎಲ್ ನಲ್ಲಿ ಸಾವಿರ ರನ್ ಗಳಿಸಿರುವ ಆಟಗಾರರ ಪೈಕಿ ಸೇರಿಕೊಳ್ಳುತ್ತಾರೆ. ಇಲ್ಲ 5 ಸಿಕ್ಸರ್ ಗಳನ್ನು ಬಾರಿಸಿದರೆ ಒಟ್ಟಾರೆಯಾಗಿ 50 ಸಿಕ್ಸರ್ ಬಾರಿಸಿರುವ ಆಟಗಾರರ ಸಾಲಿಗೆ ಶುಭಮನ್ ಗಿಲ್ ಸೇರಿಕೊಳ್ಳುತ್ತಾರೆ‌.

ಗ್ಲೆನ್ ಮ್ಯಾಕ್ಸ್ವೆಲ್ ಅವರು 200 ಬೌಂಡರಿ ಪೂರೈಸಲು ಮುಂದಿನ ಪಂದ್ಯದಲ್ಲಿ 9 ಬೌಂಡರಿ ಬಾರಿಸಬೇಕು. ಹಾರ್ದಿಕ್ ಪಾಂಡ್ಯ ರವರು 50 ವಿಕೆಟ್ ಸಾಧನೆಯನ್ನು ಪೂರೈಸಲು ಮುಂದಿನ ಪಂದ್ಯದಲ್ಲಿ 4 ವಿಕೆಟ್ ಗಳನ್ನು ಕೀಳಬೇಕು. ನೂರು ವಿಕೆಟ್ಗಳನ್ನು ಕಿತ್ತಿರುವ ಬೌಲರ್ಗಳ ಲಿಸ್ಟಿಗೆ ಸೇರಲು ಶಮಿ ಅವರಿಗೆ ಮುಂದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಅನ್ನು ಪಡೆಯಬೇಕಾದ ಅವಶ್ಯಕತೆ ಇದೆ. ಈ ಬಾರಿಯ ಐಪಿಎಲ್ ನಲ್ಲಿ 350 ರನ್ ಗಳಿಸಿರುವ ಆಟಗಾರರ ಲಿಸ್ಟ್ ಗೆ ಸೇರಲು ಡೇವಿಡ್ ಮಿಲ್ಲರ್ ರವರಿಗೆ ಕೇವಲ ಮೂರು ರನ್ನುಗಳ ಅಗತ್ಯವಿದೆ.

ಒಟ್ಟಾರೆಯಾಗಿ ಟಿ-ಟ್ವೆಂಟಿಯಲ್ಲಿ 50 ವಿಕೆಟ್ಗಳನ್ನು ಪಡೆದಿರುವ ಸಾಧನೆಯನ್ನು ಮಾಡಲು ಅಲ್ಜಾರ್ರಿ ಜೋಸೆಫ್ ರವರಿಗೆ ಕೇವಲ ಎರಡು ವಿಕೆಟ್ ಗಳ ಅವಶ್ಯಕತೆ ಇದೆ. ಇವಿಷ್ಟರಲ್ಲಿ ಮುಂದಿನ ಪಂದ್ಯದಲ್ಲಿ ಯಾರು ಯಾವ ಸಾಧನೆಯನ್ನು ಪೂರೈಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.