ಗುಜರಾತ್ ಪಂದ್ಯ ಗೆದ್ದು, ಪ್ಲೇಆಫ್ ಕನಸಿನಲ್ಲಿರುವ ಆರ್ಸಿಬಿಗೆ ಶಾಕ್ ನೀಡಿದ ರೋಹಿತ್ ಹೇಳಿಕೆ. ಡೆಲ್ಲಿ ಪಂದ್ಯದಲ್ಲಿ ಮಾಡಲು ಹೊರಟಿರುವುದು ಏನು ಗೊತ್ತೇ??

ಗುಜರಾತ್ ಪಂದ್ಯ ಗೆದ್ದು, ಪ್ಲೇಆಫ್ ಕನಸಿನಲ್ಲಿರುವ ಆರ್ಸಿಬಿಗೆ ಶಾಕ್ ನೀಡಿದ ರೋಹಿತ್ ಹೇಳಿಕೆ. ಡೆಲ್ಲಿ ಪಂದ್ಯದಲ್ಲಿ ಮಾಡಲು ಹೊರಟಿರುವುದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲ್ಲಬೇಕಾಗಿತ್ತು. ನಿರೀಕ್ಷೆಯಂತೆ ಡುಪ್ಲೆಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಈ ಸಾಧನೆಯನ್ನು ಮಾಡಿದೆ. ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವಾಗಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದಿದೆ. ಅದರಲ್ಲೂ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು 54 ವಸ್ತುಗಳಲ್ಲಿ 73 ರನ್ನುಗಳನ್ನು ಬಾರಿಸುವ ಮೂಲಕ ಫಾರ್ಮ್ ಗೆ ಕೂಡ ವಾಪಸಾಗಿದ್ದಾರೆ.

ಹೌದು ಗೆಳೆಯರೇ ನಿಜಕ್ಕೂ ಕೂಡ ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಮಟ್ಟದ ಸಂತೋಷವನ್ನು ನೀಡಿದೆ ಆದರೆ ಇದು ರೋಹಿತ್ ಶರ್ಮಾ ರವರ ಹೊಸ ಹೇಳಿಕೆಯನ್ನು ಕೇಳಿದ ಮೇಲೆ ನಿಂತಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ ರವರು ನೀಡಿರುವ ಹೇಳಿಕೆಯಿಂದಾಗಿ ಈಗ ಆರ್ಸಿಬಿ ತಂಡದ ಅಭಿಮಾನಿಗಳು ಬೇಸರವಾಗಿದ್ದರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ದ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆ ಆಗುವಂತಹ ಅವಕಾಶವಿದೆ.

ಆದರೆ ಈ ಪಂದ್ಯದ ಮುನ್ನವೇ ರೋಹಿತ್ ಶರ್ಮಾ ರವರು ನೀಡಿರುವ ಒಂದು ಹೇಳಿಕೆ ಈಗ ಆರ್ಸಿಬಿ ತಂಡದ ಅಭಿಮಾನಿಗಳಲ್ಲಿ ಅವರು ಉದ್ದೇಶಪೂರ್ವಕವಾಗಿ ಸೋಲಲು ನೋಡುತ್ತಿದ್ದಾರೆ ಎಂಬುದಾಗಿ ಅನಿಸುವಂತೆ ಮಾಡಿದೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ರೋಹಿತ್ ಶರ್ಮಾ ರವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧದ ಕೊನೆಯ ಪಂದ್ಯದಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡುವ ಮೂಲಕ ಮುಂದಿನ ಸೀಸನ್ ಗೆ ತಯಾರಿ ಮಾಡಿಕೊಳ್ಳುತ್ತೇವೆ ಎಂಬುದಾಗಿ ಹೇಳಿದ್ದರು. ಕೊನೆಯ ಪಂದ್ಯದಲ್ಲಿ ಅನನುಭವಿ ಯುವ ಆಟಗಾರರನ್ನು ಪ್ರಯೋಗಿಸುತ್ತಿರುವುದು ಸೋಲುವುದಕ್ಕೆ ಎಂಬುದಾಗಿ ಆರ್ಸಿಬಿ ಅಭಿಮಾನಿಗಳು ಈಗ ರೋಹಿತ್ ಶರ್ಮಾ ಮೇಲೆ ಮುನಿಸಿಕೊಂಡಿದ್ದಾರೆ. ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪಂದ್ಯ ಆರ್ಸಿಬಿ ಮುಂದಿನ ಹಂತಕ್ಕೆ ಹೋಗಲು ನಿರ್ಣಾಯಕ ಪಂದ್ಯವಾಗಿದೆ. ಡೆಲ್ಲಿ ಗೆದ್ದರೆ ಆರ್ಸಿಬಿ ಹೊರಹೋಗುತ್ತದೆ ಮುಂಬೈ ಗೆದ್ದರೆ ಆರ್ಸಿಬಿ ಮುಂದಿನ ಹಂತಕ್ಕೆ ತೇರ್ಗಡೆ ಆಗುತ್ತದೆ.