ಕಿಂಗ್ ಇಸ್ ಬ್ಯಾಕ್: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಾದ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತೇ?? ಪಂದ್ಯಕ್ಕೂ ಮುನ್ನ ಏನು ಮಾಡಿದ್ದರಂತೆ ಗೊತ್ತೇ??

ಕಿಂಗ್ ಇಸ್ ಬ್ಯಾಕ್: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಾದ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತೇ?? ಪಂದ್ಯಕ್ಕೂ ಮುನ್ನ ಏನು ಮಾಡಿದ್ದರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದಿರುವ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗುವಂತಹ ತನ್ನ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಹಲವಾರು ಪಂದ್ಯಗಳಿಂದ ಈ ಬಾರಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ರವರು ಭಾರಿ ಕಳಪೆ ಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಗುಜರಾತ್ ಟೈಟನ್ಸ್ ವಿರುದ್ಧದ ಕೊನೆಯಲ್ಲಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ವಿರಾಟ್ ಕೊಹ್ಲಿ ರವರು 54 ಎಸೆತಗಳಲ್ಲಿ ಬರೋಬ್ಬರಿ 73 ರನ್ನು ಗಳನ್ನು 8 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ಮೂಲಕ ಬಾರಿಸಿದ್ದಾರೆ. ಈ ಮೂಲಕ ರಾಜ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಎರಡು ವರ್ಷಗಳ ನಂತರ ಐಪಿಎಲ್ ನಲ್ಲಿ ಮೊದಲ ಬಾರಿಗೆ ಈಗ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ. ಇನ್ನು ಇಷ್ಟು ಮಾತ್ರವಲ್ಲದೆ ರಾಯಲ್ ಚಾಲೆಂಜರ್ಸ್ ಪರವಾಗಿ ಹಾಗೂ ಐಪಿಎಲ್ ನಲ್ಲಿ 7000 ರನ್ನುಗಳನ್ನು ಪೂರೈಸುವ ಮೂಲಕ ಅತ್ಯಂತ ಹೆಚ್ಚು ಸ್ಕೋರ್ ಮಾಡಿರುವ ಮತ್ತು 7000 ರನ್ನುಗಳನ್ನು ಮೊದಲಿಗೆ ಪೂರೈಸಿರುವ ಏಕೈಕ ಆಟಗಾರ ಎನ್ನುವ ಖ್ಯಾತಿಗೂ ಕೂಡ ಪಾತ್ರರಾಗಿದ್ದಾರೆ.

ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ ಮೇಲೆ ವಿರಾಟ್ ಕೊಹ್ಲಿ ರವರು ಕೂಡ ಕೆಲವೊಂದು ಮಾತುಗಳನ್ನಾಡಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ ನನ್ನಿಂದ ನನ್ನ ತಂಡಕ್ಕೆ ಏನು ಲಾಭವಾಗಿಲ್ಲ ಎನ್ನುವ ಕೊರಗಿನಲ್ಲಿ ಇದ್ದೆ. ಇದಕ್ಕಾಗಿಯೇ ಗುಜರಾತ್ ಪಂದ್ಯಕ್ಕೂ ಮುನ್ನ ನಾನು ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡಿದ್ದೆ. ಹೀಗಾಗಿ ಈ ಬಾರಿಯ ಪಂದ್ಯದಲ್ಲಿ ನಾನು ಖಂಡಿತವಾಗಿ ಉತ್ತಮ ಆಟವನ್ನು ಪ್ರದರ್ಶಿಸುತ್ತೇನೆ ಎನ್ನುವ ನಂಬಿಕೆ ನನ್ನ ಮೇಲೆ ನನಗೆ ಇತ್ತು. ಮೈದಾನದಲ್ಲಿ ಸರಿಯಾದ ಸಮಯದಲ್ಲಿ ಯಾವುದೇ ಅನುಮಾನವಿಲ್ಲದೆ ನನ್ನ ಮೇಲೆ ನಾನು ಸಂಪೂರ್ಣವಾದ ಆತ್ಮವಿಶ್ವಾಸವನ್ನು ಇಟ್ಟುಕೊಂಡು ಈ ಆಟವನ್ನು ಆಡಿದ್ದೇನೆ. ಹೀಗಾಗಿ ಗೆಲ್ಲಲೇ ಬೇಕಾದಂತಹ ಪಂದ್ಯದಲ್ಲಿ ತಂಡಕ್ಕೆ ನೆರವಾಗಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂಬುದಾಗಿ ವಿರಾಟ್ ಕೊಹ್ಲಿ ರವರು ಹೇಳಿದ್ದಾರೆ.