ಫಾರ್ಮ್ ಗೆ ವಾಪಸ್ಸಾದ ಖುಷಿಯಲ್ಲಿರುವ ವಿರಾಟ್ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಸೆಹ್ವಾಗ್, ಅಭಿಮಾನಿಗಳು ಗರಂ ಆಗಿ ತಿಳಿದು ಮಾತನಾಡಿ ಎಂದದ್ದು ಯಾಕೆ ಗೊತ್ತೇ??

ಫಾರ್ಮ್ ಗೆ ವಾಪಸ್ಸಾದ ಖುಷಿಯಲ್ಲಿರುವ ವಿರಾಟ್ ಕುರಿತು ಷಾಕಿಂಗ್ ಹೇಳಿಕೆ ನೀಡಿದ ಸೆಹ್ವಾಗ್, ಅಭಿಮಾನಿಗಳು ಗರಂ ಆಗಿ ತಿಳಿದು ಮಾತನಾಡಿ ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ವಿಶ್ವ ಚಾಂಪಿಯನ್ ಎನಿಸಿದರೂ ಕೆಲವೊಂದು ವಿಷಯಗಳಲ್ಲಿ ತಂಡದ ಆಟಗಾರರಲ್ಲಿ ಭಿನ್ನಾಭಿಪ್ರಾಯಗಳು ಇರುತ್ತವೆ.ಅವು ಕೆಲವೊಮ್ಮೆ ಬಹಿರಂಗಗೊಳ್ಳುತ್ತವೆ. ವಿರಾಟ್ ಕೊಹ್ಲಿ ಸದ್ಯ ಭಾರತ ತಂಡದ ಮಾಜಿ ನಾಯಕ. ಆದರೇ ಕೊಹ್ಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ನಂ 1 ಆಗಿ ಹೊರಹೊಮ್ಮಿತ್ತು. ಆದರೇ ಯಾವುದೇ ಐಸಿಸಿ ಪ್ರಶಸ್ತಿಗಳನ್ನು ವಿಫಲವಾಗಿತ್ತು.

ಈಗ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಕೊಹ್ಲಿ ಮೇಲೆ ಈಗ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ. ಕೊಹ್ಲಿ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನಡುವೆ ಕಂಪೇರ್ ಮಾಡಿದ್ದಾರೆ. ಸೌರವ್ ಗಂಗೂಲಿ ನಾಯಕರಾಗಿದ್ದಾಗ ಹಲವಾರು ಯುವ ಆಟಗಾರರನ್ನು ಬೆಳೆಸಿದರು.ಅವರು ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದಾಗ ಬೆನ್ನು ತಟ್ಟಿ ಬೆಳೆಸುತ್ತಿದ್ದರು.

ಸೌರವ್ ಗಂಗೂಲಿ ನಾಯಕರಾಗಿದ್ದಾಗ ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮಹಮದ್ ಕೈಫ್, ಜಹೀರ್ ಖಾನ್, ಆಶೀಶ್ ನೆಹ್ರಾ, ಇರ್ಫಾನ್ ಪಠಾಣ್,ಹೀಗೆ ಹಲವಾರು ಆಟಗಾರರನ್ನು ಬೆಳೆಸಿದ್ದರು. ಆದರೇ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಎಷ್ಟು ಜನ ಯುವ ಆಟಗಾರರನ್ನು ಬೆಳೆಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ವಿರಾಟ್ ನಾಯಕರಾಗಿದ್ದಾಗ ಒಬ್ಬನೇ ಒಬ್ಬ ಆಟಗಾರ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಪದೇ ಪದೇ ತಂಡದ ಸಂಯೋಜನೆ ಬದಲಾವಣೆ ಆದ ಕಾರಣ ಮಹತ್ವದ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ವಿರಾಟ್ ಅಭಿಮಾನಿಗಳು ಗರಂ ಆಗಿದ್ದು, ಯುವ ಆಟಗಾರರ ಬಳಿ ಒಮ್ಮೆ ಕೇಳಿ ಕೊಹ್ಲಿ ಯಾವ ರೀತಿ ಬೆಂಬಲ ನೀಡುತ್ತಾರೆ ಎಂದು, ತಿಳಿದು ಕೊಳ್ಳದೆ ಮಾತನಾಡಬೇಡಿ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.