ನೀವು ಎಂದಾದರೂ ತಲೆ ಕೆಳಗೆ ಮಾಡಿರುವ ಹನುಮಾನ್ ದೇವಸ್ಥಾನವನ್ನು ನೋಡಿದ್ದೀರಾ?? ಇಲ್ಲಿ ಪೂಜೆ ಮಾಡುವ ಹನುಮ ತಲೆಕೆಗಾಗಿರುವುದು ಯಾಕೆ ಗೊತ್ತೇ??

ನೀವು ಎಂದಾದರೂ ತಲೆ ಕೆಳಗೆ ಮಾಡಿರುವ ಹನುಮಾನ್ ದೇವಸ್ಥಾನವನ್ನು ನೋಡಿದ್ದೀರಾ?? ಇಲ್ಲಿ ಪೂಜೆ ಮಾಡುವ ಹನುಮ ತಲೆಕೆಗಾಗಿರುವುದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದೇಶ ಎನ್ನುವುದು ಸನಾತನ ಹಿಂದೂ ಸಂಸ್ಕೃತಿಯ ಬುನಾದಿ ಯಿಂದ ಬೆಳೆದು ಬಂದಂತಹ ದೇಶ. ನಮ್ಮಲ್ಲಿ ಧಾರ್ಮಿಕತೆಯನ್ನು ವುದು ಬೇರೆ ದೇಶಗಳಿಗೆ ಹೋಲಿಸಿದರೆ ತುಂಬಾನೇ ಹೆಚ್ಚಾಗಿದೆ. ಇಂದು ನಾವು ಮಾತನಾಡಲು ಹೊರಟಿರುವುದು ನಮ್ಮ ಭಾರತ ದೇಶದಲ್ಲಿ ಇರುವಂತಹ ವಿಶೇಷವಾದಂತಹ ಹನುಮಂತನ ದೇವಸ್ಥಾನದ ಕುರಿತಂತೆ. ಹೌದು ಗೆಳೆಯರೇ ರಾಮಾಯಣವನ್ನು ನೀವು ಚೆನ್ನಾಗಿ ತಿಳಿದಿದ್ದರೆ ಅದರಲ್ಲಿ ಬರುವಂತಹ ಒಂದು ಸನ್ನಿವೇಶದ ಹಿನ್ನೆಲೆಯಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ರಾಮಾಯಣದ ಒಂದು ಸಮಯದಲ್ಲಿ ರಾಮ ಲಕ್ಷ್ಮಣ ಇಬ್ಬರನ್ನು ಕೂಡ ಅಹಿ ರಾವಣ ಅಪಹರಿಸಿ ಪಾತಾಳಲೋಕಕ್ಕೆ ಕರೆದುಕೊಂಡು ಹೋಗಿ ಬಂಧಿಸುತ್ತಾನೆ. ಈ ಸಂದರ್ಭದಲ್ಲಿ ಪವನ ಪುತ್ರ ಹನುಮಾನ್ ತಲೆಕೆಳಗಾಗಿ ಪಾತಾಳಕ್ಕೆ ಧುಮುಕುತ್ತಾನೆ. ನಂತರ ರಾಮ ಹಾಗೂ ಲಕ್ಷ್ಮಣ ಇಬ್ಬರನ್ನು ಕೂಡ ಸುರಕ್ಷಿತವಾಗಿ ಕರೆತರುತ್ತಾನೆ. ಇದೇ ಜಾಗದಲ್ಲಿ ಈ ದೇವಸ್ಥಾನ ಈಗ ಸ್ಥಾಪಿತವಾಗಿರುವುದು. ಹೌದು ಗೆಳೆಯರೇ ಹನುಮಾನ್ ಪಾತಾಳಕ್ಕೆ ಜಿಗಿದ ಈ ಪ್ರದೇಶದ ಹೆಸರೇ ಸಾನ್ವಾರ್ ಎಂದು. ಮಧ್ಯಪ್ರದೇಶದ ಉಜ್ಜಯಿನಿ ಇಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವುದು. ಈ ಸ್ಥಳದಲ್ಲಿಯೇ ಈ ಉಲ್ಟಾ ಹನುಮಾನ್ ದೇವಸ್ಥಾನ ಇರುವುದು. ಇಲ್ಲಿ ಕೇವಲ ಹನುಮಂತನ ಶಿರದ ಭಾಗ ಮಾತ್ರ ಇದ್ದು ಇದು ಉಲ್ಟಾ ಪರಿಸ್ಥಿತಿಯಲ್ಲಿ ಪೂಜಿಸಲ್ಪಡುತ್ತದೆ.

ಪಾತಾಳ ಕೆದಕಿದಾಗ ಹನುಮಾನ್ ತಲೆಕೆಳಗಾಗಿ ಹಾರಿದ ಕ್ಕೆ ಇದನ್ನು ಉಲ್ಟಾ ರೀತಿಯ ಮೂರ್ತಿಯ ರೂಪದಲ್ಲಿ ಪೂಜಿಸಲಾಗುತ್ತಿದೆ. ಇನ್ನು ಕೇವಲ ಇಲ್ಲಿ ಉಲ್ಟಾ ಹನುಮಾನ್ ಮೂರ್ತಿ ಮಾತ್ರವಲ್ಲದೆ ರಾಮ ಲಕ್ಷ್ಮಣ ಹಾಗೂ ಸೀತೆಯರ ವಿಗ್ರಹಗಳು ಕೂಡ. ಪರಶಿವನ ಪೂಜೆ ಕೂಡ ಇಲ್ಲಿ ನಡೆಯುತ್ತದೆ. ಇನ್ನು ಈ ದೇವಾಲಯವನ್ನು ಪ್ರಾಚೀನ ಅಂದರೆ ರಾಮಾಯಣ ಕಾಲದ ದೇವಸ್ಥಾನ ಎನ್ನುವುದಾಗಿ ಕೂಡ ಕರೆಯಲಾಗುತ್ತದೆ. ಇಲ್ಲಿ ಋಷಿಮುನಿಗಳು ಪೂಜೆ ಮಾಡಿದಂತಹ ಪ್ರತೀತಿ ಕೂಡ ಇದೆ. ಇನ್ನು ಇಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿರುವ ಪ್ರಾಚೀನ ಕಾಲದ ಪಾರಿಜಾತ ಮರಗಳಲ್ಲಿ ಗುಂಪುಗುಂಪಾಗಿ ಗಿಳಿಗಳು ಕುಳಿತುಕೊಂಡಿರುತ್ತವೆ. ಇವುಗಳನ್ನೇ ಹನುಮಂತನ ಸ್ವರೂಪ ಎಂಬುದಾಗಿ ಹೇಳಲಾಗುತ್ತದೆ. ಈ ದೇವಸ್ಥಾನದ ಚರಿತ್ರೆ ಕುರಿತಂತೆ ಕೇಳಿದ ನಂತರ ನಿಮಗೆ ಅನಿಸಿದ್ದೇನು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.