ಐಪಿಎಲ್ ನಂತರ ಮುಂದಿನ ದಕ್ಷಿಣ ಆಫ್ರಿಕಾ ಟಿ 20 ಸರಣಿಗೆ ಅವಕಾಶ ಪಡೆಯಲಿರುವ 3 ಹೊಸ ಭಾರತೀಯ ಆಟಗಾರರು ಯಾರ್ಯಾರು ಗೊತ್ತೇ??

ಐಪಿಎಲ್ ನಂತರ ಮುಂದಿನ ದಕ್ಷಿಣ ಆಫ್ರಿಕಾ ಟಿ 20 ಸರಣಿಗೆ ಅವಕಾಶ ಪಡೆಯಲಿರುವ 3 ಹೊಸ ಭಾರತೀಯ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ನೇ ಆವೃತ್ತಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ರೇಸ್ ಪ್ರವೇಶಿಸಿದೆ. ಉಳಿದ ಮೂರು ಸ್ಥಾನಗಳಿಗೆ ಬರೋಬ್ಬರಿ ಐದು ತಂಡಗಳು ಪ್ರಯತ್ನಿಸುತ್ತಿವೆ. ಕೊನೆಯ ಲೀಗ್ ಪಂದ್ಯದ ವರೆಗೂ ಯಾರು ಯಾವ ಹಂತದಲ್ಲಿ ಪ್ಲೇ ಆಫ್ ತಲುಪುತ್ತಾರೆ ಎಂಬ ಲೆಕ್ಕಾಚಾರ ಕೊನೆಯವರೆಗೂ ನಡೆಯಲಿದೆ. ಇನ್ನು ಐಪಿಎಲ್ ಮುಗಿದ ನಂತರ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭಿಸಲಿದೆ. ಜೂನ್ 9 ರಿಂದ ಜೂನ್ 17ರ ವರೆಗೆ ಐದು ಟಿ 20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಭಾರತ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಐಪಿಎಲ್ ನಲ್ಲಿ ಮಿಂಚಿದ ಕೆಲವು ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಬನ್ನಿ ಅಂತಹ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ತಿಲಕ್ ವರ್ಮಾ – ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಈ ಬ್ಯಾಟ್ಸ್ಮನ್ ಹಲವಾರು ಭಾರಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ್ದಾರೆ. ಅದಲ್ಲದೇ ಇನ್ನಿಂಗ್ಸ್ ಕಟ್ಟುವ ಕ್ಷಮತೆ ಸಹ ಅವರಲ್ಲಿದೆ. ಹಾಗಾಗಿ ಸೂರ್ಯ ಕುಮಾರ್ ಯಾದವ್ ಗಾಯಾಳುವಾದ ಕಾರಣ ಅವರ ಬದಲಿಗೆ ಇವರಿಗೆ ಸ್ಥಾನ ದೊರೆಯುವ ಸಾಧ್ಯತೆ ಇದೆ.

2.ಉಮ್ರಾನ್ ಮಲೀಕ್ – ಸದ್ಯ ಭಾರತದ ಸೂಪರ್ ಸ್ಪೀಡ್ ವೇಗಿಯಾಗಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲೀಕ್ ತಮ್ಮ ವೇಗದ ಎಸೆತಗಳಿಂದ ಎಲ್ಲೆಡೆ ಸುದ್ದಿಯಾಗಿದ್ದಾರೆ. ವೇಗದ ಬೌಲರ್ ಗಳಿಗೆ ಸ್ವರ್ಗವಾಗಿರುವ ದಕ್ಷಿಣ ಆಫ್ರಿಕಾದ ಪಿಚ್ ಗಳಲ್ಲಿ ಮಲೀಕ್ ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

3.ಅರ್ಶದೀಪ್ ಸಿಂಗ್ – ಪಂಜಾಬ್ ಕಿಂಗ್ಸ್ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಎಂದರೇ ಅದು ಅರ್ಶದೀಪ್ ಸಿಂಗ್. ಕಳೆದ ಸೀಸನ್ ನಿಂದಲೂ ಸಹ ಉತ್ತಮ ಬೌಲಿಂಗ್ ಮಾಡುತ್ತಿರುವ ಅರ್ಶದೀಪ್ ಸಿಂಗ್ ಗೆ ಈ ಭಾರಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.