ಕೊನೆಯ ಪಂದ್ಯಗಳಲ್ಲಿ ಡೆಲ್ಲಿ, ಆರ್ಸಿಯ್ ಎರಡು ತಂಡಗಳು ಸೋತರೆ ಪ್ಲೇ ಆಫ್ ಗೆ ಹೋಗುವುದು ಯಾವ ತಂಡ ಗೊತ್ತೇ?? ಯಾರ್ಯಾರಿಗೆ ಚಾನ್ಸ್ ಇದೆ ಗೊತ್ತೇ?

ಕೊನೆಯ ಪಂದ್ಯಗಳಲ್ಲಿ ಡೆಲ್ಲಿ, ಆರ್ಸಿಯ್ ಎರಡು ತಂಡಗಳು ಸೋತರೆ ಪ್ಲೇ ಆಫ್ ಗೆ ಹೋಗುವುದು ಯಾವ ತಂಡ ಗೊತ್ತೇ?? ಯಾರ್ಯಾರಿಗೆ ಚಾನ್ಸ್ ಇದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಕಳೆದೆಲ್ಲಾ ಬಾರಿಯ ಐಪಿಎಲ್ ಸೀಸನ್ ಗಳಿಗಿಂತಲೂ ಈ ಬಾರಿಯ ಐಪಿಎಲ್ ಸೀಸನ್ ಎನ್ನುವುದು ಸಾಕಷ್ಟು ಜಟಿಲವಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಂಡ ಕುಳಿತಿದೆ. ಹೌದು ಗೆಳೆಯರೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಈಗ ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್ಸಿಬಿ ಹಾಗೂ ಡೆಲ್ಲಿ ಎರಡು ತಂಡಗಳು ಕೂಡ ಒಂದೇ ಪಾಯಿಂಟ್ಸ್ ಹೊಂದಿದ್ದರೂ ಕೂಡ ರನ್ ರೇಟ್ ಆಧಾರದಲ್ಲಿ ಡೆಲ್ಲಿ ತಂಡ ಆರ್ಸಿಬಿ ಗಿಂತ ಮುಂದಿದೆ.

ಹೀಗಾಗಿ ಡೆಲ್ಲಿ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮುಂಬೈಯನ್ನು ಸೋಲಿಸಿದರೆ ನೇರವಾಗಿ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್ಸಿಬಿ ತನ್ನ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧದ ಮುಂದಿನ ಪಂದ್ಯದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಮುಂದಿನ ಪ್ಲೇಆಫ್ ಹಂತಕ್ಕೆ ಸೇರ್ಪಡೆಯಾಗುವಂತಹ ಸಾಧ್ಯತೆ ಇದೆ. ಹಾಗಿದ್ದರೆ ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೋತರೆ ಹಾಗೂ ಇನ್ನೊಂದು ಕಡೆ ಆರ್ಸಿಬಿ ಕೂಡ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ ಟೈಟನ್ಸ್ ತಂಡದ ವಿರುದ್ಧ ಸೋತರೆ ಏನಾಗುತ್ತದೆ ಎಂಬ ಕುತೂಹಲ ನಿಮ್ಮಲ್ಲಿರಬಹುದು.

ಈ ಸನ್ನಿವೇಶದಲ್ಲಿ ಯಾರು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸಬಹುದಾದಂತಹ ಸಾಧ್ಯತೆ ಇದೆ ಎಂಬುದನ್ನು ಕೂಡ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಗೆಳೆಯರೇ ಆರ್ಸಿಬಿ ಹಾಗೂ ಡಿಸಿ ಎರಡು ತಂಡಗಳು ಸೋತರೆ ನಾಲ್ಕನೇ ಸ್ಥಾನಕ್ಕಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕೂಡ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಯಾಕೆಂದರೆ ಎರಡು ತಂಡಗಳು ಕೂಡ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾವೆ‌. ಒಂದು ಪಂದ್ಯವನ್ನು ಗೆದ್ದರೆ 14 ಅಂಕಗಳು ದೊರೆಯುತ್ತದೆ ಹಾಗೂ ಇವುಗಳಲ್ಲಿ ಉತ್ತಮ ರನ್ ರೇಟ್ ಯಾವ ತಂಡ ಹೊಂದಿರುತ್ತದೆಯೋ ಆ ತಂಡ ಮುಂದಿನ ಹಂತಕ್ಕೆ ತೇರ್ಗಡೆ ಆಗಲಿದೆ. ನಿಮ್ಮ ಪ್ರಕಾರ ಯಾವ ತಂಡ ಪ್ಲೇಆಫ್ ಹಂತಕ್ಕೆ ಹೋಗಬಹುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.