ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಾಡು ಇಲ್ಲವೇ ಮಡಿ ಎಂಬಂತೆ ಇರುವ ಗುಜರಾತ್ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ಆಗಬಹುದಾದ ಬದಲಾವಣೆಗಳೇನು ಗೊತ್ತೇ?? ಹೊಸ ಆಟಗಾರನ ಎಂಟ್ರಿ??

1,526

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರ ಅಂತಿಮ ಹಂತಕ್ಕೆ ತಲುಪಿದೆ. ಗುಜರಾತ್ ಟೈಟಾನ್ಸ್ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಪ್ಲೇ ಆಫ್ ರೇಸ್ ಪ್ರವೇಶಿಸಲು ಕೊನೆ ಕ್ಷಣದವರೆಗೆ ಪ್ರಯತ್ನಿಸುತ್ತಿವೆ. ಇನ್ನು ಕನ್ನಡಿಗರ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಪ್ಲೇ ಆಫ್ ಗೆ ಪ್ರವೇಶಿಸಲು ಹರಸಾಹಸ ಪಡುತ್ತಿದೆ. ಲೀಗ್ ಹಂತದಲ್ಲಿ ಈಗಾಗಲೇ 13 ಪಂದ್ಯ ಆಡಿರುವ ಆರ್ಸಿಬಿ ತಂಡ 7 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್ ಕಲೆ ಹಾಕಿದೆ. ಇನ್ನು ಉಳಿದ ಒಂದು ಪಂದ್ಯ ಮಾತ್ರ ಬಾಕಿ ಇದೆ.

ಅದರಲ್ಲಿ ಗೆದ್ದರೂ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲು ಇನ್ನುಳಿದ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಮಾಡು ಇಲ್ಲವೇ ಮಡಿ ಎಂಬಂತೆ ಆರ್ಸಿಬಿ ತಂಡ ತನ್ನ ಮುಂದಿನ ಪಂದ್ಯವನ್ನು ಟೇಬಲ್ ಟಾಪರ್ ಆಗಿರುವ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ. ಆದರೇ ಆರ್ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಹೇಳಲಾಗಿದೆ. ತಂಡದಲ್ಲಿ ಸ್ಥಾನ ಪಡೆದಿರುವ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಎಂದಿನಂತೆ ಆರಂಭಿಕರಾಗಿ ವಿರಾಟ್ ಕೊಹ್ಲಿ, ಫಾಪ್ ಡು ಪ್ಲೇಸಿಸ್, ಮೂರನೇ ಕ್ರಮಾಂಕದಲ್ಲಿ ರಜತ್ ಪಾಟೀದಾರ್, ನಾಲ್ಕನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಐದನೇ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್, ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಏಳನೇ ಕ್ರಮಾಂಕದಲ್ಲಿ ಶಹಬಾಜ್ ಅಹಮದ್, ಎಂಟನೇ ಕ್ರಮಾಂಕದಲ್ಲಿ ವನಿಂದು ಹಸರಂಗ, ಒಂಬತ್ತನೇ ಕ್ರಮಾಂಕದಲ್ಲಿ ಹರ್ಷಲ್ ಪಟೇಲ್, ಹತ್ತನೇ ಕ್ರಮಾಂಕದಲ್ಲಿ ಮಹಮದ್ ಸಿರಾಜ್ ಬದಲಿಗೆ ಯುವ ಆಟಗಾರ ಚಾಮ ಮಿಲಿಂದ್ ರವರು ಸ್ಥಾನ ಪಡೆಯಬಹುದಾಗಿದೆ, ಹನ್ನೊಂದನೇ ಕ್ರಮಾಂಕದಲ್ಲಿ ಜೋಶ್ ಹೇಜಲ್ವುಡ್ ಆಡಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಒಟ್ಟಾರೆಯಾಗಿ ತಂಡ ಇಂತಿದೆ : ವಿರಾಟ್ ಕೊಹ್ಲಿ, ಫಾಪ್ ಡು ಪ್ಲೇಸಿಸ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೋಮ್ರೋರ್, ಶಹಬಾಜ್ ಅಹಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮಹಮದ್ ಸಿರಾಜ್, ಜೋಶ್ ಹೇಜಲ್ವುಡ್.

Get real time updates directly on you device, subscribe now.