ನೀವು ಪ್ರತಿದಿನ ನೋಡುತ್ತಿರುವ ಪಂದ್ಯಗಳಲ್ಲಿ ಆಡುತ್ತಿರುವ ತಂಡಗಳ ಅಸಲಿ ಬೆಲೆ ಎಷ್ಟು ಗೊತ್ತೇ?? ಯಾವ್ಯಾವ ತಂಡಗಳು ಬಲು ದುಬಾರಿ ಗೊತ್ತೇ?

ನೀವು ಪ್ರತಿದಿನ ನೋಡುತ್ತಿರುವ ಪಂದ್ಯಗಳಲ್ಲಿ ಆಡುತ್ತಿರುವ ತಂಡಗಳ ಅಸಲಿ ಬೆಲೆ ಎಷ್ಟು ಗೊತ್ತೇ?? ಯಾವ್ಯಾವ ತಂಡಗಳು ಬಲು ದುಬಾರಿ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಮಾರ್ಚ್ 26ರಿಂದ ಮೊದಲ್ಗೊಂಡು ಈ ಬಾರಿಯ ಟಾಟಾ 2022 ಅದ್ಭುತವಾದ ಪ್ರಾರಂಭವನ್ನು ಪಡೆದುಕೊಂಡಿದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಈ ಬಾರಿಯ ಹತ್ತು ತಂಡಗಳಲ್ಲಿ ಅತ್ಯಂತ ದುಬಾರಿ ತಂಡ ಯಾವುದು ಎನ್ನುವುದರ ಕುರಿತಂತೆ. ಹಾಗಿದ್ದರೆ ಮತ್ಯಾಕೆ ತಡ ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

10 ನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವಿದೆ. 2012 ರಲ್ಲಿ ಕಲಾನಿಧಿ ಮಾರನ್ ಅವರ ಒಡೆತನದ ಸನ್ ನೆಟ್ವರ್ಕ್ ಗ್ರೂಪ್ ಸಂಸ್ಥೆ ಈ ತಂಡವನ್ನು ಖರೀದಿಸಿತ್ತು. ಮಾಧ್ಯಮಗಳ ವರದಿಯ ಪ್ರಕಾರ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸನ್ ನೆಟ್ವರ್ಕ್ ಗ್ರೂಪ್ 425 ಕೋಟಿ ರೂಪಾಯಿ ಖರೀದಿಸಿ ಸನ್ರೈಸರ್ಸ್ ಹೈದರಾಬಾದ್ ಎನ್ನುವ ಮರು ನಾಮಕರಣವನ್ನು ಮಾಡಿತ್ತು.

9ನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಟೆಸ್ಕೋ ಇಂಟರ್ನ್ಯಾಷನಲ್ ಲಿಮಿಟೆಡ್ ಹಾಗೂ ಅದರ ಪಾಲುದಾರ ಸಂಸ್ಥೆಗಳು ಬರೋಬ್ಬರಿ 508 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದವು. ನಿಮಗೆಲ್ಲರಿಗೂ ತಿಳಿದಿರಲಿ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ನ ಆರಂಭಿಕ ಸೀಸನ್ ನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.

ಎಂಟನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬಾಲಿವುಡ್ ಕಿಂಗ್ ಖಾನ್ ಆಗಿರುವ ಶಾರುಖಾನ್ ರವರ ರೆಡ್ ಚಿಲ್ಲೀಸ್ ಕಂಪನಿ ಹಾಗೂ ನಟಿ ಜೂಹಿ ಚಾವ್ಲಾ ಅವರ ಪತಿಯ ಒಡೆತನದಲ್ಲಿರುವ ಮೆಹ್ತಾ ಗ್ರೂಪ್ ಬರೋಬ್ಬರಿ 569 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು.

ಏಳನೇ ಸ್ಥಾನದಲ್ಲಿ ಹಲವಾರು ಹೆಸರುಗಳನ್ನು ಬದಲಾಯಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ತಂಡವನ್ನು ರಿಪಬ್ಲಿಕ್ ವಲ್ಡ್ ಎನ್ನುವ ಕಂಪನಿ 576 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಪ್ರೀತಿಗಿಂತ ಸೇರಿದಂತೆ ಹಲವಾರು ಜನರು ಪಂಜಾಬ್ ತಂಡದ ಒಡೆತನದ ಲಿಸ್ಟಿನಲ್ಲಿ ಇದ್ದಾರೆ.

6ನೇ ಸ್ಥಾನದಲ್ಲಿ 2018 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಆಗಿದ್ದ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಎನ್ನುವ ಹೆಸರಿನಲ್ಲಿ ಜಿಎಂಆರ್ ಕಂಪನಿ 630 ಕೋಟಿ ರೂಪಾಯಿ ಖರೀದಿಸಿತ್ತು. ಇದೇ ವರ್ಷ ಜಿಂದಾಲ್ ಸೌತ್ ವೆಸ್ಟ್ ಗ್ರೂಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 50% ಓನರ್ಷಿಪ್ ಅನ್ನು ಪಡೆದುಕೊಂಡಿದೆ.

5ನೇ ಸ್ಥಾನದಲ್ಲಿ ಐಪಿಎಲ್ ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಅಂತಹ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇಂಡಿಯನ್ ಸಿಮೆಂಟ್ ಕಂಪನಿ 689 ಕೋಟಿ ರೂಪಾಯಿಗೆ ಖರೀದಿಸಿದೆ.

ನಾಲ್ಕನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಬರೋಬ್ಬರಿ 845 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಅವರ ಕಿಂಗ್ಫಿಶರ್ ಏರ್ಲೈನ್ಸ್ ನಲ್ಲಿ ಆದಂತಹ ನಷ್ಟದ ಕಾರಣದಿಂದಾಗಿ ಈ ತಂಡವನ್ನು ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ಮಾತೃ ಸಂಸ್ಥೆಯಾಗಿರುವ ಡಿಯಾಜಿಯೋ ಕಂಪನಿ ಹೆಚ್ಚಿನ ಶೇರುಗಳನ್ನು ಹೊಂದಿದೆ.

ಮೂರನೇ ಸ್ಥಾನದಲ್ಲಿ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡವಿದೆ. ನಮ್ಮ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ 850 ಕೋಟಿ ರೂಪಾಯಿಗಳಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಖರೀದಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಐಪಿಎಲ್ ನಿಂದ ತಮ್ಮ ಜರ್ನಿ ಯನ್ನು ಆರಂಭಿಸಿರುವ ಗುಜರಾತ್ ಟೈಟನ್ಸ್ ತಂಡವನ್ನು ಸಿವಿಸಿ ಪಾರ್ಟ್ನರ್ಸ್ ಕಂಪನಿ ಬರೋಬ್ಬರಿ 5600 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ನಿಜ ಕೂಡ ಇದು ಐಪಿಎಲ್ ಇತಿಹಾಸದಲ್ಲೇ ಎರಡನೇ ಅತ್ಯಂತ ದೊಡ್ಡ ಮೌಲ್ಯವುಳ್ಳ ಬೆಲೆಯನ್ನು ಹೊಂದಿರುವ ತಂಡವಾಗಿದೆ.

ಮೊದಲನೇ ತಂಡದಲ್ಲಿ ಕೆ ಎಲ್ ರಾಹುಲ್ ನಾಯಕತ್ವದ ಈ ಬಾರಿಯ ಹೊಸ ತಂಡಗಳಲ್ಲಿ ಒಂದಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವಿದೆ. ಖ್ಯಾತ ಉದ್ಯಮಿ ಸಂಜೀವ್ ಗೊಯೆಂಕಾ ಒಡೆತನದ ಆರ್ ಪಿ ಎಸ್ ಜಿ ಕಂಪನಿ 7090 ಕೋಟಿ ರೂಪಾಯಿಗಳಿಗೆ ತಂಡವನ್ನು ಖರೀದಿಸಿ ದಾಖಲೆಯನ್ನು ಬರೆದಿದೆ.

ಇವೆರಡು ತಂಡಗಳ ಅತ್ಯಂತ ದುಬಾರಿ ಬೆಲೆಯನ್ನು ನೋಡಿ ಆಶ್ಚರ್ಯ ಪಡುವುದು ಬೇಡ ಏಕೆಂದರೆ ಇವುಗಳು ಈ ಸೀಸನ್ ನಲ್ಲಿ ಈ ಮೊತ್ತಕ್ಕೆ ಬಿಕರಿಯಾಗಿದೆ. ಉಳಿದೆಲ್ಲ ತಂಡಗಳು ಐಪಿಎಲ್ ಆರಂಭವಾದಾಗಲೇ ಮಾರಾಟ ವಾದಂತಹ ತಂಡಗಳು. ಹೀಗಾಗಿ ಅಂದಿನ ಸಮಯಕ್ಕೆ ತಂಡಗಳ ಮೊತ್ತವನ್ನು ಇಂದಿನ ದಿನಕ್ಕೆ ಹೋಲಿಸಿದರೆ ಖಂಡಿತವಾಗಿ ಅವುಗಳ ಬೆಲೆ ಕೂಡ ಇಷ್ಟೇ ಆಗಿರುತ್ತದೆ. ಐಪಿಎಲ್ ನಲ್ಲಿ ನಿಮ್ಮ ನೆಚ್ಚಿನ ತಂಡ ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಶೇರ್ ಮಾಡಿಕೊಳ್ಳಿ.