ಅದ್ಯಾಕೆ ಧೋನಿ ರವರು ಬ್ಯಾಟಿಂಗ್ ಮಾಡುವ ಮುನ್ನ ಬ್ಯಾಟ್ ಕಚ್ಚುತ್ತಾರೆ ಗೊತ್ತೇ?? ಅಮಿತ್ ಮಿಶ್ರಾ ಹೇಳಿದ ಸೀಕ್ರೆಟ್ ಏನು ಗೊತ್ತೇ??

ಅದ್ಯಾಕೆ ಧೋನಿ ರವರು ಬ್ಯಾಟಿಂಗ್ ಮಾಡುವ ಮುನ್ನ ಬ್ಯಾಟ್ ಕಚ್ಚುತ್ತಾರೆ ಗೊತ್ತೇ?? ಅಮಿತ್ ಮಿಶ್ರಾ ಹೇಳಿದ ಸೀಕ್ರೆಟ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳು ಬಂದ ನಂತರ ಪ್ರತಿ ಹಾಗೂ ಅತ್ಯಂತ ಸೂಕ್ಷ್ಮ ಮತ್ತು ಸಣ್ಣ ಸಣ್ಣ ವಿಚಾರಗಳು ಸಹ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತವೆ. ಈಗ ಬೇರೆ ಐಪಿಎಲ್ ನಡೆಯುತ್ತಿದೆ. ಮೈದಾನದ ಒಳಗೆ ಮಾತ್ರವಲ್ಲದೇ ಮೈದಾನದ ಹೊರಗಡೆ ನಡೆಯುವ ವಿಚಾರಗಳು ಸಹ ಟಾಕ್ ಆಫ್ ದಿ ಟೌನ್ ಆಗುತ್ತವೆ. ಮೊನ್ನೆ ಸಹ ಇಂತಹುದೇ ಒಂದು ಘಟನೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡೆಯುತ್ತಿದ್ದ ಪಂದ್ಯದ ವೇಳೆ ಬ್ಯಾಟಿಂಗ್ ಗೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರೆಡಿಯಾಗಿದ್ದರು.

ಪ್ಯಾಡ್ ಕಟ್ಟಿಕೊಂಡಿದ್ದ ಧೋನಿ ತಮ್ಮ ಬ್ಯಾಟ್ ನ್ನು ನಿರಂತರವಾಗಿ ಕಚ್ಚುತ್ತಿದ್ದರು. ಇದು ಕ್ಯಾಮೆರಾದಲ್ಲಿ ಸೆರೆಯಾಯಿತು. ಈ ಬಗ್ಗೆ ಥರೇಹವಾರಿ ಚರ್ಚೆ ಸಹ ನಡೆಯಿತು. ಧೋನಿಗೆ ಹಸಿವಾಗಿರಬೇಕು ಹಾಗಾಗಿ ಊಟದ ಬದಲು ಬ್ಯಾಟ್ ತಿನ್ನುತ್ತಿದ್ದಾರೆ ಎಂಬ ವ್ಯಂಗ್ಯಭರಿತ ಟ್ರೋಲ್ ಗಳು ಶುರುವಾದವು. ಇನ್ನು ಧೋನಿ ವಿರೋಧಿಗಳು , ಧೋನಿ ಮೈದಾನದಲ್ಲಿ ಕೇವಲ ಬಾಲ್ ತಿನ್ನುವುದಿಲ್ಲ, ಬದಲಾಗಿ ಹೊರಗಡೆ ಬ್ಯಾಟ್ ಸಹ ತಿನ್ನುತ್ತಾರೆ ಎಂದು ಟ್ರೋಲ್ ಮಾಡಿದರು. ಆದರೇ ಧೋನಿ ಬ್ಯಾಟ್ ತಿಂದ ಅಸಲಿ ಸತ್ಯವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಅಮಿತ್ ಮಿಶ್ರಾ ಬಹಿರಂಗಪಡಿಸಿದ್ದಾರೆ.

ಧೋನಿ ಬಹಳ ಶಿಸ್ತಿನ ಮನುಷ್ಯ. ಅವರು ಬ್ಯಾಟಿಂಗ್ ಗೆ ಇಳಿಯುವ ಮುನ್ನ ಅವರ ಬ್ಯಾಟ್ ಸಾಕಷ್ಟು ಕ್ಲೀನ್ ಆಗಿರಬೇಕು. ಬ್ಯಾಟ್ ಮೇಲೆ ಏನಾದರೂ ಟೇಪ್ ಇದ್ದರೇ ಸಹ ಅವರು ಅದನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಕೈಯಿಂದ ತೆಗೆಯಲು ಬಾರದಿದ್ದಾಗ ಬಾಯಿಂದ ಕಚ್ಚಿ ತೆಗೆಯಲು ಪ್ರಯತ್ನಿಸಿದ್ದಾರೆ. ಆಗ ಎಲ್ಲರೂ ಬ್ಯಾಟ್ ತಿನ್ನುತ್ತಿದ್ದಾರೆ ಎಂದು ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.