ಕೆಜಿಎಫ್ ಚಾಪ್ಟರ್ 3 ಚಿತ್ರದ ಕುರಿತಂತೆ ಕೊನೆಗೂ ಮೌನ ಮುರಿದ ನಿರ್ಮಾಪಕ ಹೇಳಿದ್ದೇನು ಗೊತ್ತಾ?? ಎಷ್ಟೆಲ್ಲ ಪ್ಲಾನ್ ಮಾಡಿದ್ದಾರೆ ಗೊತ್ತೇ??

ಕೆಜಿಎಫ್ ಚಾಪ್ಟರ್ 3 ಚಿತ್ರದ ಕುರಿತಂತೆ ಕೊನೆಗೂ ಮೌನ ಮುರಿದ ನಿರ್ಮಾಪಕ ಹೇಳಿದ್ದೇನು ಗೊತ್ತಾ?? ಎಷ್ಟೆಲ್ಲ ಪ್ಲಾನ್ ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗ ಸದ್ಯದ ಮಟ್ಟಿಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಹೆಸರು ಎಂದರೆ ಅದು ನಮ್ಮೆಲ್ಲರ ಕನ್ನಡದ ಹೆಮ್ಮೆಯ ಚಿತ್ರವಾಗಿರುವ ರಾಕಿಂಗ್ ಸ್ಟಾರ್ ನಾಯಕನಾಗಿ ಕಾಣಿಸಿಕೊಂಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಜನಪ್ರಿಯತೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಎಲ್ಲಾ ರೆಕಾರ್ಡ್ ಗಳನ್ನು ಮುರಿದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಹಿಂದಿಯಲ್ಲಿ ಕೂಡ ಎರಡನೇ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವಾಗಿ ಕಾಣಿಸಿಕೊಂಡಿದೆ.

ಜಾಗತಿಕವಾಗಿ ಕೂಡ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಮೂರನೇ ಭಾರತೀಯ ಸಿನಿಮಾವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಕಾಣಿಸಿಕೊಂಡಿದೆ. ಬಾಹುಬಲಿ 2 ಚಿತ್ರದ ದಾಖಲೆಯನ್ನು ಮು’ರಿಯಲು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಕೆಲವೇ ಕೋಟಿಗಳ ಅವಶ್ಯಕತೆ ಇದೆ. ನಿಜಕ್ಕೂ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಇಂತಹ ದೊಡ್ಡ ಮಟ್ಟದ ಅಭೂತಪೂರ್ವ ಯಶಸ್ಸನ್ನು ಕಾಣುತ್ತದೆ ಎಂಬುದನ್ನು ಯಾರು ಕೂಡ ಅಂದಾಜು ಮಾಡಿರಲು ಕೂಡ ಸಾಧ್ಯವಿಲ್ಲ. ನಿಜಕ್ಕೂ ಕೂಡಾ ಪ್ರತಿಯೊಬ್ಬ ಕನ್ನಡ ಹಾಗೂ ಕನ್ನಡ ಚಿತ್ರರಂಗವನ್ನು ಪ್ರೀತಿಸುವ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ ಎಂದರೆ ತಪ್ಪಾಗಲಾರದು.

ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಚಾಪ್ಟರ್ 3 ಕೂಡ ಬರಲಿದೆ ಎಂಬುದಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು‌. ಆದರೆ ಇವುಗಳು ಕೇವಲ ಗಾಳಿಸುದ್ದಿಗಳು ಹಾಗೂ ಊಹಾಪೋಹಗಳ ಆಗಿದ್ದವು. ಆದರೆ ಈಗ ಸ್ವತಹ ನಿರ್ಮಾಪಕ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ರವರೇ ಈ ಕುರಿತಂತೆ ಪ್ರತಿಷ್ಟಿತ ಪತ್ರಿಕೆಯ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಹೌದು ಗೆಳೆಯರೇ ಈ ವರ್ಷದ ಅಂತ್ಯದಲ್ಲಿ ಕೆಜಿಎಫ್ ಚಾಪ್ಟರ್ 3 ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂಬುದಾಗಿ ಹೇಳಿದ್ದು 2024 ರಲ್ಲಿ ಬಿಡುಗಡೆಯಾಗಬಹುದು ಎನ್ನುವುದಾಗಿ ವಿಜಯ್ ಕಿರಗಂದೂರು ರವರು ಈಗಾಗಲೇ ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದಾಗಿದೆ.

ಸದ್ಯಕ್ಕೆ ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಕೂಡ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಚಿತ್ರೀಕರಣ ಈಗಾಗಲೇ 30% ಮುಗಿದಿದ್ದು ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ಒಳಗಡೆ ಗಾಗಿ ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಕೆಜಿಎಫ್ ಚಾಪ್ಟರ್ 3 ಚಿತ್ರದ ಮೂಲಕ ಮಾರ್ವೆಲ್ ಸಿನಿಮಾಗಳ ಹಾಗೆ ಹೊಸ ಹೊಸ ಐಕಾನಿಕ್ ಪಾತ್ರೆಗಳ ವಿಶ್ವವನ್ನೇ ನಾವು ರಚಿಸಿದ್ದೇವೆ ಎಂಬುದಾಗಿ ಹೇಳಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ರವರ ಈ ಮಾತು ಇನ್ನೊಂದು ಸಾಧ್ಯತೆಯ ಕಡೆಗೆ ಬೊಟ್ಟು ಮಾಡಿ ತೋರಿಸಿದೆ.

ಅದೇನೆಂದರೆ ಕೆಜಿಎಫ್ ಚಾಪ್ಟರ್ 3 ರಲ್ಲಿ ಸಲಾರ್ ನಾಯಕ ಪ್ರಭಾಸ್ ಕೂಡ ಇರಲಿದ್ದಾರೆ ಎಂಬ ಸುದ್ದಿಗಳು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇನ್ನು ಕೆಜಿಎಫ್ ಚಾಪ್ಟರ್ 3 ಚಿತ್ರಕ್ಕಾಗಿ ವಿಲನ್ ಪಾತ್ರದಲ್ಲಿ ನಟಿಸುವಂತೆ ನಟ ರಾಣಾ ದಗ್ಗುಬಾಟಿ ರವರಿಗೆ ಆಹ್ವಾನ ಹೋಗಿದೆ ಎಂಬ ಮಾತುಗಳು ಕೂಡ ಚಿತ್ರರಂಗದಲ್ಲಿ ಹೆಚ್ಚಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರವೀನ ತಂಡನ್ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿದ್ದರು. ಕೆಜಿಎಫ್ ಚಾಪ್ಟರ್ 3ರಲ್ಲಿ ಇನ್ನು ಯಾವ ಅನಟರು ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೆಜಿಎಫ್ ಚಾಪ್ಟರ್ 3 ಚಿತ್ರ ಖಂಡಿತವಾಗಿ ಬಿಡುಗಡೆಯಾದರೆ ಭಾರತೀಯ ಚಿತ್ರರಂಗದ ಇರುವಂತಹ ಎಲ್ಲಾ ದಾಖಲೆಗಳನ್ನು ನಿರ್ಣಾಮ ಮಾಡುವುದರಲ್ಲಿ ಯಾವುದೇ ಅನುಮಾನ ಪಡಬೇಕಾಗಿಲ್ಲ. ಕೆಜಿಎಫ್ ಚಾಪ್ಟರ್ 3 ಚಿತ್ರದ ಕುರಿತಂತೆ ನೀವು ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.