ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೆಜಿಎಫ್-2 ಎದುರು ಸಿನಿಮಾ ಬಿಡುಗಡೆ ಮಾಡಿ ಸೋತ ವಿಜಯ್ ತಂದೆ ಕೆಜಿಎಫ್ ವೀಕ್ಷಣೆ ಮಾಡಿ ಹೇಳಿದ್ದೇನು ಗೊತ್ತೆ?? ವಿವಾದ ಸೃಷ್ಟಿ ಮಾಡಿದ ಅವರ ಮಾತುಗಳೇನು ಗೊತ್ತೇ??

211

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮೆಲ್ಲರ ನೆಚ್ಚಿನ ಕನ್ನಡದ ಹೆಮ್ಮೆಯ ಸಿನಿಮಾ ವಾಗಿರುವ ಕೆಜಿಎಫ್ ಚಾಪ್ಟರ್ 2 ಈಗಾಗಲೇ ಬಿಡುಗಡೆಯಾಗಿ ಸಾವಿರಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದಂತಹ ಇತಿಹಾಸ ಸೃಷ್ಟಿಸಿದೆ. ಬಹುತೇಕ ಭಾರತೀಯ ಚಿತ್ರರಂಗದ ಪ್ರಮುಖ ಎಲ್ಲಾ ಭಾಷೆಗಳ ಚಿತ್ರರಂಗವನ್ನು ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ದೃಷ್ಟಿಯನ್ನು ಹಾಯಿಸುವಂತಹ ಪ್ರಮುಖ ಕಾರ್ಯವನ್ನು ಕೆಜಿಎಫ್ ಚಾಪ್ಟರ್ 2 ಮಾಡಿದೆ. ಕರ್ನಾಟಕಕ್ಕಿಂತ ಹೆಚ್ಚಾಗಿ ಬೇರೆ ರಾಜ್ಯಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಮಾಡಿರುವಂತಹ ಕಲೆಕ್ಷನ್ ಹೆಚ್ಚಾಗಿದೆ ಎಂದು ಹೇಳಬಹುದು.

ಅಷ್ಟರಮಟ್ಟಿಗೆ ಪರಭಾಷಿಗರು ಅವರ ಭಾಷೆಯ ಸಿನಿಮಾಗಿಂತ ಹೆಚ್ಚಾಗಿ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಮೆಚ್ಚಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ತಮಿಳು ಚಿತ್ರರಂಗದ ಸ್ಟಾರ್ ನಟನಾಗಿರುವ ತಲಪತಿ ವಿಜಯ್ ರವರ ಬೀಸ್ಟ್ ಚಿತ್ರ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಎದುರು ತಮಿಳುನಾಡಿನಲ್ಲಿ ಸೋತಿತ್ತು ಎಂದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ತಲಪತಿ ವಿಜಯ್ ರವರ ತಂದೆ ಚಂದ್ರಶೇಖರ್ ರವರು ನೋಡಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ ಬನ್ನಿ ತಿಳಿಯೋಣ.

ಹೌದು ಗೆಳೆಯರಿಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿರುವ ನಂತರ ಚಂದ್ರಶೇಖರ್ ರವರು ಚಿತ್ರದಲ್ಲಿ ಸಾಕಷ್ಟು ಲೋಪದೋಷಗಳಿದ್ದರೂ ಕೂಡ ಅವುಗಳನ್ನೆಲ್ಲ ನಿರ್ಲಕ್ಷಿಸಿ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ ಎಂಬುದಾಗಿ ನಿರ್ಲಕ್ಷದ ಮಾತುಗಳನ್ನು ಆಡಿದ್ದಾರೆ. ಈ ಕುರಿತಂತೆ ತಿಳಿದ ನಂತರ ಪ್ರೇಕ್ಷಕರು ನಿಮ್ಮ ಮಗನ ಚಿತ್ರವನ್ನು ಮೊದಲು ಲೋಪದೋಷಗಳಿಂದ ಮುಕ್ತವಾಗಿಸಿ ನಂತರ ಬೇರೆಯವರ ಸಿನಿಮಾದ ಕುರಿತಂತೆ ಮಾತನಾಡಿ ಎಂಬುದಾಗಿ ಟೀಕಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ಬೀಸ್ಟ್ ಸಿನಿಮಾದ ಸೋಲಿಗೆ ಚಿತ್ರದ ನಿರ್ದೇಶಕ ರಾಗಿರುವ ನೆಲ್ಸನ್ ದಿಲೀಪ್ ಕುಮಾರ್ ಅವರನ್ನು ಕೂಡ ವಿಜಯ್ ರವರ ತಂದೆ ಟೀಕಿಸಿದ್ದರು ಎನ್ನುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ.

Get real time updates directly on you device, subscribe now.