ಸನ್ರೈಸರ್ಸ್ ತಂಡದ ವಿರುದ್ಧ ಅದ್ಭುತವಾಗಿ ಸಿಕ್ಸರ್ ಗಳನ್ನು ಬಾರಿಸಿದ ದಿನೇಶ್ ರವರಿಗೆ ಕೊಹ್ಲಿ ಮಾಡಿದೆನು ಗೊತ್ತೇ?? ಕೊಹ್ಲಿ ಈ ರೀತಿ ಮಾಡುತ್ತಾರೆ ಎಂದು ಯಾರು ಊಹೆ ಕೂಡ ಮಾಡಿರಲಿಲ್ಲ.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಬರೋಬ್ಬರಿ 67 ರನ್ನುಗಳ ವಿಜಯವನ್ನು ಸಾಧಿಸಿದೆ. ಹಾಗೂ ಕಳೆದ ಪಂದ್ಯದ ಸೋಲಿನ ರಿವೆಂಜ್ ಅನ್ನು ತೀರಿಸಿ ಕೊಂಡಿದೆ ಎಂದರೆ ತಪ್ಪಾಗಲಾರದು. ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಮೂರು ವಿಕೆಟ್ ನಷ್ಟಕ್ಕೆ 192 ರನ್ನುಗಳನ್ನು ಬಾರಿಸಿತ್ತು. ಆದರೆ ಕೊನೆಯಲ್ಲಿ 8 ಎಸೆತಗಳ ಮುಂದೆ 30 ರನ್ನುಗಳನ್ನು ಬಾರಿಸುವ ಮೂಲಕ ಈ ಟೋಟಲ್ ಸ್ಕೋರ್ ಆಗುವಂತೆ ಮಾಡಿದ್ದು ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ಆಗಿರುವ ದಿನೇಶ್ ಕಾರ್ತಿಕ್ ಎಂದರೆ ತಪ್ಪಾಗಲಾರದು.

ಇನ್ನು ನಿನ್ನೆ ಕೂಡ ವಿರಾಟ್ ಕೊಹ್ಲಿ ಅವರು ಶೂನ್ಯಕ್ಕೆ ಔಟ್ ಆಗುವ ಮೂಲಕ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರಿಸಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ನಿನ್ನೆ ದಿನೇಶ್ ಕಾರ್ತಿಕ್ ರವರು ಗ್ಲೆನ್ ಮ್ಯಾಕ್ಸ್ವೆಲ್ ಔಟಾದ ನಂತರ ಪ್ರೀತಿಗೆ ಬಂದಮೇಲೆ ಮಾಡಿದ ಮ್ಯಾಜಿಕ್ ನಿಜಕ್ಕೂ ಕೂಡ ಎಲ್ಲರ ಮನಗೆದ್ದಿತ್ತು. ಹೌದು ಗೆಳೆಯರೇ ಅದರಲ್ಲೂ ಕೂಡ ದಿನೇಶ್ ಕಾರ್ತಿಕ್ ರವರು ಕೊನೆಯ ಓವರ್ ನಲ್ಲಿ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಮೇತ 25 ರನ್ನುಗಳನ್ನು ಬಾರಿಸಿದ್ದು ನಿಜಕ್ಕೂ ಕೂಡ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಯಿತು. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದ ಸೆಲೆಕ್ಟರ್ ಗಳಿಗೆ ತಾನು ವಿಶ್ವಕಪ್ ಆಡಲು ಸಿದ್ಧ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ ಎಂಬಂತಾಗಿದೆ. ಈ ಇನ್ನಿಂಗ್ಸನ್ನು ಆಡಿ ಡ್ರೆಸ್ಸಿಂಗ್ ರೂಮ್ ಗೆ ಬಂದನಂತರ ವಿರಾಟ್ ಕೊಹ್ಲಿ ಮಾಡಿದ್ದು ಎಲ್ಲರಿಗೂ ಆಶ್ಚರ್ಯ ತರಿಸಿದೆ.

ಹೌದು ಗೆಳೆಯರೇ ಎಂಟು ಎಸೆತಗಳ ಮುಂದೆ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದಂತೆ 30 ರನ್ನುಗಳನ್ನು ಬಾರಿಸಿ ಡ್ರೆಸ್ಸಿಂಗ್ ರೂಮಿಗೆ ಬಂದ ನಂತರ ದಿನೇಶ್ ಕಾರ್ತಿಕ್ ರವರಿಗೆ ವಿರಾಟ್ ಕೊಹ್ಲಿ ರವರು ತಲೆಬಾಗಿ ವೆಲ್ಕಮ್ ಮಾಡಿದ್ದಾರೆ. ರನ್ ಮಷೀನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ರವರು ಕೂಡ ದಿನೇಶ್ ಕಾರ್ತಿಕ್ ರವರಿಗೆ ತಲೆಬಾಗಿದ್ದು ದಿನೇಶ್ ಕಾರ್ತಿಕ್ ರವರು ಆಟ ಯಾವ ಮಟ್ಟಿಗೆ ಇದ್ದಿರಬಹುದು ಎಂಬುದು ನೀವೇ ಅಂದಾಜಿಸಿ ಕೊಳ್ಳಿ. ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದ ರೀತಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.