ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರೋಹಿತ್ ನಂತರದ ನಾಯಕನ ಸ್ಥಾನಕ್ಕೆ ರಾಹುಲ್ ಹಾಗೂ ಪಾಂಡ್ಯರವರನ್ನು ಹಿಂದಿಕ್ಕಿದ ಮತ್ತೊಬ್ಬ ಯುವ ನಾಯಕ ಯಾರಂತೆ ಗೊತ್ತೇ??

2,718

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ತಿಳಿದಿರುವಂತೆ ಈ ಬಾರಿಯ ಟಾಟಾ ಐಪಿಎಲ್ 2022 ಮುಕ್ಕಾಲು ಭಾಗ ಮುಗಿದಂತೆ ಎಂದು ಹೇಳಬಹುದಾಗಿದೆ. ಇದೇ ಮೇ ಅಂತ್ಯಕ್ಕೆ ಈ ಬಾರಿಯ ಐಪಿಎಲ್ ಮುಗಿಯಲಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿರುವ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಕಳಪೆ ಮಟ್ಟದಲ್ಲಿ ಪ್ರದರ್ಶನ ನೀಡಿದೆ. ಹೀಗಾಗಿ ಸಹಜವಾಗಿಯೇ ರೋಹಿತ್ ಶರ್ಮ ರವರ ನಾಯಕತ್ವದ ಮೇಲೆ ಎಲ್ಲರಿಗೂ ಕೂಡ ಅನುಮಾನ ಮೂಡಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ವಲಯದಲ್ಲಿ ರೋಹಿತ್ ಶರ್ಮ ರವರ ನಂತರ ಮುಂದಿನ ಕ್ಯಾಪ್ಟನ್ ಯಾರು ಎನ್ನುವ ಮಾತುಕತೆಗಳು ಪ್ರಾರಂಭವಾಗಿವೆ. ಯಾಕೆಂದರೆ ಐಪಿಎಲ್ನಲ್ಲಿ ರೋಹಿತ್ ಶರ್ಮಾ ರವರು ಐದು ಬಾರಿಯ ಚಾಂಪಿಯನ್ ಆಗಿದ್ದರು ಕೂಡ ಈ ಬಾರಿ ಅವರ ಕ್ರಿಕೆಟ್ ಜೀವಮಾನದಲ್ಲೇ ಅತ್ಯಂತ ಕಳಪೆ ಪ್ರದರ್ಶನವನ್ನು ತೋರಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇದೇ ವರ್ಷ ಆಸ್ಟ್ರೇಲಿಯದಲ್ಲಿ ಟಿ ಟ್ವೆಂಟಿ ವರ್ಲ್ಡ್ ಕಪ್ ಕೂಡ ಇರುವುದರಿಂದ ರೋಹಿತ್ ಶರ್ಮಾ ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಇಂತಹ ದೊಡ್ಡ ವೇದಿಕೆಯಲ್ಲಿ ಹೇಗೆ ಮುನ್ನಡೆಸಲಿದ್ದಾರೆ ಎನ್ನುವ ಅನುಮಾನಗಳು ಕೂಡ ಮೂಡಿವೆ.

ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ರವರು ನಾಯಕನಾಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರವರನ್ನು ನಾಯಕನನ್ನಾಗಿ ತಯಾರು ಮಾಡಿದ್ದರು. ಇನ್ನು ವಿರಾಟ್ ಕೊಹ್ಲಿ ಅವರು ತಂಡವನ್ನು ರೋಹಿತ್ ಶರ್ಮಾ ರವರಿಗೆ ಈಗಾಗಲೇ ಒಪ್ಪಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಯುವ ಆಟಗಾರರನ್ನು ನಾಯಕನನ್ನಾಗಿ ತಯಾರು ಮಾಡಿಲ್ಲ. ಹೀಗಾಗಿ ಸಹಜವಾಗಿಯೇ ರೋಹಿತ್ ಶರ್ಮಾ ರವರ ನಂತರ ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ ಗಳಲ್ಲಿ ತಂಡವನ್ನು ಮುನ್ನಡೆಸಬಲ್ಲ ಅಂತಹ ಸಮರ್ಥ ನಾಯಕ ಯಾರು ಎನ್ನುವ ಗೊಂದಲಗಳು ದೊಡ್ಡಮಟ್ಟದಲ್ಲಿ ಹರಿದಾಡಿವೆ. ಆದರೆ ಕೆಲವೊಂದು ಹೆಸರುಗಳು ಈಗಾಗಲೇ ಬಂದು ಹೋಗಿವೆ.

ಹೌದು ಗೆಳೆಯರೇ ಈಗಾಗಲೇ ಕೆಎಲ್ ರಾಹುಲ್ ಅವರ ಹೆಸರು ಕೂಡ ಮುಂಚೂಣಿ ಸ್ಥಾನದಲ್ಲಿ ಕೇಳಿಬರುತ್ತಿದೆ. ಇವರ ಜೊತೆಗೆ ಈ ಬಾರಿ ಐಪಿಎಲ್ ನಲ್ಲಿ ನಾಯಕನಾಗಿ ತಂಡವನ್ನು ಅದ್ಭುತ ರೀತಿಯಲ್ಲಿ ಮುನ್ನಡೆಸಿರುವ ಹಾರ್ದಿಕ್ ಪಾಂಡ್ಯ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ರವರ ಹೆಸರು ಕೂಡ ಕೇಳಿ ಬರುತ್ತಿದೆ. ಹಾರ್ದಿಕ್ ಪಾಂಡ್ಯ ರವರು ಇಂಜುರಿ ಯಿಂದಾಗಿ ಆಗಾಗ ತಂಡದಿಂದ ಹೊರಗೆ ಹೋಗುವ ಕಾರಣದಿಂದಾಗಿ ಅವರನ್ನು ನಂಬಿ ಕೊಳ್ಳಲು ಸಾಧ್ಯವಿಲ್ಲ. ಇನ್ನು ಉಳಿದಿರುವುದು ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಅವರ ಹೆಸರು.

ಸಾಮಾನ್ಯವಾಗಿ ಅನುಭವದ ಮೇರೆಗೆ ನೋಡುವುದಾದರೆ ಕೆ ಎಲ್ ರಾಹುಲ್ ರವರಿಗೆ ಮೊದಲ ಆದ್ಯತೆ ಸಿಗಬಹುದು ಎನ್ನಬಹುದಾಗಿದೆ. ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರ ಸಾಧನೆ ಅಷ್ಟೊಂದು ಉತ್ತಮವಾಗಿಲ್ಲ. ಐಪಿಎಲ್ ನಲ್ಲಿ ಈ ಬಾರಿ ಅವರ ಸಾಧನೆ ಸಮಾಧಾನಕರವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಎಲ್ಲಾ ಮಾಜಿ ಕ್ರಿಕೆಟಿಗರು ಹೇಳುವಂತೆ ರಿಷಬ್ ಪಂತ್ ರವರು ಉತ್ತಮ ಆಯ್ಕೆ ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಅವರು ನೀಡುವಂತಹ ಕಾರಣಗಳು ಕೂಡ ನ್ಯಾಯ ಪರವಾಗಿದೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೆ ಕೆಎಲ್ ರಾಹುಲ್ ರವರು ಉತ್ತಮ ನಾಯಕನಾಗಿ ಬಹುದು ಆದರೆ ರಿಷಬ್ ಪಂತ್ ಅವರ ಹಾಗೆ ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ. ರಿಷಬ್ ಪಂತ್ ರವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಕೂಡ ಧೈರ್ಯವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಆಟಗಾರ ಹಾಗೂ ತಂಡದ ನಾಯಕರಾಗಿದ್ದಾರೆ ಎಂಬುದಾಗಿ ಹಲವಾರು ಲೆಜೆಂಡರಿ ಆಟಗಾರರು ಹೇಳಿದ್ದಾರೆ. ಕೆ ಎಲ್ ರಾಹುಲ್ ರವರಿಗೆ ಹೋಲಿಸಿದರೆ ರಿಷಬ್ ಪಂತ್ ರವರಿಗೆ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಂತಹ ಒತ್ತಡದಲ್ಲಿಯೂ ಕೂಡ ಉತ್ತಮ ಪ್ರದರ್ಶನವನ್ನು ನೀಡುವಂತಹ ಸಾಮರ್ಥ್ಯ ಹೆಚ್ಚಿದೆ ಎಂಬುದಾಗಿ ಹೇಳುತ್ತಾರೆ.

ರಿಷಬ್ ಪಂತ್ ರವರ ಆಟವನ್ನು ಹಾಗೂ ನಾಯಕತ್ವವನ್ನು ನೋಡಿದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ಸೌರವ್ ಗಂಗೂಲಿ ಅವರ ನೆನಪಾಗುತ್ತದೆ ಎಂಬುದಾಗಿ ಕೂಡ ಹಿರಿಯ ಆಟಗಾರರು ಹೇಳುತ್ತಿದ್ದಾರೆ. ಇನ್ನು ಅದೇ ವಿಧದಲ್ಲಿ ಕೆಎಲ್ ರಾಹುಲ್ ರವರ ನಾಯಕತ್ವದ ನಿರ್ಧಾರಗಳನ್ನು ನೋಡುವುದಾದರೆ ಸಪ್ಪೆಯಾಗಿದೆ ಎಂಬುದಾಗಿ ಹೇಳುತ್ತಿದ್ದಾರೆ. ಕೆ ಎಲ್ ರಾಹುಲ್ ರವರು ಬೇಸಿಕ್ ನಾಯಕತ್ವಕ್ಕೆ ಸ್ಟಿಕ್ ಆದರೆ ಅದೇ ವೇಳೆಯಲ್ಲಿ ಇತ್ತ ರಿಷಬ್ ಪಂತ್ ರವರು ಪ್ರಯೋಗಾತ್ಮಕ ನಾಯಕತ್ವವನ್ನು ತಮ್ಮ ನಾಯಕತ್ವದ ಶೈಲಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ರೋಹಿತ್ ಶರ್ಮ ರವರ ನಾಯಕತ್ವದ ಅನಂತರ ರಿಷಬ್ ಪಂತ್ ರವರೆ ಸೂಕ್ತ ಎನ್ನುವುದಾಗಿ ಹೇಳುತ್ತಿದ್ದಾರೆ ಆದರೆ ಕೆಎಲ್ ರಾಹುಲ್ ರವರು ಕೂಡ ಪೈಪೋಟಿಯಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದನ್ನು ಮುಂದಿನ ದಿನಗಳಲ್ಲಿಯೇ ಕಾದುನೋಡಬೇಕಾಗಿದೆ. ನಿಮ್ಮ ಪ್ರಕಾರ ಭಾರತೀಯ ಕ್ರಿಕೆಟ್ ತಂಡದ ಮುಂದಿನ ನಾಯಕ ಯಾರಾಗುತ್ತಾರೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.