ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೋಹನ್ ಜುನೇಜಾ ರವರ ಕುಟುಂಬದ ಸಹಾಯಕ್ಕೆ ನಿಂತ ಹೊಂಬಾಳೆ ಫಿಲಂಸ್: ಸಹಾಯಧನ ಎಂದು ನೀಡಿದ ಹಣವೆಷ್ಟು ಗೊತ್ತೇ?? ನೆಟ್ಟಿಗರು ಇಷ್ಟೇನಾ ಎಂದಿದ್ದು ಯಾಕೆ ಗೊತ್ತೇ?

462

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿನ್ನೆಯಷ್ಟೇ ನಾಡು ಮೆಚ್ಚಿರುವ ಶ್ರೇಷ್ಠ ಹಾಸ್ಯ ಕಲಾವಿದರಲ್ಲೊಬ್ಬರಾಗಿರುವ ಮೋಹನ್ ಜುನೇಜ ರವರನ್ನು ನಾವು ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದುಕೊಂಡಿದ್ದೇವೆ. ನಿಜಕ್ಕೂ ಕೂಡ ಅವರನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇತ್ತೀಚಿಗಷ್ಟೇ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಆದರೆ ಅವರ ಆರೋಗ್ಯ ಎನ್ನುವುದು ಚಿಕಿತ್ಸಿಕ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಹೀಗಾಗಿ ನಿನ್ನೆ ರಾತ್ರಿ ಅಕಾಲಿಕವಾಗಿ ನಮ್ಮನೆಲ್ಲ ಆಗಲಿದ್ದಾರೆ ಎಂದು ಹೇಳಬಹುದಾಗಿದೆ. ಸ್ವಗೃಹದಲ್ಲಿ ಸಾರ್ವಜನಿಕ ಅಂತಿಮದರ್ಶನಕ್ಕೆ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ತಮ್ಮೇನಹಳ್ಳಿ ಯಲ್ಲಿ ಅವರ ಅಂತಿಮ ಕಾರ್ಯವನ್ನು ಮಾಡಲಾಗುತ್ತದೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರಾಗಿರುವ ಮೋಹನ್ ಜುನೇಜ ಅವರನ್ನು ಕಳೆದುಕೊಂಡ ನಂತರ ಕನ್ನಡ ಚಿತ್ರರಂಗ ಕಂಬನಿಯನ್ನು ಮಿಡಿದಿದೆ. ಚಿತ್ರರಂಗದ ಸೆಲೆಬ್ರೆಟಿಗಳು ಅಂತಿಮ ನಮನ ಸಲ್ಲಿಸಿದ್ದಾರೆ ಹಾಗೂ ಶ್ರದ್ಧಾಂಜಲಿಯನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಸಲ್ಲಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್ 1 ಹಾಗೂ 2ರಲ್ಲಿ ಮೋಹನ್ ಜುನೇಜ ರವರು ಆನಂದ್ ಇಂಗಳಗಿ ಅವರಿಗೆ ರಾಕಿ ಬಾಯ್ ಕುರಿತಂತೆ ಇನ್ಫಾರ್ಮಶನ್ ನೀಡುವಂತಹ ಪಾತ್ರವನ್ನು ನಿರ್ವಹಿಸಿದ್ದರು.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹೊಂಬಾಳೆ ಫಿಲಂಸ್ ತಮ್ಮ ಸಿನಿಮಾದಲ್ಲಿ ನಟಿಸುವಂತಹ ಎಲ್ಲರ ಕುರಿತಂತೆ ಕೂಡ ವಿಶೇಷ ಕಾಳಜಿವಹಿಸಿ ಇರುತ್ತದೆ. ಮೋಹನ್ ಜೂನಿಯರ್ ಅವರನ್ನು ಕಳೆದುಕೊಂಡ ಕೂಡಲೇ ಹೊಂಬಾಳೆ ಫಿಲ್ಮ್ಸ್ ರವರು ಶ್ರದ್ಧಾಂಜಲಿಯನ್ನು ಕೂಡ ಸಲ್ಲಿಸಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಮೋಹನ್ ಜುನೇಜ ರವರ ಕುಟುಂಬಕ್ಕೆ ಕೂಡ ಈ ಕಷ್ಟದ ಸಮಯದಲ್ಲಿ ಕೂಡಲೇ 50000 ರೂಪಾಯಿಗಳ ಧನಸಹಾಯವನ್ನು ಕೂಡ ಮಾಡಿ ನಿಮ್ಮ ಕಷ್ಟದಲ್ಲಿ ನಾವಿದ್ದೇವೆ ಎನ್ನುವ ಭರವಸೆಯನ್ನು ಕೂಡ ನೀಡಿದ್ದಾರೆ. ಹೊಂಬಾಳೆ ಫಿಲಂ ಸಂಸ್ಥೆಯ ಈ ಕಾರ್ಯ ನಿಜಕ್ಕೂ ಕೂಡ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇನ್ನು ಕೆಲವರು ಲಕ್ಷವಾದರೂ ಕೊಡಬೇಕಾಗಿತ್ತು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮೋಹನ್ ಜುನೇಜ ರವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಾಗೂ ಹೊಂಬಾಳೆ ಫಿಲಂಸ್ ರವರ ಈ ಕಾರ್ಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.