ಊಹಿಸದ ರೀತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಯಿತೇ ಆರ್ಸಿಬಿ, ಪ್ರಮುಖ ಪಂದ್ಯದಲ್ಲಿಯೇ ಇದೆಂತಹ ನಿರ್ಧಾರ ಎಂದು ನೆಟ್ಟಿಗರು??

ಊಹಿಸದ ರೀತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಯಿತೇ ಆರ್ಸಿಬಿ, ಪ್ರಮುಖ ಪಂದ್ಯದಲ್ಲಿಯೇ ಇದೆಂತಹ ನಿರ್ಧಾರ ಎಂದು ನೆಟ್ಟಿಗರು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ತಂಡದ ವಿರುದ್ಧ ಗೆದ್ದ ಖುಷಿಯಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮೇ 8 ರಂದು ಆಡಲಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯ ಆರಂಭದಲ್ಲಿಯೇ ಅಂದರೆ ಏಪ್ರಿಲ್ 23ರಂದು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹಾಡಿದಾಗ 68 ರನ್ನಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನ್ನು ಕಂಡಿತ್ತು.

ಹೀಗಾಗಿ ಈ ಬಾರಿ ಕೇನ್ ವಿಲಿಯಮ್ಸನ್ ಪಡೆಯ ಎದುರು ಆಡುವಾಗ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ವಲ್ಪ ಹುಷಾರಾಗಿರಬೇಕು. ತಂಡದ ಕೊರತೆಗಳ ಕುರಿತಂತೆ ಹೇಳುವುದಾದರೆ ಕಳೆದ ಪಂದ್ಯದಲ್ಲಿ ಬಹುತೇಕ ಎಲ್ಲಾ ಕೊರತೆಗಳು ಕೂಡ ದೂರವಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಡುಪ್ಲೆಸಿಸ್ ರವರು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು ಹಾಗೂ ವಿರಾಟ್ ಕೊಹ್ಲಿ ರವರು ಕೂಡ ಅವರಿಗೆ ಉತ್ತಮ ಸಾಥ್ ನೀಡಿದ್ದರು. ಆದರೆ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇರುವಂತಹ ಒಂದೇ ಒಂದು ಕೊರತೆ ಎಂದರೇ ಮೊಹಮ್ಮದ್ ಸಿರಾಜ್ ಅವರ ಕಳಪೆ ಬೌಲಿಂಗ್ ಎಂದು ಹೇಳಬಹುದಾಗಿದೆ. ಇದನ್ನು ಓದಿ: ಸಿರಾಜ್ ರವರ ಹೊರಗಿಟ್ಟು, ಸಿದ್ದಾರ್ಥ್ ಬೇಡ ಎಂದು ಈ ಯುವ ಆಟಗಾರನಿಗೆ ಚಾನ್ಸ್ ನೀಡಿದರೆ, ಪಕ್ಕಾ ಕಪ್ ನಮ್ದೇ ನಾ?? ಈತನ ರೆಕಾರ್ಡ್ ಗಳು ಹೇಗಿವೆ ಗೊತ್ತೇ??

ಹೌದು ಗೆಳೆಯರೆ ರನ್ ನೀಡುವುದರಲ್ಲಿ ಕೂಡ ಅವರ ದುಬಾರಿ ಆಗುತ್ತಿದ್ದಾರೆ ಹಾಗೂ ಯಾವುದೇ ವಿಕೆಟ್ ಗಳನ್ನು ಕೂಡ ಕೇಳುತ್ತಿಲ್ಲ ಹೀಗಾಗಿ ಅವರ ಬದಲಿಗೆ ಮತ್ತೊಬ್ಬ ಆಟಗಾರನನ್ನು ಈ ಪಂದ್ಯಕ್ಕೆ ಆರ್ಸಿಬಿ ತಂಡ ಹಾಕಿಕೊಳ್ಳಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಹೌದು ಗೆಳೆಯರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಔಟ್ ಆಫ್ ಫಾರ್ಮ್ ನಲ್ಲಿರುವ ಸಿರಾಜ್ ರವರ ಬದಲಿಗೆ ಸಿದ್ಧಾರ್ಥ್ ಕೌಲ್ ರವರನ್ನು ಪ್ಲೇಯಿಂಗ್ 11ರಲ್ಲಿ ಹಾಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಗೆಲ್ಲಲೇ ಬೇಕಾಗಿರುವಂತಹ ಪ್ರಮುಖ ಪಂದ್ಯದಲ್ಲೇ ಈ ಬದಲಾವಣೆ ಮಾಡಿದರೆ ಆರ್ಸಿಬಿ ಟೀಮ್ ಹೇಗೆ ಪ್ರದರ್ಶನವನ್ನು ನೀಡಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.