ಸಿರಾಜ್ ರವರ ಹೊರಗಿಟ್ಟು, ಸಿದ್ದಾರ್ಥ್ ಬೇಡ ಎಂದು ಈ ಯುವ ಆಟಗಾರನಿಗೆ ಚಾನ್ಸ್ ನೀಡಿದರೆ, ಪಕ್ಕಾ ಕಪ್ ನಮ್ದೇ ನಾ?? ಈತನ ರೆಕಾರ್ಡ್ ಗಳು ಹೇಗಿವೆ ಗೊತ್ತೇ??

ಸಿರಾಜ್ ರವರ ಹೊರಗಿಟ್ಟು, ಸಿದ್ದಾರ್ಥ್ ಬೇಡ ಎಂದು ಈ ಯುವ ಆಟಗಾರನಿಗೆ ಚಾನ್ಸ್ ನೀಡಿದರೆ, ಪಕ್ಕಾ ಕಪ್ ನಮ್ದೇ ನಾ?? ಈತನ ರೆಕಾರ್ಡ್ ಗಳು ಹೇಗಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಈಗ ಸುಲಭವಾಗಿ ತಲುಪಬೇಕು ಎಂದರೆ ಮುಂದಿನ ಮೂರು ಪಂದ್ಯಗಳಲ್ಲಿ ಖಂಡಿತವಾಗಲೂ ಕೂಡ ಜಯ ದಾಖಲಿಸಬೇಕು. ಒಂದು ವೇಳೆ ಒಂದು ಪಂದ್ಯ ಸೋತರೂ ಕೂಡ ಬೇರೆ ದಾರಿಯಿಲ್ಲದೆ ಗೆಲ್ಲುವ ಎರಡು ಪಂದ್ಯಗಳನ್ನು ಹೆಚ್ಚಿನ ಅಂತರದಿಂದ ಗೆದ್ದು ಒಂದು ಪಂದ್ಯವನ್ನು ಕಡಿಮೆ ಅಂತರದಿಂದ ಸೋಲಬೇಕಾಗುತ್ತದೆ. ಹೀಗೆ ಆದರೆ ಮಾತ್ರ ಆರ್ಸಿಬಿ ತಂಡ ಪ್ಲೇಆಫ್ ತಲುಪಲಿದೆ. ಆದರೆ ಇದೇ ಸಮಯದಲ್ಲಿ ಆರ್ಸಿಬಿ ತಂಡದಲ್ಲಿ ಬದಲಾವಣೆ ಅತ್ಯಗತ್ಯವಾಗಿದೆ ಎಂಬ ಮಾತುಗಳನ್ನು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

ಒಂದಲ್ಲ ಎರಡಲ್ಲ ಬರೋಬ್ಬರಿ 9 ಕೋಟಿ ಕೊಟ್ಟು ಉಳಿಸಿಕೊಂಡ ಆಟಗಾರ ಸತತವಾಗಿ ವೈಫಲ್ಯಗಳನ್ನು ಕಾಣುತ್ತಿರುವುದು ನಿಜಕ್ಕೂ ವಿಷಾದನೀಯ ಎಂಬ ಮಾತುಗಳು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಅದರಲ್ಲಿಯು ಆರ್ಸಿಬಿ ಕಳೆದ ಹಲವಾರು ಪಂದ್ಯಗಳಿಂದ ಪವರ್ ಪ್ಲೇನಲ್ಲಿ ವಿಕೆಟ್ಟು ತೆಗೆಯಲು ವಿಫಲವಾಗಿದೆ, ಆರ್ಸಿಬಿ ಪರ ಪ್ರಮುಖ ವಿಕೆಟ್ಗಳನ್ನು ತೆಗೆಯುತ್ತಿರುವ ಹರ್ಷಲ್ ಪಟೇಲ್ ರವರು ಹಾಗೂ ವನಿಂದು ಹಸರಂಗ ರವರು ಅವರು ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಮುಂದಿನ ಓವರ್ಗಳಲ್ಲಿ ರನ್ ಗಳಿಗೆ ಕಡಿವಾಣ ಹಾಕಿ ವಿಕೆಟ್ ಪಡೆಯಲು ಇವರ ಸೇವೆ ಅತ್ಯಗತ್ಯವಾಗಿರುತ್ತದೆ.

ಹೀಗಿರುವಾಗ ಮೊಹಮ್ಮದ್ ಸಿರಾಜ್ ಅವರ ಮೇಲೆ ಬಹಳ ಜವಾಬ್ದಾರಿ ಇದೆ. ಅದೇ ಕಾರಣಕ್ಕೆ ಆರ್ಸಿಬಿ ತಂಡವ ಕೂಡ ಮೊಹಮ್ಮದ್ ಸಿರಾಜ್ ರವರನ್ನು ಮೆಗಾ ಆಕ್ಷನ್ ಆದರೂ ಕೂಡ ಬಿಟ್ಟುಕೊಡದೆ ತಂಡದಲ್ಲಿ ಉಳಿಸಿಕೊಂಡು ಘಟಾನುಘಟಿ ಆಟಗಾರರನ್ನು ಬಿಟ್ಟುಕೊಟ್ಟಿದೆ. ಆದರೆ ಹೀಗಿರುವಾಗ ಮೊಹಮ್ಮದ್ ಸಿರಾಜ್ ರವರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣ ಮರೆತಂತೆ ಕಾಣುತ್ತಿದೆ. ಯಾಕೆಂದರೆ ಫೀಲ್ಡ್ ನಿಲ್ಲಿಸುವುದು ಒಂದು ರೀತಿಯಾದರೆ ಇವರು ಬೌಲಿಂಗ್ ಮಾಡುವುದು, ಒಂದು ರೀತಿ ಬಹುಶಹ ತಮಗೆ ತಿಳಿಯದಂತೆ ಎಲ್ಲೆಂದರಲ್ಲಿ ಬಾಲುಗಳನ್ನು ಹಾಕಿ ಬ್ಯಾಟ್ಸ್ ಮನ್ ಗಳಿಗೆ ಬೌಂಡರಿ ಗಳಿಸಲು ಸುಲಭವಾಗಿ ಅವಕಾಶ ನೀಡುತ್ತಿದ್ದಾರೆ.

ಇತರ ಬೌಲರ್ ಗಳು ಒಂದು ಲೆಂಥ್ ನಲ್ಲಿ ಬೌಲಿಂಗ್ ಮಾಡಿದರೇ ಇವರು ಮಾತ್ರ ಪ್ರತ್ಯೇಕ ದಾರಿಯಲ್ಲಿ ಹೋಗುತ್ತಿರುವುದು ಆರ್ಸಿಬಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಪವರ್ ಪ್ಲೇ ನಲ್ಲಿ ಈ ರೀತಿ ಆದರೆ ಕೊನೆಯ ವರ್ಗದಲ್ಲಂತೂ ಕೇಳಲೇಬೇಡಿ, ಸಾಕಷ್ಟು ರನ್ಗಳನ್ನು ನೀಡುತ್ತಿದ್ದು ಇನ್ನಿತರ ಬೌಲರ್ ಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ರನ್ನುಗಳನ್ನು ನೀಡುವ ಮೂಲಕ ಹಾಗೂ ಕಡಿಮೆ ವಿಕೆಟ್ಗಳನ್ನು ಕಬಳಿಸುವ ಮೂಲಕ ಆರ್ಸಿಬಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.

ಇಂತಹ ಸಮಯದಲ್ಲಿ ಬದಲಿ ಆಟಗಾರನಿಗೆ ಹುಡುಕುವ ಸಮಯ ಇದಾಗಿದ್ದು ಖಂಡಿತ ಮೊಹಮ್ಮದ್ ಸಿರಾಜ್ ರವರಿಗೆ ಒಂದೆರಡು ಪಂದ್ಯಗಳ ಕಾಲ ವಿಶ್ರಾಂತಿ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದೆಲ್ಲದರ ನಡುವೆ ಸಿದ್ದಾರ್ಥ ಅವರ ಹೆಸರು ಮಾತ್ರ ಕೇಳಿ ಬರುತ್ತಿದೆ. ಆದರೆ ಸಿದ್ದಾರ್ಥ್ ಕೌಲ್ ಅವರನ್ನು ಆಯ್ಕೆ ಮಾಡಬೇಡಿ ಎಂದು ಹಲವಾರು ಜನ ಕೂಡ ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಹಲವಾರು ಐಪಿಎಲ್ ಪಂದ್ಯಗಳನ್ನು ಆಡಿದ್ದರೂ ಕೂಡ ಸಿದ್ದಾರ್ಥ್ ರವರು ಗಮನಾರ್ಹ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.

ಹೀಗಿರುವಾಗ ಆರ್ಸಿಬಿ ತಂಡ ಪರ್ಯಾಯ ಆಟಗಾರನಿಗೆ ಹುಡುಕುತ್ತಿರುವಾಗ ಆರ್ಸಿಬಿ ತಂಡದಲ್ಲಿ 25 ಲಕ್ಷ ಕೊಟ್ಟು ಖರೀದಿ ಮಾಡಿರುವ ಯುವ ಬೌಲರ್ ಒಬ್ಬರು ಇದ್ದಾರೆ. ಖಂಡಿತ ಇವರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡರೆ ಗಮನಾರ್ಹ ಪ್ರದರ್ಶನ ನೀಡುತ್ತಾರೆ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ ಯಾಕೆಂದರೆ ಇವರ ಅಂಕಿ-ಅಂಶಗಳು ಹೇಳುತ್ತಿವೆ ಇವರು ಉತ್ತಮ ಬೌಲರ್ ಎಂದು. ಹೌದು ಸ್ನೇಹಿತರೆ ಇಂದು ನಾವು ಮಾತನಾಡಲು ಹೊರಟಿರುವುದು ಚಾಮ ಮಿಲಿಂದ್ ರವರ ಬಗ್ಗೆ

ಸ್ನೇಹಿತರೇ ಇವರು ಇನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪಾದರ್ಪಣೆ ಮಾಡಿಲ್ಲವಾದರೂ ಕೂಡ ದೇಶಿಯ ಪಂದ್ಯಗಳಲ್ಲಿ ಬಹಳ ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ, ಇದುವರೆಗೂ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ೫೩ ಟಿ 20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಇವರು ಬರೋಬ್ಬರಿ 83 ವಿಕೆಟ್ಗಳನ್ನು ಕಬಳಿಸುವ ಮೂಲಕ ಮಿಂಚಿದ್ದಾರೆ, ಅದರಲ್ಲಿ ಒಮ್ಮೆ 8 ರನ್ಗಳಿಗೆ 5 ವಿಕೆಟ್ ಪಡೆದದ್ದು ಇವರ ವಿಶೇಷ. ಇನ್ನು ಇಷ್ಟೆಲ್ಲಾ ವಿಕೆಟ್ ಪಡೆದಿರುವ ಇವರು ಸರಾಸರಿ ಒಂದು ಓವರ್ಗೆ ನೀಡಿರುವುದು ಕೇವಲ 7.62 ರನ್ಗಳನ್ನು ಮಾತ್ರ. ಇಷ್ಟು ಉತ್ತಮವಾಗಿ ಬೌಲಿಂಗ್ ಮಾಡಿರುವ ಇವರು ಎರಡು ಬಾರಿ 5 ವಿಕೆಟ್ ಹಾಗೂ ಎರಡು ಬಾರಿ 4 ವಿಕೆಟ್ ಪಡೆದಿರುವ ಸಾಧನೆ ಮಾಡಿದ್ದಾರೆ. ಖಂಡಿತ ಚಾಮ ಮಿಲಿಂದ್ ರವರು ಮಹಮ್ಮದ್ ಸಿರಾಜ್ ರವರ ಸ್ಥಾನಕ್ಕೆ ಪರ್ಫೆಕ್ಟ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.