ಬೇಕಿತ್ತು 6 ಬಾಲ್ ಗೆ 9 ರನ್: ಗುಜರಾತ್ ಟೈಟನ್ vs ಮುಂಬೈ ಇಂಡಿಯನ್ಸ್ ಪಂದ್ಯದ ಕೊನೆಯ ಓವರ್ ಡ್ರಾಮ ಹೇಗಿತ್ತು ಗೊತ್ತಾ??

ಬೇಕಿತ್ತು 6 ಬಾಲ್ ಗೆ 9 ರನ್: ಗುಜರಾತ್ ಟೈಟನ್ vs ಮುಂಬೈ ಇಂಡಿಯನ್ಸ್ ಪಂದ್ಯದ ಕೊನೆಯ ಓವರ್ ಡ್ರಾಮ ಹೇಗಿತ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಮಂಕು ಕವಿದಂತೆ ಆಟವಾಡುತ್ತಿತ್ತು. ಆದರೆ ನಿನ್ನೆ ನಡೆದಿರುವ ಪಂದ್ಯದಲ್ಲಿ ಈ ಬಾರಿ ಆ ಟೇಬಲ್ ಟಾಪರ್ ಆಗಿರುವ ಗುಜರಾತ್ ವಿರುದ್ಧ ಕೊನೆಯ ಓವರಿನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ತನ್ನ ರಿಯಲ್ ಆಟವನ್ನು ಪ್ರದರ್ಶಿಸಿತ್ತು. ಹೌದು ಗೆಳೆಯರೆ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಇಶನ್ ಕಿಶನ್ ರವರ 45 ರನ್ನುಗಳು ರೋಹಿತ್ ಶರ್ಮ ರವರ 43 ರನ್ನುಗಳು ಹಾಗೂ ಟೀಮ್ ಡೇವಿಡ್ ರವರ 44 ರನ್ನುಗಳ ಸಹಾಯದಿಂದ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 177 ರನ್ನುಗಳನ್ನು ತೋರಿಸುವಲ್ಲಿ ಯಶಸ್ವಿಯಾಯಿತು.

ಈ ಸಂದರ್ಭದಲ್ಲಿ ಬಿದಿರಾ ಟೈಟನ್ಸ್ ತಂಡದ ಪರವಾಗಿ ರಶೀದ್ ಖಾನ್ ರವರು ಎರಡು ವಿಕೆಟ್ ಅನ್ನು ಕೀಳಲು ಯಶಸ್ವಿಯಾದರು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಗಳು ಆಗಿರುವ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಇಬ್ಬರು ಕೂಡ ತಂಡಕ್ಕೆ ಉತ್ತಮವಾದ ಆರಂಭವನ್ನೇ ನೀಡಿದ್ದಾರೆ. ಮೊದಲ 10 ಓವರ್ಗಳಲ್ಲಿ ಗುಜರಾತ್ ಟೈಟನ್ಸ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 95 ರನ್ನುಗಳನ್ನು ಪೇರಿಸಿತ್ತು. ಸುಲಭದ ಗೆಲುವಿನತ್ತ ಗುಜರಾತ್ ಟೈಟನ್ಸ್ ತಂಡ ಸಾಗಿತ್ತು. ಆದರೆ 13ನೇ ಓವರ್ನಲ್ಲಿ ಸೆಟಲ್ ಬ್ಯಾಟ್ಸ್ಮನ್ಗಳು ಆಗಿದ್ದಂತಹ ಗಿಲ್ ಹಾಗೂ ಸಹ ಇಬ್ಬರನ್ನು ಕೂಡ ಮುರುಗನ್ ಅಶ್ವಿನ್ ರವರು ಔಟ್ ಮಾಡುತ್ತಾರೆ. ಇಲ್ಲಿಂದ ಗುಜರಾತ್ ಟೈಟನ್ಸ್ ತಂಡದ ಹಿನ್ನಡೆ ಆರಂಭವಾಗುತ್ತದೆ.

ಈಗ ಕೊನೆಯ ಓವರ್ ಡ್ರಾಮಾ ಕುರಿತಂತೆ ಹೇಳುವುದಾದರೆ ಕೊನೆಯ ಓವರಿನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಆರು ಎಸೆತಗಳ ಮುಂದೆ 9ರನ್ನು ಗಳು ಅವಶ್ಯಕತೆ ಇತ್ತು. ಮುಂಬೈ ತಂಡದ ಪರವಾಗಿ ಡೇನಿಯಲ್ ಸ್ಯಾಮ್ಸ್ ಬೌಲರ್ ಆಗಿದ್ದರು. ಮೊದಲ ಎಸೆತದಲ್ಲಿ ಮಿಲ್ಲರ್ ಸಿಂಗಲ್ ಎರಡನೆಯ ಎಸೆತದಲ್ಲಿ ತೆವಾಟಿಯ ನೋರನ್ ಮೂರನೇ ಎಸೆತದಲ್ಲಿ ತೆವೇಟಿಯ 2 ರನ್ನುಗಳನ್ನು ಗಳಿಸಲು ಹೋಗಿ ರನೌಟ್ ಆಗುತ್ತಾರೆ. ನಾಲ್ಕನೇ ಎಸೆತದಲ್ಲಿ ರಶೀದ್ ಖಾನ್ ಒಂದು ರನ್, 5ನೇ ಎಸೆತದಲ್ಲಿ ಹಾಗೂ 6ನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರಂತಹ ಆಟಗಾರ ಒಂದೇ ಒಂದು ರನ್ನನ್ನು ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಈ ಮೂಲಕವಾಗಿ ಈ ಬಾರಿಯ ಅತ್ಯಂತ ಯಶಸ್ವಿ ತಂಡವಾಗಿರುವ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ರೋಚಕ ಗೆಲುವು ಸಾಧಿಸುತ್ತದೆ.