ಕೆಜಿಎಫ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ, ಕನ್ನಡದ ಸ್ಟಾರ್ ನಟರಿಗೆ ಹೊಸ ಚಾಲೆಂಜ್. ಬದಲಾಗುತ್ತಾರಾ ಕನ್ನಡ ಟಾಪ್ ನಟರ ಹಾದಿ??

ಕೆಜಿಎಫ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ, ಕನ್ನಡದ ಸ್ಟಾರ್ ನಟರಿಗೆ ಹೊಸ ಚಾಲೆಂಜ್. ಬದಲಾಗುತ್ತಾರಾ ಕನ್ನಡ ಟಾಪ್ ನಟರ ಹಾದಿ??

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ 2 ಚಿತ್ರ ಪ್ರತಿಯೊಂದು ವಿಧದಲ್ಲಿ ಕೂಡ ಭಾರತೀಯ ಚಿತ್ರರಂಗದ ಒಂದೊಂದೇ ದಾಖಲೆಗಳನ್ನು ಪುಡಿಗಟ್ಟಿ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಅವರ ಜೋಡಿ ಕನ್ನಡ ಚಿತ್ರರಂಗದ ತಾಕತ್ತನ್ನು ಜಾಗತಿಕ ಸಿನಿಮಾ ಜಗತ್ತಿಗೆ ತೋರಿಸುವ ಮೂಲಕ ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.

ಏಪ್ರಿಲ್ 14ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವ ಕೆಜಿಎಫ್ ಚಾಪ್ಟರ್ 2 ಈಗಾಗಲೇ ಕೆಲವೇ ದಿನಗಳಲ್ಲಿ ಸಾವಿರ ಕೋಟಿ ರೂಪಾಯಿಗೂ ಹತ್ತಿರ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕೂಡ ಹಲವಾರು ದಾಖಲೆಗಳನ್ನು ಮುರಿದಿದೆ. ಒಂದು ವಿಧದಲ್ಲಿ ಹೇಳುವುದಾದರೆ ಕನ್ನಡ ಭಾಷೆಗಿಂತ ಹೆಚ್ಚಾಗಿ ಹಿಂದಿ ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ನಿರೀಕ್ಷೆಗೂ ಅಧಿಕ ಬೇಡಿಕೆಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ. ಅಲ್ಲಿನ ಭಾಷೆಗಳ ಸಿನಿಮಾಗಳಿಗಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಎಲ್ಲರೂ ವೀಕ್ಷಿಸುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಉತ್ತರ ಭಾರತದಲ್ಲಿ ಅಂದರೆ ಹಿಂದಿ ಭಾಷೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ. ಅದರಲ್ಲೂ ಅಲ್ಲಿನ ಸ್ಟಾರ್ ನಟರ ಸಿನಿಮಾಗಳಿಗಿಂತ ಹೆಚ್ಚಾಗಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಇದು ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಮೈಲಿಗಲ್ಲಾಗಿದೆ ರಾಕಿಂಗ್ ಸ್ಟಾರ್ ಯಶ್ ರವರು ನೆಟ್ಟಿರುವ ಈ ಮೈಲಿಗಲ್ಲನ್ನು ಎಲ್ಲರೂ ಕೂಡ ಅನುಸರಿಸಿ ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬೇಕಾಗಿದೆ. ಇದನ್ನು ಕನ್ನಡ ಸಿನಿಮಾ ಎಂದು ಹೇಳುವುದಕ್ಕಿಂತ ವಲ್ಡ್ ಕ್ಲಾಸ್ ಸಿನಿಮಾ ಎಂದು ಹೇಳುವುದು ಉಚಿತವಾಗಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಮಿಂಚಿದ್ದು ಎಂದರೆ ಅದು ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರ ಕಾಲದಲ್ಲಿ. ಆ ಕಾಲದಲ್ಲಿ ಅವರು ನಟಿಸುತ್ತಿದ್ದ ಹಾಗೂ ಅವರು ಆಯ್ಕೆ ಮಾಡುತ್ತಿದ್ದ ಸಿನಿಮಾಗಳು ಕನ್ನಡ ಚಿತ್ರದುರ್ಗ ಸುವರ್ಣ ಇತಿಹಾಸವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಷ್ಟು ಒಳ್ಳೆಯ ಮಟ್ಟದ ಸಿನಿಮಾಗಳು ನಿರ್ಮಾಣವಾಗುವುದನ್ನು ನೋಡುವುದು ವಿರಳವಾಗಿತ್ತು. ಆಗೊಮ್ಮೆ-ಈಗೊಮ್ಮೆ ಕೆಲವೊಂದು ಸಿನಿಮಾಗಳು ಹಿಟ್ ಆಗುತ್ತಿದ್ದವು.

ಈ ಸಂದರ್ಭದಲ್ಲಿ ಕನ್ನಡ ಚಿತ್ರ ರಂಗದಲ್ಲಿ ಒಂದು ಮಟ್ಟಿಗೆ ಸಂಚಲನವನ್ನು ಸೃಷ್ಟಿಸಿದ್ದು ಸಿನಿಮಾವೆಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂಗಾರುಮಳೆ ಸಿನಿಮಾ. ಕನ್ನಡ ಚಿತ್ರರಂಗದ ಮೊದಲ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾವಾಗಿ ತನ್ನನ್ನು ತಾನು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಇದರ ಸಾಧನೆಯಾಗಿದೆ. ಇತ್ತೀಚಿನ ಕೆಲ ವರ್ಷಗಳ ಹಿಂದೆ ಅನುಪ್ ಭಂಡಾರಿ ನಿರ್ದೇಶನದ ರಂಗಿತರಂಗ ಕೂಡ ಆಸ್ಕರ್ ನಾಮಿನೇಷನ್ ಗೆ ಕೂಡ ಹೋಗಿ ಬಂದಿತ್ತು. ಇದನ್ನು ಕೂಡ ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಆದರೆ ಕನ್ನಡ ಚಿತ್ರರಂಗದ ಈ ಯುಗವನ್ನು ಸಂಪೂರ್ಣವಾಗಿ ನಾವು ಕೆಜಿಎಫ್ ಯುಗ ಎಂದರೆ ತಪ್ಪಾಗಲಾರದು. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಮಾರುಕಟ್ಟೆಯನ್ನು ತೆರೆದಿಟ್ಟಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ರಾಕಿ ಭಾಯ್ ನಿರ್ಮಿಸಿರುವ ಈ ಹೊಸ ದಾರಿಯಲ್ಲಿ ಮುಂದೆ ಬರುವಂತಹ ಕನ್ನಡ ಸಿನಿಮಾಗಳು ಹಳೆಯ ನೀತಿಯನ್ನು ಅನುಸರಿಸದೆ ಹೊಸ ಮಾರ್ಕೆಟಿಂಗ್ ಪ್ಲಾನ್ ಗಳನ್ನು ಮಾಡಿಕೊಂಡು ದೊಡ್ಡಮಟ್ಟದಲ್ಲಿ ಪರಭಾಷೆಗಳಲ್ಲಿ ಕೂಡ ಬಿಡುಗಡೆಯಾಗಿ ಯಶಸ್ಸನ್ನು ಪಡೆಯುವಂತಹ ಕುರಿತಂತೆ ಯೋಚನೆಯನ್ನು ಮಾಡಬೇಕಾಗಿದೆ.

ಯಾಕೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಈಗಾಗಲೇ ಕನ್ನಡ ಚಿತ್ರರಂಗದ ಅಥವಾ ಡಬ್ಬಿಂಗ್ ಚಿತ್ರಗಳಿಗೆ ಬಾಲಿವುಡ್ ನಲ್ಲಿ ಯಾವ ಮಟ್ಟದ ಮಾರುಕಟ್ಟೆ ಇದೆ ಎಂಬುದನ್ನು ತಿಳಿಯ ಬಹುದಾಗಿದೆ. ಹೀಗಾಗಿ ಇದನ್ನು ಚೆನ್ನಾಗಿ ಉಪಯೋಗಿಸಿಕೊಂಡು ಸಿನಿಮಾಗಳನ್ನು ಬಿಡುಗಡೆ ಮಾಡಿದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ದಾಖಲೆಯನ್ನು ಸರಿಗಟ್ಟುವುದು ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ತೋರಿಸಿರುವ ದಾರಿಯಲ್ಲಿ ಹೊಸ ಪ್ಲಾನಿಂಗ್ ಜೊತೆಗೆ ಹೆಜ್ಜೆ ಹಾಕಿದರೆ ಖಂಡಿತವಾಗಿ ಇದೇ ರೀತಿಯ ಯಶಸ್ಸನ್ನು ಪಡೆಯುವುದು ಕಷ್ಟವಲ್ಲ.