ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಆರ್ಸಿಬಿ ಸೋಲಲು ಅದೊಂದೇ ಕಾರಣ, ಯಾರು ಹಾಗೂ ಮಾಡಿದ ತಪ್ಪೇನು ಗೊತ್ತೇ??

ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಆರ್ಸಿಬಿ ಸೋಲಲು ಅದೊಂದೇ ಕಾರಣ, ಯಾರು ಹಾಗೂ ಮಾಡಿದ ತಪ್ಪೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರಾರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗಿ ಕಾಣಿಸಿಕೊಂಡಿತು ಹಾಗೂ ಸೋಲುವಂತಹ ಪಂದ್ಯಗಳನ್ನು ಕೂಡ ರೋಚಕವಾಗಿ ಗೆದ್ದುಕೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನಿಂದ ಕಂಗೆಟ್ಟಿದೆ ಎಂದು ಹೇಳಬಹುದಾಗಿದೆ. ಸದ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನವನ್ನು ನೋಡಿದರೆ ತಂಡ ಪ್ಲೇಆಫ್ ಗೆ ತೇರ್ಗಡೆ ಆಗುವುದು ಕೂಡ ಅನುಮಾನವೇ ಸರಿ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುವಂತೆ ಆಗಿದೆ.

ಇತ್ತೀಚಿನ ದಿನಗಳಲ್ಲಿ ಒಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳು ಚೆನ್ನಾಗಿ ಪ್ರದರ್ಶನ ನೀಡಿದರೆ ಕೆಲವೊಮ್ಮೆ ತಂಡದ ಬೌಲರ್ಗಳು ಕೈಕೊಡುತ್ತಾರೆ. ಕೆಲವೊಮ್ಮೆ ಬೌಲರ್ಗಳು ಉತ್ತಮ ಪ್ರದರ್ಶನವನ್ನು ನೀಡಿದರೇ ತಂಡದ ಆರಂಭಿಕ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಕೆಲವೊಮ್ಮೆ ಕಳಪೆ ಪ್ರದರ್ಶನವನ್ನು ನೀಡಿ ತಂಡದ ಸೋಲಿಗೆ ಕಾರಣವಾಗುತ್ತಿದ್ದಾರೆ. ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳು ಮೊದಲು ಬ್ಯಾಟಿಂಗ್ ಮಾಡಿ ಗುಜರಾತ್ ತಂಡದ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿದರು ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವುದು ನಿರಾಶದಾಯಕ ಫಲಿತಾಂಶವಾಗಿದೆ.

ಈಗಾಗಲೇ ಲಾಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 10 ಪಂದ್ಯಗಳಲ್ಲಿ ಐದರಲ್ಲಿ ಸೋತು 5ರಲ್ಲಿ ಗೆದ್ದು ಪ್ಲೇ ಆಫ್ ಗೆ ತೇರ್ಗಡೆ ಆಗುವ ತನ್ನ ಹಾದಿ ಯನ್ನು ಮತ್ತಷ್ಟು ಕಷ್ಟಕರವಾಗಿಸಿದೆ ಎಂದರೆ ತಪ್ಪಾಗಲಾರದು. ಇನ್ನು ಆರ್ಸಿಬಿ ಮಾಡಿರುವ ಈ ಒಂದು ತಪ್ಪು ನಿರ್ಧಾರ ತಂಡದ ಸೋಲಿಗೆ ಕಾರಣವಾಗಿದೆ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಇದುವರೆಗೂ ಈ ಬಾರಿ ಐಪಿಎಲ್ ನಲ್ಲಿ ಟಾಸ್ ಗೆದ್ದಿರುವ ತಂಡ ಮೊದಲು ಬ್ಯಾಟಿಂಗ್ ಮಾಡಿರುವುದು ಇದು ಕೇವಲ ಎರಡನೇ ಬಾರಿ. ಅದರಲ್ಲೂ ಗುಜರಾತ್ ತಂಡದಲ್ಲಿ ಸಾಕಷ್ಟು ಮ್ಯಾಚ್ ಫಿನಿಶರ್ ಗಳು ಇದ್ದಾರೆ. ಹೀಗಾಗಿ ಚೇಸಿಂಗ್ ಮಾಡಿದರೆ ಖಂಡಿತವಾಗಿ ಆ ತಂಡದ ಎದುರು ಗೆಲ್ಲಲು ಯಾವ ತಂಡಕ್ಕೆ ಕೂಡ ಸಾಧ್ಯವಿಲ್ಲ. ಡುಪ್ಲೆಸಿಸ್ ರವರು ಟಾಸ್ ಗೆದ್ದಾಗ ಎರಡನೇ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿದ್ದರೆ ಖಂಡಿತವಾಗಿ ಗೆಲ್ಲುವ ಸಾಧ್ಯತೆಗಳು ಇವೆ ಎಂಬುದಾಗಿ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ