ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೆಜಿಎಫ್-3 ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಯಶ್, ಸುಳಿವು ಬಿಟ್ಟುಕೊಟ್ಟು ಯಶ್ ಹೇಳಿದ್ದೇನು ಗೊತ್ತೇ??

56

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವಾದ್ಯಂತ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 930 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ. ಇನ್ನೇನು ಎರಡರಿಂದ ಮೂರು ದಿನಗಳಲ್ಲಿ ಖಂಡಿತವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಸಾವಿರ ಕೋಟಿ ರೂಪಾಯಿ ಗಡಿಯನ್ನು ದಾಟಲಿದೆ. ಭಾರತೀಯ ಚಿತ್ರರಂಗದ ಯಾರೊಬ್ಬರೂ ಕೂಡ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವೊಂದು ಈ ಸಾಧನೆಯನ್ನು ಮಾಡುತ್ತದೆ ಎಂಬುದಾಗಿ ಕನಸು ಮನಸಿನಲ್ಲೂ ಕೂಡ ಊಹಿಸಿರಲು ಸಾಧ್ಯವಿಲ್ಲ. ಈ ಎಲ್ಲಾ ಸಾಧನೆಗೆ ನಾವು ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ರವರಿಗೆ ಧನ್ಯವಾದಗಳನ್ನು ಸಲ್ಲಿಸಬೇಕಾಗುತ್ತದೆ.

ಪ್ರತಿಯೊಂದು ವಿಧದಲ್ಲಿಯೂ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸನ್ನು ಗೆಲ್ಲುವುದು ಯಶಸ್ವಿಯಾಗಿರುವುದು ಚಿತ್ರದ ಸಂಪೂರ್ಣ ಗೆಲುವಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಚಿತ್ರವನ್ನು ನೋಡಿರುವ ಪ್ರತಿಯೊಬ್ಬರು ಕೂಡ ಕಂಡಿತವಾಗಿ ಕೆಜಿಎಫ್ ಚಾಪ್ಟರ್ ಮೂರು ಚಿತ್ರ ತಯಾರಾಗಲಿದೆ ಎನ್ನುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 3 ಚಿತ್ರ ಬರುತ್ತದೆ ಎನ್ನುವುದರ ಕುರಿತಂತೆ ಎಲ್ಲರೂ ಕೂಡ ತಲೆಕೆಡಿಸಿಕೊಂಡಿದ್ದಾರೆ. ಆದರೆ ಈ ಕುರಿತಂತೆ ಚಿತ್ರತಂಡದ ಯಾರೊಬ್ಬರೂ ಕೂಡ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ರವರು ಅಂತರಾಷ್ಟ್ರೀಯ ಸುದ್ದಿವಾಹಿನಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಹೇಳುವಂತಹ ಸಾಕಷ್ಟು ವಿಚಾರಗಳಿದ್ದರೂ ಕೂಡ ಅದನ್ನು ಬಿಟ್ಟಿದ್ದೆವು. ಹೀಗಾಗಿ ಕೆಜಿಎಫ್ ಚಾಪ್ಟರ್ 3 ಚಿತ್ರ ಮಾಡುವಂತಹ ಹಲವಾರು ಅವಕಾಶಗಳಿವೆ ಹಲವಾರು ವಿಚಾರಗಳು ಕೂಡ ಇವೆ. ಸದ್ಯಕ್ಕೆ ಈಗ ಅದನ್ನು ಅಲ್ಲಿಗೆ ಬಿಟ್ಟಿದ್ದೇವೆ ಎನ್ನುವುದಾಗಿ ಹೇಳಿದ್ದರು. ಸದ್ಯಕ್ಕೆ ನೋಡುವುದಾದರೆ ಪ್ರಶಾಂತ್ ನೀಲ್ ರವರು ರೆಬೆಲ್ ಸ್ಟಾರ್ ಪ್ರಭಾಸ್ ರವರೊಂದಿಗೆ ಸಲಾರ್ ಹಾಗೂ ಜೂನಿಯರ್ ಎನ್ಟಿಆರ್ ಅವರ ಜೊತೆಗೆ ಒಂದು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕಂತೂ ಕೆಜಿಎಫ್ ಚಾಪ್ಟರ್ 3 ಚಿತ್ರ ಬರೋದಕ್ಕೆ ಚಾನ್ಸೇ ಇಲ್ಲ. ಸದ್ಯಕ್ಕೆ ಹೇಳುವುದಾದರೆ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಕುರಿತಂತೆ ಕೂಡ ಯಾವುದೇ ಘೋಷಣೆ ಹೊರಬಂದಿಲ್ಲ. ಹೀಗಾಗಿ ಯಶ್ ರವರ ಮುಂದಿನ ಸಿನಿಮಾ ಕೆಜಿಎಫ್ ಚಾಪ್ಟರ್ ಮೂರು ಇರಬಹುದು ಅಥವಾ ಬೇರೆ ಯಾವುದು ಎನ್ನುವುದನ್ನು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

Get real time updates directly on you device, subscribe now.