ಮೊದಲ ಬಾರಿಗೆ ಐಪಿಎಲ್ ನಿಯಮಗಳ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಮುಂಬೈ ಕೋಚ್ ಜಯವರ್ಧನೆ ಹೇಳಿದ್ದೇನು ಗೊತ್ತಾ??

ಮೊದಲ ಬಾರಿಗೆ ಐಪಿಎಲ್ ನಿಯಮಗಳ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಮುಂಬೈ ಕೋಚ್ ಜಯವರ್ಧನೆ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಟಾಟಾ ಐಪಿಎಲ್ 2022 ಸಾಕಷ್ಟು ವಿಚಾರಗಳಿಗಾಗಿ ದೊಡ್ಡಮಟ್ಟದ ಸುದ್ದಿಯಾಗುತ್ತಿದೆ. ಹೌದು ಗೆಳೆಯರೇ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಈ ಬಾರಿಯ ಟೂರ್ನಿಯಿಂದ ಹೊರಬಿದ್ದಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ತೀರ್ಪುಗಳು ಸರಿಯಾಗಿ ಕಂಡುಬರುತ್ತಿಲ್ಲ ಎಂದು ಕೂಡ ಪ್ರೇಕ್ಷಕರ ಹಾಗೂ ಮಾಜಿ ಕ್ರಿಕೆಟಿಗ ದೂರಾಗಿದೆ. ಉದಾಹರಣೆಗೆ ಇತ್ತೀಚಿಗಷ್ಟೇ ನಡೆದಿರುವ ನೋಬಾಲ್ ಪ್ರಕರಣದಲ್ಲಿ ಕೂಡ ನಾವು ಈ ವಿಚಾರವನ್ನು ನೆನಪಿಸಿಕೊಳ್ಳ ಬಹುದಾಗಿದೆ.

ಈ ನಿಯಮಗಳ ಕುರಿತಂತೆ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿರುವ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಆಗಿರುವ ಮಾಹೇಲ ಜಯವರ್ಧನ ರವರು ಮಾತನಾಡಿದ್ದಾರೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ನಡೆದಿರುವ ನೋಬಾಲ್ ಪ್ರಕರಣದಲ್ಲಿ ನಾಯಕ ರಿಷಬ್ ಪಂತ್ ರವರಿಗೆ ಒಂದು ಪಂದ್ಯದ ಸಂಪೂರ್ಣ ಸಂಭಾವನೆಯನ್ನು ದಂಡವಾಗಿ ವಿಧಿಸಲಾಗಿದೆ. ಇನ್ನು ಕೋಚ್ ಪ್ರವೀಣ್ ಆಮ್ರೆ ರವರಿಗೆ ಮೈದಾನದ ಒಳಗೆ ಕಾಲಿಟ್ಟಿದ್ದ ಕ್ಕಾಗಿ ಒಂದು ಪಂದ್ಯದ ನಿಷೇಧ ವನ್ನು ಕೂಡ ಹೇರಲಾಗಿತ್ತು. ಈ ನಿಯಮಗಳ ಕುರಿತಂತೆ ಮಾತನಾಡುತ್ತಾ ಜಯವರ್ಧನೆ ರವರು ಕೆಲವೊಂದು ಅಭಿಪ್ರಾಯಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅದೇನೆಂದರೆ ಬೇರೆ ಆಟಗಾರರು ಹಾಗೂ ಕೋಚ್ ಕೇವಲ ವಿರಾಮದ ಸಂದರ್ಭದಲ್ಲಿ ಮಾತ್ರ ಮೈದಾನದ ಒಳಗೆ ಪ್ರವೇಶಿಸುವಂತೆ ಮಾಡಬೇಕು ಇದು ಈಗಾಗಲೇ ಜಾರಿಯಲ್ಲಿದೆ. ಈ ಕುರಿತು ತಂಡದ ಜೊತೆಗೆ ಮಾತನಾಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ ನೋಬಲ್ ಪ್ರಕರಣದ ಕುರಿತಂತೆ ಮಾತನಾಡುತ್ತ ಜಯವರ್ಧನೆ ರವರು ಇಂತಹ ಪ್ರಕರಣದ ಸಂದರ್ಭದಲ್ಲಿ ಫೀಲ್ಡ್ ಅಂಪೈರ್ ಥರ್ಡ್ ಅಂಪೈರಿಗೆ ಈ ಕುರಿತಂತೆ ಮನವಿ ಮಾಡುವಹಾಗಿಲ್ಲ. ಹೀಗಾಗಿ ಈ ಕುರಿತಂತೆ ಬಂದಿದ್ದಲ್ಲಿ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಥರ್ಡ್ ಅಂಪೈರ್ ಕೂಡ ಗಮನ ವಹಿಸುವಂತೆ ಮಾಡಬೇಕು ಎನ್ನುವುದಾಗಿ ಈ ಕುರಿತಂತೆ ನಿಯಮಗಳನ್ನು ಬದಲು ಮಾಡುವಂತೆ ಜಯವರ್ಧನೆ ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ಇತ್ತೀಚೆಗಷ್ಟೇ ಕೊಹ್ಲಿ ರವರ ಎಲ್ಬಿಡಬ್ಲ್ಯು ಔಟ್ ಕೂಡ ಮೂರನೇ ಅಂಪೈರ್ ನಿರ್ಧಾರದ ಮೇರೆಗೆ ನಡೆದಿತ್ತು. ಇದು ಕೂಡ ತಪ್ಪಾಗಿತ್ತು ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಅಂಪೈರ್ ತೀರ್ಪುಗಳು ಸಾಕಷ್ಟು ಕಳಪೆ ಮಟ್ಟದಲ್ಲಿವೆ ಎಂದು ಹೇಳಬಹುದಾಗಿದೆ.