ಟೆಸ್ಲಾ ಗೆ ಸ್ವಾಗತ, ಆದರೆ ಮತ್ತೊಂದು ಶರತ್ತು ವಿಧಿಸಿದ ನಿತಿನ್ ಗಡ್ಕರಿ, ಒಪ್ಪಿಕೊಂಡರೆ ಚೀನಾಗೆ ಬಿಗ್ ಶಾಕ್, ಅಷ್ಟಕ್ಕೂ ಗಡ್ಕರಿ ವಿಧಿಸಿದ ಷರತ್ತು ಏನು ಗೊತ್ತೆ??

ಟೆಸ್ಲಾ ಗೆ ಸ್ವಾಗತ, ಆದರೆ ಮತ್ತೊಂದು ಶರತ್ತು ವಿಧಿಸಿದ ನಿತಿನ್ ಗಡ್ಕರಿ, ಒಪ್ಪಿಕೊಂಡರೆ ಚೀನಾಗೆ ಬಿಗ್ ಶಾಕ್, ಅಷ್ಟಕ್ಕೂ ಗಡ್ಕರಿ ವಿಧಿಸಿದ ಷರತ್ತು ಏನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ನಾಗಿರುವ ವ್ಯಕ್ತಿಯೆಂದರೆ ಅದು ಅಮೆರಿಕಾದ ಎಲಾನ್ ಮಸ್ಕ್. ಹೌದು ಗೆಳೆಯರೆ ಬರೋಬ್ಬರಿ 270 ಬಿಲಿಯನ್ ಯುಎಸ್ ಡಾಲರ್ ಆಸ್ತಿಯನ್ನು ಎಲೋನ್ ಮಸ್ಕ್ ಹೊಂದಿದ್ದಾರೆ. ಇನ್ನು ಎಲೋನ್ ಮಸ್ಕ್ ರವರ ಬಳಿ ಟೆಸ್ಲಾ ಸ್ಪೇಸ್ ಎಕ್ಸ್ ಸೇರಿದಂತೆ ಹಲವಾರು ಕಂಪನಿಗಳಿವೆ. ಅದರಲ್ಲೂ ಎಲೋನ್ ಮಸ್ಕ್ ಇಂದು ಜಗತ್ತಿನ ಅತ್ಯಂತ ದೊಡ್ಡ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿರುವ ಟ್ವಿಟರ್ ಅನ್ನು ಬರೋಬ್ಬರಿ 44 ಬಿಲಿಯನ್ ಡಾಲರ್ ಗಳಿಗೆ ಖರೀದಿಸುವ ಮೂಲಕ ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಟ್ವಿಟರ್ನಲ್ಲಿ ಎಲ್ಲರೂ ಕೂಡ ಮಾತನಾಡುವ ಮುಕ್ತ ಅವಕಾಶವನ್ನು ಈ ಮೂಲಕ ಎಲೋನ್ ಮಸ್ಕ್ ರವರು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಎಲೋನ್ ಮಸ್ಕ್ ರವರು ಸದಾಕಾಲ ಆಗಾಗ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇನ್ನು ಹಿಂದೆ ಟೆಸ್ಲಾ ಕುರಿತಂತೆ ಕೂಡ ಭಾರತ ಸರ್ಕಾರದ ಬಗ್ಗೆ ಕೆಲವೊಂದು ಹೇಳಿಕೆಯನ್ನು ನೀಡಿ ಇವರು ಸುದ್ದಿಯಾಗಿದ್ದರು. ಸಾಮಾನ್ಯವಾಗಿ ಟೆಸ್ಲಾ 30 ಲಕ್ಷ ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಸಿಗುವಂತಹ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿದೆ. ಆದರೆ ಭಾರತದ ಆಮದಿನ ಸುಂಕದ ಕಾರಣದಿಂದಾಗಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಭಾರತದ ಗ್ರಾಹಕರಿಗೆ 60 ಲಕ್ಷ ರೂಪಾಯಿ ಬೆಲೆಯಲ್ಲಿ ಸಿಗುವ ಹಾಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣದಿಂದಾಗಿಯೇ ಈ ಯೋಜನೆಯನ್ನು ವುದು ಸಂಪೂರ್ಣವಾಗಿ ಮುಂದುವರಿಯಲಿಲ್ಲ ಎಂದು ಹೇಳಬಹುದಾಗಿದೆ.

ಇಂದು ಕೇಂದ್ರ ಸರ್ಕಾರದ ಯೂನಿಯನ್ ಮಿನಿಸ್ಟರ್ ಆಗಿರುವ ನಿತಿನ್ ಗಡ್ಕರಿ ಅವರು ಈ ಕುರಿತಂತೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಹೇಳಬಹುದಾಗಿದೆ. ಎಲೋನ್ ಮಸ್ಕ್ ಅವರವರ ಟೆಸ್ಲಾ ಸಂಸ್ಥೆ ಭಾರತದಲ್ಲಿಯೇ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಿ ಇಲ್ಲಿಯೇ ಕಾರನ್ನು ನಿರ್ಮಿಸಿದರೆ ನಮಗೇನೂ ತೊಂದರೆ ಇಲ್ಲ ಆದರೆ ಅವರು ಚೀನಾದಲ್ಲಿ ಕಾರನ್ನು ತಯಾರಿಸಿ ಎಲ್ಲಿ ಮಾರಾಟ ಮಾಡುವ ಯೋಜನೆಯನ್ನು ಮಾಡಿದ್ದಾರೆ ಅದಕ್ಕೆ ನಮ್ಮ ವಿರೋಧವಿದೆ ಎನ್ನುವುದಾಗಿ ಹೇಳಿದ್ದಾರೆ. ಒಂದು ವೇಳೆ ಎಲೋನ್ ಮಸ್ಕ್ ಭಾರತದಲ್ಲಿಯೇ ಕಾರುಗಳನ್ನು ನಿರ್ಮಾಣಮಾಡಿ ಇಲ್ಲಿಯ ಮಾರಾಟ ಮಾಡುವುದಾದರೆ ದೊಡ್ಡ ಮಾರುಕಟ್ಟೆ ಖಂಡಿತವಾಗಿ ಸೃಷ್ಟಿಯಾಗುತ್ತದೆ ಹಾಗೂ ಅವರು ಹೇಳಿದಂತೆ ಅದೇ ಬೆಲೆಯಲ್ಲಿ ಕಾರುಗಳನ್ನು ಇಲ್ಲಿ ಮಾರಾಟ ಮಾಡಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ