ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಾಲಿವುಡ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದದ್ದು ಯಾಕೆ ಗೊತ್ತೇ??

78

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಸದ್ದು ಮಾಡುತ್ತಿವೆ. ಅದರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಹೇಳಿರುವಂತಹ ಕೆಲವು ಹೇಳಿಕೆಗಳು ಇತ್ತೀಚಿಗೆ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹಲವಾರು ವರ್ಷಗಳ ಮೊದಲೇ ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅದ್ಭುತ ಕಲಾವಿದ. ಪಾತ್ರ ಯಾವುದೇ ಇರಲಿ ಅದಕ್ಕೆ 100% ನ್ಯಾಯವನ್ನು ಸಲ್ಲಿಸುವ ಅಂತಹ ಅಮೋಘ ಕಲಾವಿದ ಎಂದರೆ ತಪ್ಪಾಗಲಾರದು.

ಇನ್ನು ಅವರ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇದೇ ಜುಲೈ 28ರಂದು ನಿಮಗೆಲ್ಲ ತಿಳಿದಿರುವಂತೆ 3D ಯಲ್ಲಿ ಪಂಚ ಭಾಷೆಗಳು ಸೇರಿದಂತೆ ಪ್ರಪಂಚದ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವುದು ಈಗಾಗಲೇ ಅಧಿಕೃತವಾಗಿ ತಿಳಿದಿರುವಂತಹ ವಿಚಾರ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಹೇಳಿರುವಂತಹ ಕೆಲವೊಂದು ಮಾತುಗಳು ಅಗತ್ಯಕ್ಕೂ ಮೀರಿ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.

ಹೌದು ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ರವರು ಹಿಂದಿ ಎನ್ನುವುದು ನಮ್ಮ ರಾಷ್ಟ್ರೀಯ ಭಾಷೆಯಲ್ಲಿ ಕೇವಲ ಭಾಷೆಯನ್ನಾಗಿ ಹೇಳಿದ್ದು, ನಮ್ಮ ಸಿನಿಮಾರಂಗದ ಸಿನಿಮಾಗಳನ್ನು ಯಾಕೆ ಪ್ಯಾನ್ ಇಂಡಿಯಾ ಸಿನಿಮಾಗಳು ಎಂದು ಹೇಳಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಹೌದು ಗೆಳೆಯರೇ ಹಿಂದಿ ಸಿನಿಮಾಗಳನ್ನು ಹಿಂದಿ ಸಿನಿಮಾಗಳನ್ನು ಹೇಳಲಾಗುತ್ತದೆ ಆದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳನ್ನು ಮಾತ್ರ ಪ್ಯಾನ್ ಇಂಡಿಯಾ ಸಿನಿಮಾಗಳು ಎನ್ನುವುದಾಗಿ ಕರೆಯಲಾಗುತ್ತದೆ.

ಅಂದರೆ ಈ ಮೂಲಕ ಉತ್ತರ ಭಾಷೆಯ ಸಿನಿಮಾ ಮೇಕರ್ಸ್ ಗಳು ನಮ್ಮ ಭಾಷೆಗಳನ್ನು ರಿಜಿನಲ್ ಅಂದರೆ ಪ್ರಾದೇಶಿಕ ಭಾಷೆಗಳಾಗಿ ಸಂಬೋಧಿಸುತ್ತಿದ್ದಾರೆ. ಅವರಂತೆ ನಮ್ಮ ಭಾಷೆಯ ಸಿನಿಮಾಗಳು ಕೂಡ ಕನ್ನಡ ಭಾಷೆ ಸಿನಿಮಾಗಳು ಎಂಬುದಾಗಿ ನಾವು ಹೇಳಬೇಕಾಗಿದೆ. ಹಿಂದಿ ಭಾಷೆಗಳ ಸಿನಿಮಾಗಳು ಕೂಡ ಈಗಾಗಲೇ ನಮ್ಮ ಸೌತ್ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದ್ದಾರೆ ಆದರೆ ಯಶಸ್ಸು ಕಾಣಲು ಒದ್ದಾಡುತ್ತಿದ್ದಾವೆ.

ಆದರೆ ನಮ್ಮ ಭಾಷೆಯ ಸಿನಿಮಾಗಳು ಈಗಾಗಲೇ ಬೇರೆ ಭಾಷೆಗಳು ಸೇರಿದಂತೆ ಹಿಂದಿಯಲ್ಲಿ ಕೂಡ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿದ್ದಾವೆ. ಹೀಗಾಗಿ ನಮ್ಮ ಭಾಷೆ ಈಗ ಪ್ರಾದೇಶಿಕವಾಗಿ ಉಳಿದುಕೊಂಡಿಲ್ಲ ಮಾತ್ರವಲ್ಲದೆ ನಮ್ಮ ಸಿನಿಮಾಗಳು ನಾವು ನಮ್ಮ ಭಾಷೆಯಲ್ಲಿ ನಿರ್ಮಿಸಿ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡುತ್ತೇವೆ ಒಳ್ಳೆಯ ಕಥೆಗಳು ಜಾಸ್ತಿ ರೀಚ್ ಆಗುತ್ತದೆ. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದಕ್ಕಿಂತ ಹೆಮ್ಮೆಯಿಂದ ಕನ್ನಡ ಸಿನಿಮಾ ಎಂದು ಹೇಳೋಣ ಎಂಬುದಾಗಿ ಕಿಚ್ಚ ಸುದೀಪ್ ರವರು ಹೇಳಿದ್ದಾರೆ. ಕಿಚ್ಚ ಸುದೀಪ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.