ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡತಿ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್, ಸೋನಿಯಾಗೆ ಎರಡೆರಡು ಶಾಕ್. ಮುಂದೆ ಏನಾಗಲಿದೆ ಗೊತ್ತೇ??

99

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಧಾರವಾಹಿಗಳು ಯಾವ ಸಿನಿಮಾಗಳ ಟ್ವಿಸ್ಟ್ ಹಾಗೂ ಟರ್ನ್ ಗಳಿಗೆ ಕಡಿಮೆಯಿಲ್ಲದಂತೆ ರೋಚಕತೆಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ನಾವು ಹೀಗೆ ಹೇಳಲು ಕಾರಣವಾಗುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಿಂದಾಗಿ. ಈಗಾಗಲೇ ನಿಮಗೆ ತಿಳಿದಿರುವಂತೆ ಕನ್ನಡತಿ ಧಾರವಾಹಿಯಲ್ಲಿ ಭುವಿ ಹಾಗೂ ಹರ್ಷ ರವರ ಪ್ರೀತಿ ಅನ್ನುವುದು ಈಗ ನಿಶ್ಚಿತಾರ್ಥದ ಮೂಲಕ ಅಧಿಕೃತ ಗೊಂಡಿದೆ. ಆದರೆ ಇವರಿಬ್ಬರ ಸಂಬಂಧ ಪಕ್ಕ ಆಗುವುದು ಧಾರವಾಹಿಯಲ್ಲಿ ಇಬ್ಬರಿಗೆ ಕಷ್ಟ ಆಗುತ್ತದೆ.

ಮೊದಲನೆಯದು ಸಾನಿಯಾಗೆ ಯಾಕೆಂದರೆ ಆಕೆ ಬಂದರೆ ಆಸ್ತಿಯಲ್ಲಿ ತನ್ನ ಹಿಡಿತ ಕೈತಪ್ಪಿ ಹೋಗುತ್ತದೆ ಎನ್ನುವ ಭಾವನೆ. ಇನ್ನೊಬ್ಬಳು ವರುದಿನಿ. ವರುದಿನಿ ನಿಮಗೆಲ್ಲರಿಗೂ ತಿಳಿದಿರುವಂತೆ ಹರ್ಷನನ್ನು ಮೊದಲಿನಿಂದಲೂ ಕೂಡ ಪ್ರೀತಿಸಿ ಕೊಂಡು ಬಂದವಳು. ಆದರೆ ತನ್ನ ಪ್ರಾಣ ಗೆಳತಿ ಯಾಗಿರುವ ಭುವಿ ಈಗ ತನ್ನ ಪ್ರಿಯಕರನನ್ನು ಮದುವೆಯಾಗಲು ಹೋಗುತ್ತಿರುವುದು ನಿಜಕ್ಕೂ ಕೂಡ ಆಕೆಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಕೆಯನ್ನು ಇಟ್ಟುಕೊಂಡು ಸಾನಿಯಾ ಅವಳನ್ನು ಮುಗಿಸುವ ಪ್ಲಾನನ್ನು ಮಾಡಿದ್ದಾಳೆ.

ಹೌದು ನಿಶ್ಚಿತಾರ್ಥ ನಡೆದ ನಂತರ ಬೆಟ್ಟದ ಬಳಿ ಹೋಗಿದ್ದ ಸಂದರ್ಭದಲ್ಲಿ ಭುವಿಯನ್ನು ಸುಪಾರಿ ಪಡೆದವನ ಸಹಾಯದಿಂದಾಗಿ ತಳ್ಳಿಸಿದ್ದಾರೆ‌. ಆದರೆ ಸಾನಿಯಾಳ ದುರದೃಷ್ಟ ಎನ್ನುವಂತೆ ಭುವಿ ಇನ್ನು ಕೂಡ ಬದುಕಿದ್ದಾಳೆ. ಇನ್ನು ಈ ಸಂದರ್ಭದಲ್ಲಿ ಭುವಿ ಜೊತೆಗೆ ವರುದಿನಿ ಕೂಡ ಅಲ್ಲೇ ಇದ್ದಾಳೆ ಎನ್ನುವ ಕಾರಣದಿಂದಾಗಿ ಹರ್ಷ ವರುದಿನಿ ಗೆ ಭುವಿಗೆ ಏನಾದರೂ ಆದರೆ ಕಂಡಿತ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದಾಗಿ ಎಚ್ಚರಿಕೆ ನೀಡಿದ್ದು ಅವಳ ಜೊತೆಗೆ ಸರಿಯಾಗಿ ಮಾತನಾಡುತ್ತಿಲ್ಲ.

ಹರ್ಷ ತನಗೆ ಹತ್ತಿರವಾಗುತ್ತಾನೆ ಎನ್ನುವ ಕಾರಣಕ್ಕಾಗಿ ಈ ರೀತಿಯ ಕೆಲಸದಲ್ಲಿ ಸೋನಿಯಾಗೆ ನನ್ನ ಪ್ರಾಣ ಸ್ನೇಹಿತ ವಿರುದ್ಧ ಸಂಚಿನಲ್ಲಿ ಜೊತೆಯಾಗಿದ್ದ ವರುದಿನಿ ಗೆ ಈ ಕಾರಣದಿಂದಾಗಿ ತನ್ನೊಂದಿಗೆ ಮಾತನಾಡುತ್ತಿಲ್ಲ ಹಾಗು ದೂರವಾಗುತ್ತಿದ್ದಾನೆ ಎನ್ನುವ ಕಾರಣದಿಂದಾಗಿ ಇದಕ್ಕೆಲ್ಲ ಕಾರಣವಾಗಿರುವುದು ಸೋನಿಯಾ ಎಂದು ಅವಳ ವಿರುದ್ಧ ಅಸಮಾಧಾನ ಹೊಂದಿರುವ ವರುದಿನಿ ಈಗ ಅವಳಿಗೆ ತಿರುಗಿ ಬೀಳುವ ಸೂಚನೆ ನೀಡಿದ್ದಾಳೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋನಿಯಾ ಮಾಡಿರುವ ಈ ಕುತಂತ್ರ ಮನೆಯವರೆಲ್ಲರಿಗೂ ಕೂಡ ತಿಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ ಸಂಚಿಕೆಯ ಮೂಲಕ ತಿಳಿದು ಬಂದಿದೆ.

Get real time updates directly on you device, subscribe now.