ಕೊಹ್ಲಿ ಆರಂಭಿಕನಾಗಿ, ಅನುಜ್ ರಾವತ್ ಔಟ್, ಹೈದೆರಾಬಾದ್ ತಂಡದ ವಿರುದ್ದದ ಪಂದ್ಯಕ್ಕೆ ಸಂಭಾವ್ಯ ಆರ್ಸಿಬಿ ತಂಡ ಹೇಗಿದೆ ಗೊತ್ತೇ??

ಕೊಹ್ಲಿ ಆರಂಭಿಕನಾಗಿ, ಅನುಜ್ ರಾವತ್ ಔಟ್, ಹೈದೆರಾಬಾದ್ ತಂಡದ ವಿರುದ್ದದ ಪಂದ್ಯಕ್ಕೆ ಸಂಭಾವ್ಯ ಆರ್ಸಿಬಿ ತಂಡ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರಲ್ಲಿ ಹತ್ತು ತಂಡಗಳು ಟಾಟಾ ಕಪ್ ಗಾಗಿ ಸೆಣಸಾಡುತ್ತಿರುವುದು ನಿಮಗೆ ತಿಳಿದಿರುವ ವಿಷಯ. ಟೂರ್ನಿ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಈಗ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬೀಳುವ ಹಂತದಲ್ಲಿದೆ. ಆದರೇ ಉಳಿದ ಎಂಟು ತಂಡಗಳು ಪ್ಲೇ ಆಫ್ ರೇಸ್ ಗೆ ತೇರ್ಗಡೆಯಾಗಲು ತೀವ್ರ ಹಣಾಹಣಿ ನಡೆಸಿವೆ.

ಇನ್ನು ಕನ್ನಡಿಗರ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಏಳು ಪಂದ್ಯಗಳಲ್ಲಿ ಈಗಾಗಲೇ ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಎಂಟನೇ ಪಂದ್ಯವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಒಂದು ಬದಲಾವಣೆ ಪಕ್ಕಾ ಆಗಲಿದೆ ಎಂಬುದು ಮೂಲಗಳಿಂದ ಬಂದ ಮಾಹಿತಿ. ಸದ್ಯ ಆರ್ಸಿಬಿ ತಂಡದ ಆರಂಭಿಕರಾಗಿರುವ ಅನುಜ್ ರಾವತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅರ್ಧಶತಕ ಗಳಿಸಿದ್ದರೇ, ಉಳಿದ ಪಂದ್ಯಗಳಲ್ಲಿ ಬೇಗನೇ ಔಟಾಗಿ ತಂಡದ ಮೇಲೆ ಒತ್ತಡ ಏರುವಂತೆ ಮಾಡುತ್ತಿದೆ.

ಹೀಗಾಗಿ ಈ ಪಂದ್ಯದಲ್ಲಿ ಅನುಜ್ ರಾವತ್ ಸ್ಥಾನ ಕಳೆದುಕೊಳ್ಳುವುದು ಪಕ್ಕಾ. ಇವರ ಬದಲಿಗೆ ಆಲ್ ರೌಂಡರ್ ಆಗಿ ಮಹಿಪಾಲ್ ಲೋಮ್ರೋರ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೇ ಆರಂಭಿಕರಾಗಿ ಸುಯೇಶ್ ಪ್ರಭುದೇಸಾಯಿ ಆಡಲಿದ್ದಾರೋ,ಅಥವಾ ವಿರಾಟ್ ಕೊಹ್ಲಿ ಆಡಲಿದ್ದಾರೆಯೋ ಅಥವಾ ಮಹಿಪಾಲ್ ಲೋಮ್ರೋರ್ ಆಡಲಿದ್ದಾರೆಯೋ ಎಂಬುದು ಇನ್ನು ನಿರ್ಧಾರವಾಗಿಲ್ಲ. ಈ ಬಗ್ಗೆ ಅಂತಿಮ ತೀರ್ಮಾನ ಪಂದ್ಯದಲ್ಲಿಯೇ ತಿಳಿಯಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಒಟ್ಟಾರೆಯಾಗಿ ತಂಡ ಇಂತಿದೆ – ಫಾಪ್ ಡು ಪ್ಲೇಸಿಸ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ರೋರ್, ಸುಯೇಶ್ ಪ್ರಭುದೇಸಾಯಿ, ಗ್ಲೆನ್ ಮ್ಯಾಕ್ಸ್ವೆಲ್, ಶಹಬಾಜ್ ಅಹಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್ವುಡ್, ಮಹಮದ್ ಸಿರಾಜ್.