ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪ್ರಶಾಂತ್ ನೀಲ್ ಜೊತೆ ಅಪ್ಪು ಸಿನಿಮಾ ಮಾಡಬೇಕಾಗಿತ್ತು, ಆದರೆ ಸಿನಿಮಾ ಸೆಟ್ಟೇರಲಿಲ್ಲ ಯಾಕೆ ಗೊತ್ತೇ??

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪ್ರಶಾಂತ್ ನೀಲ್ ಜೊತೆ ಅಪ್ಪು ಸಿನಿಮಾ ಮಾಡಬೇಕಾಗಿತ್ತು, ಆದರೆ ಸಿನಿಮಾ ಸೆಟ್ಟೇರಲಿಲ್ಲ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ದೇಶ ವಿದೇಶಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಕೋಟಿ ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿದೆ. ಪ್ರತಿದಿನ 100 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿರುವುದು ನಿಜಕ್ಕೂ ಕೂಡ ಕನ್ನಡ ಹಾಗೂ ಕನ್ನಡ ಚಿತ್ರರಂಗದ ಪ್ರೇಕ್ಷಕರು ಹೆಮ್ಮೆಪಡುವಂತಹ ವಿಚಾರವಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಗೆಲುವಿಗೆ ನಾವು ಹಲವಾರು ಜನರನ್ನು ಹೋಗಬಹುದಾಗಿದೆ ಆದರೆ ಇದರ ಕಲ್ಪನೆ ಮೊದಲು ಹುಟ್ಟಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ. ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಅವರಿಂದ ಹಿಡಿದು ನಿರ್ಮಾಪಕ ವಿಜಯ್ ಕಿರಗಂದೂರು ರವರು ಕೂಡ ಕೆಜಿಎಫ್ ಚಾಪ್ಟರ್ 1 ಹಾಗೂ 2 ಸಿನಿಮಾಗಳ ಗೆಲುವಿನ ಶ್ರೇಯವನ್ನು ನಿರ್ದೇಶಕ ಪ್ರಶಾಂತ್ ನೀಲ್ ರವರಿಗೆ ಅರ್ಪಿಸುತ್ತಾರೆ.

ನಿಜಕ್ಕೂ ಕೂಡ ಇಂತಹ ಒಬ್ಬ ಪ್ರತಿಭಾನ್ವಿತ ಹಾಗೂ ದೂರಾಲೋಚನೆ ಹೊಂದಿರುವ ನಿರ್ದೇಶಕ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಎನ್ನುವುದು ನಮ್ಮ ಹೆಮ್ಮೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಜಯ್ ಕಿರಗಂದೂರು ರವರು ಸಿನಿಮಾ ಕ್ಷೇತ್ರಕ್ಕೆ ನಿರ್ಮಾಪಕರಾಗಿ ಕಾಲಿಟ್ಟಿದ್ದು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾದ ಮೂಲಕ. ಪ್ರಶಾಂತ್ ನೀಲ್ ರವರು ಉಗ್ರಂ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟ ನಂತರ ಪುನೀತ್ ರಾಜಕುಮಾರ್ ರವರಿಗೆ ಸಿನಿಮಾವನ್ನು ಮಾಡಬೇಕಾಗಿತ್ತು.

ಪುನೀತ್ ರಾಜಕುಮಾರ್ ಅವರಿಗಾಗಿ ಪ್ರಶಾಂತ್ ನೀಲ್ ಆಹ್ವಾನ ಎನ್ನುವ ಫ್ಯಾಮಿಲಿ ಕಥೆಯನ್ನು ಹೊಂದಿರುವಂತಹ ಸಿನಿಮಾವನ್ನು ಮಾಡುವ ನಿರ್ಧಾರವನ್ನು ಮಾಡಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ತೆರೆಗೆ ಬಂದು ಸೂಪರ್ಹಿಟ್ ಆಗಬೇಕಾಗಿತ್ತು. ಆದರೆ ಈ ಮಧ್ಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರಿಂದಾಗಿ ಪ್ರಶಾಂತ್ ನೀಲ್ ಅವರ ಆಹ್ವಾನ ಸಿನಿಮಾವನ್ನು ಮಾಡಲು ಸಾಧ್ಯವಾಗಲಿಲ್ಲ, ಅಪ್ಪು ರವನ್ನು ಮುಂದೆ ಮಾಡೋಣ ಎಂದಿದ್ದರಂತೆ. ಆಗ ಬೇರೆ ಕಥೆಯನ್ನು ಬರೆದಿದ್ದೀರಾ ಎನ್ನುವುದಾಗಿ ವಿಜಯ್ ಕಿರಗಂದೂರು ರವರು ಕೇಳಿದಾಗ ಪ್ರಾರಂಭವಾಗಿದ್ದ ಕೆಜಿಎಫ್ ಚಾಪ್ಟರ್ 1. ಈ ವಿಚಾರವನ್ನು ಸ್ವತಃ ಪ್ರಶಾಂತ್ ನೀಲ್ ಅವರೇ ಅನುಶ್ರೀ ಅವರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.