ಕರುನಾಡ ವಾಣಿ
ಇದು ನಿಮ್ಮ ಧ್ವನಿ

DKD ಕಾರ್ಯಕ್ರಮಕ್ಕೆ ಸೆಲೆಕ್ಟ್ ಆದ ಎಲ್ಲಾ ಸ್ಪರ್ಧಿಗಳದ್ದು ಒಂದೊಂದು ಕಥೆ. ಎಷ್ಟೆಲ್ಲಾ ಜೀವನ ನೋಡಿ ಇಲ್ಲಿಯವರೆಗೂ ಬಂದಿದ್ದಾರೆ ಗೊತ್ತೆ?? ಸ್ಪರ್ಧಿಗಳ ಹಿನ್ನೆಲೆ ಏನು ಗೊತ್ತೇ??

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಗಳಲ್ಲಿ ಧಾರವಾಹಿ ಹೊರತುಪಡಿಸಿ ರಿಯಾಲಿಟಿ ಶೋಗಳು ಕೂಡ ಕಿರುತೆರೆ ಪ್ರೇಕ್ಷಕರ ಗಮನವನ್ನು ಸೆಳೆಯುತ್ತವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ವಾಹಿನಿಗಳ ರಿಯಾಲಿಟಿ ಶೋಗಳನ್ನು ಕೂಡ ಹೊಸಹೊಸದಾಗಿ ಪ್ರಸಾರಮಾಡಲು ಆರಂಭಿಸಿದೆ. ಹಗಳಲ್ಲಿ ಇತ್ತೀಚಿಗೆ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ದ ಹೊಸ ಸೀಸನ್ ಹೊಸದಾಗಿ ಆರಂಭವಾಗಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಮೊದಲ ಇಂಪ್ರೆಷನ್ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರ ಮನವನ್ನು ಸಂಪೂರ್ಣವಾಗಿ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಮಕ್ಕಳ ಡ್ಯಾನ್ಸ್ ನೋಡುತ್ತಿದ್ದರೆ ಮನಸ್ಸು ಕುಂತಲ್ಲೇ ಕುಣಿದಾಡುತ್ತಿತ್ತು ಎನ್ನುವ ಅನುಭವವನ್ನು ನೀಡುತ್ತದೆ. ಅಂತೂ-ಇಂತೂ ಮೊದಲ ಪ್ರಸಾರದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಹೋಸ ಸೀಸನ್ ನ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಮೊದಲ ಸಂಚಿಕೆ ನಿಜವಾಗಿಯೂ ಪ್ರತಿಯೊಬ್ಬ ಪ್ರೇಕ್ಷಕನಿಗೆ ಹಲವು ಸಮಯಗಳ ಕಾಲ ನೆನಪಿರುತ್ತದೆ. ಅನುಶ್ರೀ ಅವರ ನಿರೂಪಣೆ ಹಾಗೂ ಕಾರ್ಯಕ್ರಮದ ಪ್ರಮುಖ ತೀರ್ಪುಗಾರರು ರಾಗಿರುವ ಶಿವಣ್ಣನವರ ಡ್ಯಾನ್ಸ್ ಹಾಗೂ ಸಂಭ್ರಮಾಚರಣೆ ನಿಜಕ್ಕೂ ಕೂಡ ಅವಿಸ್ಮರಣೀಯವಾಗಿತ್ತು. ಇನ್ನು ಈಗ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇಂದಿನ ಲೇಖನಿಯಲ್ಲಿ ಆಯ್ಕೆಯಾದವರ ಹೆಸರು ಹಾಗೂ ಅವರ ಕುರಿತಂತೆ ಕೊಂಚ ವಿವರಗಳನ್ನು ನಿಮಗೆ ನೀಡಲು ಹೊರಟಿದ್ದೇವೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಆಯ್ಕೆ ಸಂಚಿಕೆಯಲ್ಲಿ ಆಯ್ಕೆಯಾದವರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಪ್ರತಿಯೊಬ್ಬರೂ ಕಷ್ಟವನ್ನು ಹೊಂದಿರುವ ಕುಟುಂಬದ ಹಿನ್ನೆಲೆಯಿಂದ ಬಂದವರು. ಆದರೆ ಅವರಲ್ಲಿ ಪ್ರತಿಭೆ ಎನ್ನುವುದು ಅಗಾಧವಾಗಿದ್ದು ಜೀ ಕನ್ನಡ ವಾಹಿನಿ ಅವರಿಗೆ ಒಂದು ಒಳ್ಳೆಯ ಅವಕಾಶವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎನ್ನುವುದನ್ನು ನೋಡುವುದಾದರೆ, ಮೊದಲಿಗೆ ಸಾಕ್ಷಾ; ಮಂಗಳೂರು ಮೂಲದ ಮಂಗಳಮುಖಿ ಆಗಿರುವ ಸಾಕ್ಷಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಚಲ್ತಾ ಚಲ್ತಾ ಹೇ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ತಾನು ಹೇಗೆ ಇದ್ದೇನೆ ಎನ್ನುವುದು ಮುಖ್ಯವಲ್ಲ ನನ್ನಲ್ಲಿ ಇರುವಂತಹ ಪ್ರತಿಭೆ ಮುಖ್ಯ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಶಿವಣ್ಣ ಕೂಡ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.

ಋಷಿಕೇಶ್; ಬಳ್ಳಾರಿ ಮೂಲದ ಋಷಿಕೇಶ್ ರವರಿಗೆ ಒಂದು ಕೈಯಿನ ನ್ಯೂನತೆ ಇದ್ದರೂ ಕೂಡ ತನ್ನ ನೃತ್ಯದ ಪ್ರತಿಭೆಯಲ್ಲಿ ಯಾವುದೇ ನ್ಯೂನತೆಗೆ ಇಲ್ಲ ನಾನು ಪರಿಪೂರ್ಣವಾಗಿ ಇದ್ದೇನೆ ಎನ್ನುವುದನ್ನು ಕೆಜಿಎಫ್ ನ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸಾಬೀತುಪಡಿಸಿದ್ದಾರೆ. ರಾಹುಲ್; ದಾವಣಗೆರೆ ಮೂಲದ ರಾಹುಲ್ ನನ್ನು ಚಿಕ್ಕ ವಯಸ್ಸಿರಬೇಕಾದರೆ ಅವರ ತಂದೆ ಅವನನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದಲೂ ಕೂಡ ತಾಯಿಯೆ ಅವರನ್ನು ಸಾಕುತ್ತಿದ್ದಾರೆ. ಕಾಗದದ ದೋಣಿಯಲ್ಲಿ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ರಾಹುಲ್ ಶಿವಣ್ಣ ಸೇರಿದಂತೆ ಎಲ್ಲಾ ತೀರ್ಪುಗಾರರ ಮನವನ್ನು ಗೆದ್ದಿದ್ದಾನೆ.

ತ್ರಿಶ; ವಯಸ್ಸು 14 ಆಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಕಣ್ಣು ಹೊಡೆಯಾಕ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ನಾನು ಯಾರಿಗೂ ಕಮ್ಮಿ ಇಲ್ಲ ಎನ್ನುವುದಾಗಿ ಸಾಬೀತುಪಡಿಸಿದ್ದಾರೆ. ದಕ್ಷತ್ ಗೌಡ; ಈ ಚೋಟ ಪಟಾಕಿ ದಕ್ಷತ್ ಗೌಡ ಗೆ ವಯಸ್ಸು ಎಂಟು ಆಗಿದ್ದರೂ ಕೂಡ ಆತನ ನೃತ್ಯಕ್ಕೂ ಹಾಗೂ ವಯಸ್ಸಿಗೂ ಸಂಬಂಧವೇ ಇಲ್ಲದಂತೆ ಅದ್ದೂರಿಯಾಗಿ ಡ್ಯಾನ್ಸ್ ಮಾಡಿದ್ದಾನೆ. ಇವನೊಂದಿಗೆ ಶಿವಣ್ಣನ ಕೂಡ ಆಂಜನೇಯನ ಹಾಡಿಗೆ ನೃತ್ಯ ಮಾಡಿ ವೇದಿಕೆಯಲ್ಲಿ ಸಂಭ್ರಮಾಚರಣೆಯನ್ನು ನಿರ್ಮಾಣ ಮಾಡಿದ್ದರು. ದಿಶಾ ದೇಚಮ್ಮ; ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ದಿಶಾ ಶಿವಣ್ಣ ಸೇರಿದಂತೆ ಎಲ್ಲರ ಹೃದಯವನ್ನು ಗೆಲ್ಲುವಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾಳೆ.

ಇವೆಲ್ಲಾ ಪ್ರತಿಭೆಗಳು ಈಗಾಗಲೇ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಇವರ ಹಿಂದೆ ನೂರಾರು ಕಷ್ಟಗಳಿದ್ದರೂ ಕೂಡ ಡ್ಯಾನ್ಸ್ ವೇದಿಕೆಯಲ್ಲಿ ಮನಸ್ಸು ಬಿಚ್ಚಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಕರ್ನಾಟಕದ ಮನೆಮನೆಗೂ ಕೂಡ ತೋರಿಸುವಂತಹ ತವಕದಲ್ಲಿದ್ದಾರೆ. ಕನ್ನಡಿಗರಾದ ನಾವು ಈ ಪ್ರತಿಭೆಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹವನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.

Get real time updates directly on you device, subscribe now.