ದಿನೇಶ್ ಕಾರ್ತಿಕ್ ರವರನ್ನು ಮುಂದಿನ ವಿಶ್ವಕಪ್ ಗೆ ಆಯ್ಕೆ ಮಾಡುವ ಕುರಿತು ಗವಾಸ್ಕರ್ ಸಲಹೆ ಕೊಟ್ಟು ಹೇಳಿದ್ದೇನು ಗೊತ್ತೆ??

ದಿನೇಶ್ ಕಾರ್ತಿಕ್ ರವರನ್ನು ಮುಂದಿನ ವಿಶ್ವಕಪ್ ಗೆ ಆಯ್ಕೆ ಮಾಡುವ ಕುರಿತು ಗವಾಸ್ಕರ್ ಸಲಹೆ ಕೊಟ್ಟು ಹೇಳಿದ್ದೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ಖಂಡಿತವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ಪ್ರದರ್ಶನ ನೋಡಿ ಖಂಡಿತವಾಗಿ ಆಶ್ಚರ್ಯ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಂದು ಕೂಡ ದಿನೇಶ್ ಕಾರ್ತಿಕ್ ರವರು ಈ ಮಟ್ಟದ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿರಲಿಲ್ಲ. ದಿನೇಶ್ ಕಾರ್ತಿಕ್ ರವರು ಅಗ್ರೆಸ್ಸಿವ್ ಆಟವನ್ನು ನೋಡಿ ಲೆಜೆಂಡರಿ ಕ್ರಿಕೆಟಿಗರು ಕೂಡ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ದಿನೇಶ್ ಕಾರ್ತಿಕ್ ರವರು 7 ಇನ್ನಿಂಗ್ಸ್ ನಲ್ಲಿ ಕ್ರಮವಾಗಿ 32 14 44 7 34 66 ಹಾಗೂ 13 ರನ್ನುಗಳನ್ನು ಗಳಿಸಿದ್ದಾರೆ.

ನಿಜಕ್ಕೂ ಕೂಡ ಒಂದು ಲೆಕ್ಕದಲ್ಲಿ ಹೇಳುವುದಾದರೆ ದಿನೇಶ್ ಕಾರ್ತಿಕ್ ರವರು ತಮ್ಮ ಕರಿಯರ್ ನ ಉನ್ನತ ಹಂತದಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ಈ ಬಾರಿ ಎಬಿ ಡಿವಿಲಿಯರ್ಸ್ ಅವರ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ರವರು ತಮ್ಮ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ಪರಿಪಕ್ವ ಹಾಗೂ ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಇದರ ಕುರಿತಂತೆ ಸ್ವತಃ ದಿನೇಶ್ ಕಾರ್ತಿಕ್ ರವರ ಸಂದರ್ಶನದಲ್ಲಿ ಐಪಿಎಲ್ ನಲ್ಲಿ ನಾನು ಆಡುತ್ತಿರುವುದು ಕೇವಲ ನನ್ನ ಕ್ರಿಕೆಟ್ ಜೀವನದ ಭಾಗವಷ್ಟೇ. ಆದರೆ ಇದರಿಂದ ನನ್ನ ದೇಶ ಹೆಮ್ಮೆಪಡುವಂತಹ ಕೆಲಸವನ್ನು ಮಾಡಬೇಕು ಎನ್ನುವುದಾಗಿ ಆಸೆಯನ್ನು ವ್ಯಕ್ತಪಡಿಸಿದ್ದರು.

ಇದೇ ಹಿನ್ನೆಲೆಯಲ್ಲಿ ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಸುನಿಲ್ ಗಾವಸ್ಕರ್ ಅವರು ಕೂಡ ದಿನೇಶ್ ಕಾರ್ತಿಕ್ ಅವರ ವಯಸ್ಸನ್ನು ನೋಡುವುದು ಬೇಡ ಅವರು ಮಾಡುತ್ತಿರುವ ಕೆಲಸವನ್ನು ನಾವು ನೋಡಬೇಕು. ಈಗಾಗಲೇ ದಿನೇಶ್ ಕಾರ್ತಿಕ್ ರವರು ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾರೆ. ಅವರಿಗೆ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿದರೆ ಖಂಡಿತವಾಗಿ ತಂಡಕ್ಕೆ ತಮ್ಮ ಅನುಭವದ ಜೊತೆಗೆ ಅತ್ಯುತ್ತಮ ಆಟವನ್ನು ಕೂಡ ಧಾರೆ ಎರೆಯಲಿದ್ದಾರೆ ಎನ್ನುವುದಾಗಿ ಹೇಳಿದ್ದಾರೆ. ಇದೇ ರೀತಿಯ ಮಾತನ್ನು ಹಲವಾರು ಮಾಜಿ ಕ್ರಿಕೆಟಿಗರು ಕೂಡ ಹೇಳಿದ್ದು ಎಲ್ಲರ ಅಭಿಪ್ರಾಯ ಕೂಡ ದಿನೇಶ್ ಕಾರ್ತಿಕ್ ರವರಿಗೆ ಈ ಬಾರಿಯ t20 ವರ್ಲ್ಡ್ ಕಪ್ ತಂಡದಲ್ಲಿ ಸ್ಥಾನ ಸಿಗಬೇಕು ಎನ್ನುವುದಾಗಿ. ಮುಂದಿನ ದಿನಗಳಲ್ಲಿ ಇದು ಎಷ್ಟರಮಟ್ಟಿಗೆ ನಿಜ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.