ಆರ್ಸಿಬಿ ತಂಡದಲ್ಲಿ ಆ ಒಬ್ಬ ವಿದೇಶಿ ಆಟಗಾರನಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುವುದು ಬಹುತೇಕ ಅನುಮಾನ. ಯಾಕೆ ಗೊತ್ತೇ??

ಆರ್ಸಿಬಿ ತಂಡದಲ್ಲಿ ಆ ಒಬ್ಬ ವಿದೇಶಿ ಆಟಗಾರನಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುವುದು ಬಹುತೇಕ ಅನುಮಾನ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿಯ ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮತೋಲಿತ ಪ್ರದರ್ಶನವನ್ನು ನೀಡುತ್ತಿದೆ. ಒಂದು ವೇಳೆ ಯಾವುದೇ ವಿಭಾಗದಲ್ಲಿ ಕೊರತೆ ಕಂಡುಬಂದರೂ ಕೂಡ ಮತ್ತೊಂದು ವಿಭಾಗದಲ್ಲಿ ಅದನ್ನು ಸಮ ತೋರಿಸುವ ಮೂಲಕ ತಂಡದ ಗೆಲುವಿಗೆ ಕೆಲವು ಪ್ರಮುಖ ಆಟಗಾರರು ಕಾರಣ ಆಗುತ್ತಿದ್ದಾರೆ. ಆದರೆ ನೀವು ಗಮನಿಸಿರಬಹುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ. ನಾಯಕ ಡುಪ್ಲೆಸಿಸ್ ರವರು ಕೆಲವೊಂದು ಪಂದ್ಯಗಳಲ್ಲಿ ಮಾತ್ರ ಚೆನ್ನಾಗಿ ಆಡಿದ್ದರು.

ಆದರೆ ಉಳಿದ ಎಲ್ಲಾ ಪಂದ್ಯಗಳಲ್ಲಿ ನೀರಸ ಪ್ರದರ್ಶನವನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ. ಅದರಲ್ಲಿರುವ ಉದಯೋನ್ಮುಖ ಆಟಗಾರನಾಗಿರುವ ಅನುಜ್ ರಾವತ್ ನೀಡಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಕೊಂಡಿಲ್ಲ ಎಂದು ಹೇಳಬಹುದಾಗಿದೆ. ಈ ಕಾರಣದಿಂದಾಗಿ ಅಭಿಮಾನಿಗಳು ಮಾತ್ರವಲ್ಲದೆ ತಂಡದಲ್ಲಿ ಕೂಡ ಆರಂಭಿಕ ಆಟಗಾರರಲ್ಲಿ ಬದಲಾವಣೆ ಮಾಡಬೇಕಾಗಿದೆ ಎಂಬುದಾಗಿ ಸದ್ದು ಕೇಳಿಬರುತ್ತಿದೆ. ಹೀಗಾಗಿ ಅನುಜ್ ರಾವತ್ ರವರ ಸ್ಥಾನಕ್ಕೆ ನ್ಯೂಜಿಲೆಂಡ್ ಆಟಗಾರನಾಗಿರುವ ಫಿನ್ ಅಲೆನ್ ಅವರನ್ನು ಕರೆತರಬೇಕು ಎನ್ನುವುದಾಗಿ ಲೆಕ್ಕಾಚಾರಗಳು ನಡೆಯುತ್ತಿವೆ. ಆದರೆ ಇದರಲ್ಲಿ ಸಾಕಷ್ಟು ಅಡೆತಡೆಗಳು ಕೂಡ ಇವೆ.

ಹೌದು ಗೆಳೆಯರೇ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆ. ತಂಡದ ನಾಯಕ ಡುಪ್ಲೆಸಿಸ್ ಮ್ಯಾಕ್ಸ್ವೆಲ್ ಜೋಶ್ ಹೆಝಲ್ ವುಡ್ ಹಾಗೂ ಹಸರಂಗ. ಡುಪ್ಲೆಸಿಸ್ ರವರು ಖಂಡಿತವಾಗಿ ನಾಯಕನಾಗಿರುವುದರಿಂದಾಗಿ ತಂಡದಲ್ಲಿ ಇರಲೇಬೇಕಾಗುತ್ತದೆ. ಗ್ಲೆನ್ ಮ್ಯಾಕ್ಸ್ವೆಲ್ ರವರು ಕೂಡ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೆಝಲ್ ವುಡ್ ಖಂಡದ ಪ್ರಮುಖ ಬೌಲರ್ ಆಗಿದ್ದಾರೆ. ಇನ್ನು ಫಿನ್ ಅಲೆನ್ ರವರನ್ನು ತಂಡದ ಒಳಗೆ ಕರೆ ತರಬೇಕಾದರೆ ಹಸರಂಗ ರವರನ್ನು ಹೊರ ಹಾಕಬೇಕಾಗುತ್ತದೆ. ಇತ್ತೀಚಿಗೆ ಕೆಲವು ಪಂದ್ಯಗಳಿಂದ ಉತ್ತಮ ವಿಕೆಟ್ ಗಳನ್ನು ತೆಗೆದಿರುವ ಅವರು ತಂಡದ ಪ್ರಮುಖ ಆಟಗಾರರಲ್ಲಿ ಕಾಣಿಸಿಕೊಳ್ಳುತ್ತಾರೆ ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯಾಟಕ್ಕೆ ಫಿನ್ ಅಲೆನ್ ರವರನ್ನು ಕರೆತರುವುದು ಅನುಮಾನವೇ ಆಗಿದೆ. ಫಿನ್ ಅಲೆನ್ ರವರು ಅಗ್ರೆಸಿವ್ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿ ಕೊಂಡಿದ್ದಾರೆ ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.