ಇಡೀ ವಿಶ್ವದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿಕೊಳ್ಳುತ್ತಿದ್ದರೂ ಕೂಡ ಕೆಜಿಎಫ್-2 ಚಿತ್ರದ ಕುರಿತಂತೆ ಅಸಮಾಧಾನ ಹೊರಹಾಕಿದ ಮಾಜಿ ಪೊಲೀಸ್ ಕಮಿಷನರ್. ಯಾಕೆ ಗೊತ್ತೇ?

ಇಡೀ ವಿಶ್ವದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿಕೊಳ್ಳುತ್ತಿದ್ದರೂ ಕೂಡ ಕೆಜಿಎಫ್-2 ಚಿತ್ರದ ಕುರಿತಂತೆ ಅಸಮಾಧಾನ ಹೊರಹಾಕಿದ ಮಾಜಿ ಪೊಲೀಸ್ ಕಮಿಷನರ್. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ ದೇಶವಿದೇಶಗಳಲ್ಲಿ ಅದ್ದೂರಿ ಪ್ರದರ್ಶನವನ್ನು ಕಾಣುತ್ತಿದೆ. ನಿಜ ಕೂಡ ಕನ್ನಡ ಚಿತ್ರವೊಂದು ಇಂತಹ ದೊಡ್ಡ ಸಾಧನೆ ಮಾಡುತ್ತದೆ ಎಂದರೆ ನಾವೆಲ್ಲರೂ ಹೆಮ್ಮೆ ಪಡಲೇಬೇಕು. ಕೆಜಿಎಫ್ ಚಾಪ್ಟರ್ 2 ಚಿತ್ರ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಜಾಗತಿಕವಾಗಿ ತೆರೆದಿಟ್ಟಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಕೇವಲ ನಾಲ್ಕು ದಿನಗಳಲ್ಲಿ ಅಂದರೆ ಮೊದಲ ವಾರಂತ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರ 525 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ವಿಶ್ವಾದ್ಯಂತ ಮಾಡಿದೆ.

ಈ ಮೂಲಕ ಎಷ್ಟೋ ಬಾಲಿವುಡ್ ಹಾಗೂ ಬಾಹುಬಲಿ ಹಾಗೂ ಆರ್ ಆರ್ ಆರ್ ಚಿತ್ರಗಳ ದಾಖಲೆಯನ್ನು ಕೂಡ ಮೆಟ್ಟಿ ಮರೆಯುತ್ತಿದೆ. ಇದು ಕೇವಲ ಎಸ್ ಅಥವಾ ಪ್ರಶಾಂತ ನೀಲ್ ರವರ ವಿಜಯ ಎಂದು ಹೇಳುವುದಕ್ಕಿಂತ ಕನ್ನಡ ಚಿತ್ರರಂಗದ ಗೆಲುವು ಎಂದರೆ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಚಿತ್ರದ ಸಾಧನೆಯನ್ನು ನೋಡಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೇರಿದಂತೆ ಪರಭಾಷಾ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಗೆಲುವನ್ನು ನೋಡಿ ಕರ್ನಾಟಕ ಪೊಲೀಸ್ ಇಲಾಖೆಯ ಮಾಜಿ ಕಮಿಷನರ್ ಒಬ್ಬರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು ಕರ್ನಾಟಕ ಪೊಲೀಸ್ ಇಲಾಖೆಯ ಮಾಜಿ ಕಮಿಷನರ್ ಆಗಿರುವ ಭಾಸ್ಕರರಾವ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆ ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಾಯಕ ನಟ ಕ್ರಿ’ಮಿನಲ್ ಆಗಿದ್ದಾನೆ. ಆತನನ್ನು ವಿಜ್ರಂಭಿಸುವ ಮೂಲಕ ನೀವು ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಹೋಗುತ್ತಿದ್ದೀರಾ ಎನ್ನುವುದಾಗಿ ಭಾಸ್ಕರ್ ರಾವ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರತಂಡಕ್ಕೆ ಪ್ರಶ್ನೆಯನ್ನು ಮಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದಿಂದ ನಾವು ಒಂದು ಒಳ್ಳೆಯ ವಿಚಾರವನ್ನು ಕಲಿಯುವಂತಹ ಹಾಗೆ ಸಿನಿಮಾವನ್ನು ಮಾಡಿ ಇಂತಹ ರೌ’ಡಿ ಕ್ಯಾರೆಕ್ಟರ್ ಗಳನ್ನು ಸಮಾಜದಲ್ಲಿ ಪೋಷಿಸುವ ಅಂತಹ ಕೆಲಸವನ್ನು ಮಾಡಬೇಡಿ ಎಂಬುದಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಭಾಸ್ಕರರಾವ್ ರವರ ಅಭಿಪ್ರಾಯಗಳ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.