ಕಲಿಯುಗಕ್ಕೆ ಯಾವಾಗ ಕಲ್ಕಿ ಬರ್ತಾನೆ ಗೊತ್ತೇ?? ಕಲ್ಕಿ ಬಂದಾಗ ಪರಿಸ್ಥಿತಿ ಹೇಗಿರಲಿದೆ, ಹೇಗೆ ಬದಲಾಗಲಿದೆ ಗೊತ್ತೇ??

ಕಲಿಯುಗಕ್ಕೆ ಯಾವಾಗ ಕಲ್ಕಿ ಬರ್ತಾನೆ ಗೊತ್ತೇ?? ಕಲ್ಕಿ ಬಂದಾಗ ಪರಿಸ್ಥಿತಿ ಹೇಗಿರಲಿದೆ, ಹೇಗೆ ಬದಲಾಗಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮಗೆ ದ್ವಾಪರಾಯುಗ ತ್ರೇತಾಯುಗ ಮೊದಲಾದ ಯುಗಗಳು ಕೊನೆಯಾಗಿ ಈಗ ಕಲಿಯುವದಲ್ಲಿ ನಾವು ವಾಸಿಸುತ್ತಿರುವುದರ ಬಗ್ಗೆ ಅರಿವಿದೆ. ಪುರಾಣಗಳಲ್ಲಿ ಬರುವ ಹಾಗೆ ಉಳಿದ ಎಲ್ಲಾ ಯುಗಗಳೂ ಮುಗಿದ ಹಾಗೆ ಕಲಿಯುಗಕ್ಕೂ ಒಂದು ಅಂತ್ಯ ಇರ್ಬೇಕಲ್ವಾ? ಮಹಾವಿಷ್ಣು ಹೇಗೆ ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ಅವತಾರವನ್ನ ತಾಳುತ್ತಾನೋ ಹಾಗೆ ಕಲಿಯುಗವನ್ನ ಅಂತ್ಯ ಮಾಡೋಕೂ ಕಲ್ಕಿಯ ಅವತಾರ ಎತ್ತಿ ಬರುತ್ತಾನೆ ಎಂಬುದು ಪುರಾಣಗಳ ಉಲ್ಲೇಖ!

ಹೌದು ನೀವು ಕೃಷ್ಣನ ಭಾಗವತ್ ಪುರಾಣವನ್ನ ನೋಡಿದ್ರೆ ಅದರಲ್ಲಿ ಈ ಕಲಿಯುಗ ಅಂತವಾಗೋದರ ಬಗ್ಗೆ ಇಂಚಿಂಚೂ ಹೇಳಲಾಗಿದೆ. “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಅಂತ ಕೃಷ್ಣ ಹೇಳಿದ್ದು ಮಹಾಭಾರತದಲ್ಲಿ ಅದರ ಅರ್ಥ ಈಗಲೂ ಪಾಪಿಗಳು ಹೆಚ್ಚಾದಾಗ, ಅನ್ಯಾಯ ಮಾಡುವವರು, ಮೋಸ ದರೋಡೆ ಮಾಡುವವರು, ಪಾಪಿಗಳ ಅಟ್ಟಹಾಸ ಹೆಚ್ಚಾದಾಗ ಧರ್ಮವನ್ನ ಸ್ಥಾಪಿಸೋದಕ್ಕೆ ಆ ಭಗವಂತ ಬರಲೇಬೇಕಲ್ವಾ?

ಇನ್ನು ಕಲಿಯುಗ ಅಂತ್ಯವಾಗಿಸಿ, ಅಧರ್ಮವನ್ನ ಹೋಗಲಾಡಿಸಿ ಧರ್ಮವನ್ನ ಮತ್ತೆ ನೆಲೆಗೊಳ್ಳುವಂತೆ ಮಾಡಲು ಬರುವ ಕಲ್ಕಿಗೆ ದುಷ್ಟರ ಸಂಹಾರಕ್ಕೆ ಶಿಷ್ಟರ ರಕ್ಷಣೆಗೆ ಕೇವಲ ಮೂರೇ ದಿನ ಸಾಕಂತೆ. ಇನ್ನು ಭಾಗವತ್ ಪುರಾಣಗಳಲ್ಲಿ ಹೇಳುವ ಹಾಗೆ ಕಲ್ಕಿ ಬರುವ ಮುನ್ಸೂಚನೆ ಹೇಗಿರುತ್ತೆ ಗೊತ್ತಾ? ಮೊದಲನೆಯದಾಗಿ ಜನ ಹಸಿವಿನಿಂದ ಬಳಲುತ್ತಾರೆ. ಭೀಕರ ಬರಗಾಲವನ್ನ ಎದುರಿಸಬೇಕಾಗುತ್ತೆ. ಅಷ್ಟೇ ಅಲ್ಲ ಕೆಟ್ಟ ರೋಗಗಳು ಬಂದು ನಮ್ಮನ್ನ ಆವರಿಸಿಕೊಳ್ಳತ್ತೆ.

ಇನ್ನು ನದಿಗಳು ಬತ್ತಿ ಹೋಗುತ್ತವೆ. ಪ್ರಾಣಿ ಸಂಕುಲ ನಾಶವಾಗುತ್ತೆ. ಮರ ಗಿಡಗಳು ಒಣಗಿ ಹೋಗುತ್ತೆ. ಯಾವ ಸಂಬಂಧಗಳೂ ಗಟ್ಟಿಯಾಗಿ ಉಳಿಯುವುದಿಲ್ಲ. ಗಂಡ ಹೆಂಡತಿ ಬೇರೆಯಾಗುತ್ತಾರೆ. ಬೇರೆ ಬೇರೆ ಜೋಡಿಯನ್ನ ಆಯ್ದುಕೊಳ್ಳುತ್ತಾರೆ. ಇನ್ನು ಮುಂದಿನ ಮುನ್ಸೂಚನೆ ಅಂದ್ರೆ, ದೇವಾಲಯಗಳು ಬರಿದಾಗುತ್ತವೆ. ಅಲ್ಲಿ ದೇವರಿಗಿಂತ ಅಧರ್ಮಕ್ಕೆ ಬೇಲೆ ಹೆಚ್ಚಾಗುತ್ತೆ. ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡವರೇ ಹೆಚ್ಚಾಗುತ್ತಾರೆ.

ಕಲ್ಕಿ ಬರುವ ಮುಂದಿನ ಮುನ್ಸೂಚನೆ ಅಂದ್ರೆ ಮನುಷ್ಯ ಮನುಷ್ಯನ ನಡುವೆ ದ್ವೇಷ ಉಂಟಾಗತ್ತೆ. ಸಣ್ಣ ಸಣ್ಣ ವಿಚಾರಕ್ಕೂ ಕೊಲೆ ಮಾಡುವ ಮಟ್ಟಕ್ಕೆ ಜನ ಮುಂದಾಗುತ್ತಾರೆ. ಎಲ್ಲಾ ವಿಚಾರಗಳಲ್ಲಿಯೂ ಜನ ಜಗಳವನ್ನ ಮಾಡ್ಖೋಳ್ಳೊದಕ್ಕೆ ಶುರು ಮಾಡ್ತಾರೆ. ಇನ್ನು ಕೊನೆಯದಾಗಿ ಸಂಪೂರ್ಣವಾಗಿ ಜನ ಅಧರ್ಮದ ದಾರಿಯನ್ನ ಹಿಡಿತಾರೆ. ಅಂಥವರ ನಾಶವೂ ಆಗುತ್ತೆ. ಆದರೆ ಯಾರು ಒಳ್ಳೆಯವರಾಗಿಯೇ ಇರುತ್ತಾರೋ, ಏನೇ ಆದರೂ ದೇವರ ಮೇಲೆ ನಂಬಿಕೆಯನ್ನ ಕಳೆದುಕೊಳ್ಳುವುದಿಲ್ಲವೋ, ಯಾರು ಧರ್ಮದಿಂದಲೇ ಜೀವಿಸುತ್ತಾರೋ ಅವರು ಮಾತ್ರ ಬದುಕುತ್ತಾರೆ ಎನ್ನುತ್ತೆ ಭಾಗವತ್ ಪುರಾಣ.