ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಭಿಮನ್ಯುವಿನ ಬಗ್ಗೆ ಎಲ್ಲವನ್ನು ತಿಳಿದಿದ್ದ ಕೃಷ್ಣ ಪರಮಾತ್ಮ, ತನ್ನ ನೆಚ್ಚಿನ ಅಭಿಮನ್ಯುವನ್ನು ಕಾಪಾಡಲಿಲ್ಲ ಯಾಕೆ ಗೊತ್ತೇ??

966

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಹಾನ್ ಗ್ರಂಥವಾಗಿರುವ ಮಹಾಭಾರತದ ಕುರಿತಂತೆ ಗೊತ್ತಿರುತ್ತದೆ. ಮಹಾಭಾರತದಲ್ಲಿ ಹಲವಾರು ಜನ ಮಹಾನ್ ಪರಾಕ್ರಮಿಗಳು ನಿಮಗೆ ಕಂಡುಬರುತ್ತಾರೆ. ಅದರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಹಾಭಾರತ ಕದನದಲ್ಲಿ ವೀರಾಗ್ರಣಿ ಯಂತೆ ಹೋರಾಡಿ ವೀರ ಸ್ವರ್ಗವನ್ನು ಪಡೆದಂತಹ ಅಭಿಮನ್ಯುವಿನ ಕುರಿತಂತೆ.

ಚಕ್ರವ್ಯೂಹವನ್ನು ಭೇದಿಸಿದ ನಂತರ ಅಭಿಮನ್ಯು ಎಲ್ಲಾ ಕೌರವ ವೀರರೊಂದಿಗೆ ಹೋರಾಡುತ್ತಾನೆ. ಈ ಸಂದರ್ಭದಲ್ಲಿ ದಾನವೀರ ಶೂರಕರ್ಣ ನೂ ಕೂಡ ಈ ಜಗತ್ತಿನಲ್ಲಿ ನಿಜವಾದ ವೀರ ಅಂತ ಯಾರಾದರೂ ಇದ್ದರೆ ಅದು ನೀನು ಮಾತ್ರ ಎಂಬುದಾಗಿ ಹೊಗಳುತ್ತಾನೆ. ಇನ್ನು ಶ್ರೀಕೃಷ್ಣ ಪರಮಾತ್ಮನ ಸ್ವಂತ ತಂಗಿಯ ಮಗನಾಗಿದ್ದರೂ ಕೂಡ ಅಭಿಮನ್ಯುವನ್ನು ಉಳಿಸಲು ಹೋಗಲಿಲ್ಲ. ಇದಕ್ಕೆ ಕೆಲವು ಕಾರಣಗಳು ಕೂಡ ಇವೆ ಅವುಗಳು ಏನೆಂಬುದನ್ನು ತಪ್ಪದೇ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೊದಲನೇ ಕಾರಣ ಹೇಳುವುದಾದರೆ ಈ ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಕೌರವನ ಭಾವ ನಾಗಿರುವ ಜಯದ್ರಥನು ಪಾಂಡವರಿಂದ ಸೋಲನ್ನು ಅನುಭವಿಸಿರುತ್ತಾನೆ. ಆಗ ಆತ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಪಾಂಡವರನ್ನು ಒಂದು ದಿನದ ಮಟ್ಟಿಗೆ ಸೋಲಿಸುವ ವರವನ್ನು ಪಡೆದುಕೊಂಡಿರುತ್ತಾನೆ. ಕುರುಕ್ಷೇತ್ರ ಸಮರದಲ್ಲಿ ಆದಿನ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸುತ್ತಾರೆ. ಈ ಸಂದರ್ಭದಲ್ಲಿ ಕೃಷ್ಣಾರ್ಜುನರು ಚಕ್ರವ್ಯೂಹದ ಒಳಗೆ ಹೋಗಿದ್ದರೆ ಸೋಲ ಬೇಕಾಗುತ್ತಿತ್ತು. ಹೀಗಾಗಿ ಕೃಷ್ಣ ಅರ್ಜುನನನ್ನು ಬೇರೆ ಕಡೆಗೆ ಸಮರಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗೂ ಅಭಿಮಾನ್ಯ ಚಕ್ರವ್ಯೂಹಕ್ಕೆ ಸಿಲುಕಿ ಶಿವನ ವರ ಫಲಿಸುವಂತೆ ಮಾಡುತ್ತಾನೆ ಆದರೆ ಅದರಿಂದ ಪಾಂಡವರಿಗೆ ಏನೂ ಆಗದಂತೆ ಕೂಡ ಮಾಡುತ್ತಾನೆ.

ಎರಡನೇ ಕಾರಣ ಹೇಳುವುದಾದರೆ ಮಹಾಭಾರತದಲ್ಲಿ ಧರ್ಮಸ್ಥಾಪನೆಗಾಗಿ ಪ್ರತಿಯೊಬ್ಬ ದೇವರು ಕೂಡ ಜನ್ಮವನ್ನು ತಾಳಿ ಇರುತ್ತಾರೆ. ವಿಷ್ಣು ಕೃಷ್ಣನಾಗಿ ಯಮಧರ್ಮ ಧರ್ಮರಾಯ ನಾಗಿ ಇಂದ್ರ ಅರ್ಜುನನಾಗಿ ವಾಯು ಭೀಮನಾಗಿ ಆದಿಶೇಷ ಬಲರಾಮನಾಗಿ. ಹೀಗೆ ಅಭಿಮನ್ಯುವಿನ ಅವತಾರ ಕೂಡ ದೇವರ ಅವತಾರವೇ ಆಗಿತ್ತು. ಹೌದು ಚಂದ್ರನ ಮಗ ಅಭಿಮನ್ಯುವಿನ ಅವತಾರವನ್ನು ಎತ್ತಿದ್ದ. ಆದರೆ ಚಂದ್ರದೇವ ತನ್ನ ಮಗನನ್ನು ಹೆಚ್ಚು ದಿನಗಳ ಕಾಲ ಬಿಟ್ಟಿರೋದು ಸಾಧ್ಯವಿಲ್ಲ ಹೀಗಾಗಿ ಕೇವಲ 16 ವರ್ಷಗಳ ಮಾತ್ರ ಆತನನ್ನು ಬಿಟ್ಟಿರಲು ಸಾಧ್ಯ ಎಂಬುದಾಗಿ ಹೇಳುತ್ತಾನೆ. ಹೀಗಾಗಿ ಚಂದ್ರದೇವನ ಮಾತಿಗೆ ಒಪ್ಪಿ ಅಭಿಮನ್ಯುನ ಅವತಾರದ ಕೇವಲ 16 ವರ್ಷಗಳು ಮಾತ್ರ ಇರುವಂತೆ ಮಾಡುತ್ತಾನೆ ಎಂದು ಕೆಲವೊಂದು ಪುರಾಣಗಳು ಹೇಳುತ್ತವೆ.

ಇನ್ನು ಮೂರನೇ ಕಾರಣ ಹೇಳುವುದಾದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಭಗವದ್ಗೀತೆ ಉಂಟಾಗಿದ್ದು ಯಾವ ಕಾರಣಕ್ಕೆ ಎಂಬುದು ನಿಮಗೆಲ್ಲ ಗೊತ್ತಿದೆ. ಹೌದು ಎದುರಾಳಿ ಪಕ್ಷದಲ್ಲಿ ತನ್ನ ಅಜ್ಜ ಗುರುಗಳು ಇದ್ದಾರೆ ಅವರ ವಿರುದ್ಧ ಹೇಗೆ ನಾನು ಹೋರಾಡಲಿ ಎನ್ನುವ ಗೊಂದಲಕ್ಕೆ ಅರ್ಜುನ ಬಿದ್ದಿದ್ದ. ಆಗ ಸಮರದಲ್ಲಿ ಅರ್ಜುನನಿಗೆ ಇನ್ನಷ್ಟು ರೋಷ ಉಕ್ಕಿ ಬರಲಿ ಎನ್ನುವ ಕಾರಣಕ್ಕಾಗಿ ಆತನ ಪುತ್ರ ಅಭಿಮನ್ಯುವನ್ನು ಉಳಿಸುವ ಅವಕಾಶ ಇದ್ದರೂ ಕೂಡ ಶ್ರೀಕೃಷ್ಣಪರಮಾತ್ಮ ತಟಸ್ಥನಾಗಿ ಉಳಿದುಕೊಂಡು ಬಿಡುತ್ತಾನೆ.

ನಾಲ್ಕನೇ ಕಾರಣವನ್ನು ಹೇಳುವುದಾದರೆ ಇದು ದಂತಕಥೆಯಲ್ಲಿ ಪ್ರಚಲಿತವಾಗಿದೆ. ಅಭಿಮನ್ಯು ಕಂಸನ ಸೇವಕನಾಗಿ ಅ’ಸುರನಾಗಿ ಹಿಂದಿನ ಜನ್ಮದಲ್ಲಿ ಇರುತ್ತಾನೆ. ಆತ ಕೃಷ್ಣನನ್ನು ಮುಗಿಸಲು ಹೊಂಚು ಹಾಕುತ್ತಿರುತ್ತಾನೆ. ನಂತರ ಶ್ರೀಕೃಷ್ಣಪರಮಾತ್ಮ ಆತನನ್ನು ಹುಳುವಿನ ರೂಪದಲ್ಲಿ ಬಂಧಿಸಿಡುತ್ತಾನೆ. ನಂತರ ಅರ್ಜುನ ಹಾಗೂ ಸುಭದ್ರೆ ಮದುವೆಯಾದ ನಂತರ ಅಸುರ ಅವಳ ಉದರವನ್ನು ಸೇರುತ್ತಾನೆ. ನಂತರ ಚಕ್ರವ್ಯೂಹವನ್ನು ಹೇಗೆ ಭೇದಿಸುವುದು ಎನ್ನುವುದರ ಕುರಿತಂತೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾನೆ.

ಆದರೆ ಅದರಿಂದ ಹೊರಗೆ ಹೇಗೆ ಬರುವುದು ಎನ್ನುವುದು ಆತನಿಗೆ ತಿಳಿದಿರುವುದಿಲ್ಲ. ಮಾವ ಶ್ರೀಕೃಷ್ಣನಿಂದ ಎಲ್ಲಾ ಸಮರ ವಿದ್ಯೆಯನ್ನು ಕಲಿಯುತ್ತಾನೆ. ಆದರೆ ಶ್ರೀಕೃಷ್ಣನಿಗೆ ಆತನಲ್ಲಿರುವ ಅಸುರ ಪ್ರವೃತ್ತಿ ಹೊರಬಂದರೆ ಇಡೀ ವಿಶ್ವವೇ ಅದನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ತಿಳಿದು ಆತನನ್ನು ಉಳಿಸಲು ಹೋಗುವುದಿಲ್ಲ. ಈ ಎಲ್ಲಾ ಕಾರಣಕ್ಕಾಗಿ ಶ್ರೀಕೃಷ್ಣಪರಮಾತ್ಮ ಅಭಿಮನ್ಯುವನ್ನು ಉಳಿಸುವ ಅವಕಾಶವಿದ್ದರೂ ಕೂಡ ಉಳಿಸುವುದಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.