ಖಚಿತವಾಗಿ ಸಾವಿರ ಕೋಟಿ ಕಲೆಕ್ಷನ್ ಮಾಡುವ ಭರವಸೆ ಮೂಡಿಸಿರುವ ಕೆಜಿಎಫ್-2 ಓಟಿಟಿ ಯಲ್ಲಿ ಬಿಡುಗಡೆ ಆಗೋದು ಯಾವಾಗ ಗೊತ್ತೇ??

ಖಚಿತವಾಗಿ ಸಾವಿರ ಕೋಟಿ ಕಲೆಕ್ಷನ್ ಮಾಡುವ ಭರವಸೆ ಮೂಡಿಸಿರುವ ಕೆಜಿಎಫ್-2 ಓಟಿಟಿ ಯಲ್ಲಿ ಬಿಡುಗಡೆ ಆಗೋದು ಯಾವಾಗ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವಾದ್ಯಂತ 10000ಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದ ಬಾಗಶಃ ಎಲ್ಲಾ ದಾಖಲೆಗಳನ್ನು ಕೂಡ ಅಳಿಸಿಹಾಕುತ್ತದೆ. ಕನ್ನಡ ಚಿತ್ರವೂ ಪರಭಾಷೆಗಳಲ್ಲಿ ಅಥವಾ ಪರ ರಾಜ್ಯಗಳಲ್ಲಿ ಬಿಡುಗಡೆಯಾಗುವುದೇ ದೊಡ್ಡ ವಿಚಾರವಾಗಿತ್ತು. ಆದರೆ ರಾಕಿಂಗ್ ಸ್ಟಾರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಕೆಜಿಎಫ್ ಚಾಪ್ಟರ್ 2 ಚಿತ್ರ ಪರಭಾಷಾ ಸ್ಟಾರ್ ಚಿತ್ರಗಳು ಕೂಡ ಬೆಚ್ಚಿಬೀಳುವಂತೆ ದಾಖಲೆಗಳ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ.

ನಿಜಕ್ಕೂ ಕೂಡ ಪ್ರತಿಯೊಂದು ಚಿತ್ರರಂಗದ ಸಿನಿಮಾ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ ಅಮೇರಿಕಾದಲ್ಲಿ ಮೊದಲ ದಿನವೇ ಒಂದು ಮಿಲಿಯನ್ ಡಾಲರ್ ಗಳಿಸಿರುವ ಮೊದಲ ಹಾಗೂ ಏಕೈಕ ಕನ್ನಡ ಚಿತ್ರವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಪ್ರತಿಯೊಂದು ಪ್ರಾಂತ್ಯದಲ್ಲಿ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ರೇಜ್ ಎನ್ನುವುದು ಆಕಾಶವನ್ನು ತಲುಪುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಲಂಡನ್ ನಿಂದ ಮಂಡ್ಯದ ವರೆಗೂ ಎಲ್ಲಿ ನೋಡಿದರೂ ಕೂಡ ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ.

ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ಚಿತ್ರರಂಗವನ್ನು ಆಗಿ ತೋರಿಸುವ ಯಶ್ ರವರ ಕನಸು ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಕನಸು ನನಸಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಎಲ್ಲರಿಗೂ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರ ಯಾವಾಗ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಬಹುದು ಎನ್ನುವುದಾಗಿ ಕಾಯುತ್ತಿದ್ದಾರೆ. ಸದ್ಯಕ್ಕಂತೂ ಕೆಜಿಎಫ್ ಚಾಪ್ಟರ್ 2 ಚಿತ್ರ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗುವುದಿಲ್ಲ. ಯಾಕೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿರುದ್ಧವಾಗಿ ಯಾವುದೇ ಪರಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ದೇಶದುದ್ದಕ್ಕೂ ಕೆಜಿಎಫ್ ಚಾಪ್ಟರ್ 2 ಚಿತ್ರ ದೀರ್ಘಕಾಲದವರೆಗೆ ಪ್ರದರ್ಶನವನ್ನು ಕಾಣಲಿದೆ. ಹೀಗಾಗಿ ಏನಿದ್ದರೂ ಕೆಲವು ತಿಂಗಳುಗಳು ಕಳೆದ ನಂತರವಷ್ಟೇ ಕೆಜಿಎಫ್ ಚಾಪ್ಟರ್ 2 ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವನ್ನು ಆರಂಭಿಸಲಿದೆ. ಅಲ್ಲಿಯತನಕ ತಪ್ಪದೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಎನ್ನುವ ಮಹೋನ್ನತ ಚಿತ್ರವನ್ನು ಆನಂದಿಸಿ.