ಈ ವಾರ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ಬಿಡುಗಡೆಯಾದ ಟಿಆರ್ಪಿ ಲಿಸ್ಟ್ ನಲ್ಲಿ ಟಾಪ್ ಸ್ಥಾನ ಪಡೆದ ಕಾರ್ಯಕ್ರಮಗಳು ಯಾವ್ಯಾವು ಗೊತ್ತೇ??

ಈ ವಾರ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ಬಿಡುಗಡೆಯಾದ ಟಿಆರ್ಪಿ ಲಿಸ್ಟ್ ನಲ್ಲಿ ಟಾಪ್ ಸ್ಥಾನ ಪಡೆದ ಕಾರ್ಯಕ್ರಮಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಧಾರವಾಹಿಗಳ ಹಾಗೂ ಕಾರ್ಯಕ್ರಮಗಳ ರೇಟಿಂಗ್ ಮೂಲಕ ಅವುಗಳ ಗೆಲುವನ್ನು ನಿರ್ಧರಿಸಲಾಗುತ್ತದೆ. ಅದರಲ್ಲೂ ಈ ಬಾರಿ ಬಹುತೇಕ ಎಲ್ಲಾ ಧಾರವಾಹಿ ಹಾಗೂ ಕಾರ್ಯಕ್ರಮಗಳ ರೇಟಿಂಗ್ ಕಡಿಮೆ ಬಂದಿದೆ ಎಂದು ಹೇಳಬಹುದಾಗಿದೆ. ಇದಕ್ಕೆ ಒಂದು ನ್ಯಾಯಸಮ್ಮತವಾದ ಕಾರಣವೂ ಕೂಡ ಇದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ದೇಶದಾದ್ಯಂತ ಪ್ರತಿಯೊಬ್ಬರು ಕೂಡ ಸಾಯಂಕಾಲ ಆದರೆ ಸಾಕು ಐಪಿಎಲ್ ಪಂದ್ಯಾವಳಿಗಳನ್ನು ನೋಡಲು ಕುಳಿತುಕೊಳ್ಳುತ್ತಾರೆ. ಹೀಗಾಗಿ ಕರ್ನಾಟಕದಲ್ಲಿ ಕೂಡ ಕಿರುತೆರೆಯ ಪ್ರೇಕ್ಷಕರು ಅದರಲ್ಲಿ ಕ್ರಿಕೆಟ್ ಪ್ರೇಮಿಗಳು ಸಾಯಂಕಾಲ ಆದರೆ ಸಾಕು ಐಪಿಎಲ್ ಪಂದ್ಯಾವಳಿಗಳನ್ನು ನೋಡಲು ಕುಳಿತುಕೊಳ್ಳುತ್ತಾರೆ.

ಹೀಗಾಗಿಯೇ ಕೊಂಚಮಟ್ಟಿಗೆ ಕನ್ನಡ ಕಿರುತೆರೆಯ ಧಾರವಾಹಿಗಳ ರೇಟಿಂಗ್ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಆದರೂ ಕೂಡ ಕಳೆದ ವಾರದ ರೇಟಿಂಗ್ ಈಗ ಹೊರ ಬಂದಿದ್ದು ಯಾವ ಧಾರವಾಹಿ ಯಾವ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಅದಕ್ಕಿಂತ ಹಿಂದಿನ ವಾರದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದ ಪುಟ್ಟಕ್ಕನ ಮಕ್ಕಳು ಧಾರವಾಹಿ ಈಗ ಮತ್ತೊಮ್ಮೆ ಮೊದಲ ಸ್ಥಾನದಲ್ಲಿ ಮಿಂಚುತ್ತಿದೆ. ಹೌದು ಪುಟ್ಟಕ್ಕನ ಮಕ್ಕಳು ಧಾರವಾಹಿ 9.7 ರೇಟಿಂಗ್ ಪಡೆದುಕೊಳ್ಳುವ ಮೂಲಕ ಮೊದಲ ಸ್ಥಾನಕ್ಕೆ ಕಾಲಿಟ್ಟಿದೆ. ಇನ್ನು ಮತ್ತೊಂದು ಜನಪ್ರಿಯ ಧಾರವಾಹಿ ಆಗಿರುವ ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ.

ಮೂರನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಹಾಗೂ ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲ್ಲಿ ಧಾರವಾಹಿ ಕಂಡುಬರುತ್ತದೆ. ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿ 5.4 ರೇಟಿಂಗ್ ಪಡೆದುಕೊಳ್ಳುವುದರ ಮೂಲಕ ಕಲರ್ಸ್ ಕನ್ನಡ ವಾಹಿನಿಯ ನಂಬರ್1 ಧಾರವಾಹಿಯಾಗಿ ಕಾಣಿಸಿಕೊಂಡಿದೆ. ವಾರಾಂತ್ಯದ ಕಾರ್ಯಕ್ರಮಗಳಿಗೆ ಬರುವುದಾದರೆ ಕಳೆದವಾರ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಫಿನಾಲೆ ರೇಟಿಂಗ್ 4.1 ಬಂದಿತ್ತು. ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಆಡಿಶನ್ ಸಂಚಿಕೆ 6.8 ರೇಟಿಂಗ್ ಅನ್ನು ಪಡೆದುಕೊಂಡಿದೆ. ಹಾಗೂ ರಿಯಾಲಿಟಿ ಶೋಗಳ ಮಟ್ಟಿಗೆ ಇದೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಭಾನುವಾರ ಪ್ರಸಾರವಾಗಿದ್ದ ಯುಗಾದಿ ಹಬ್ಬದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಶೇಷ ಸಂಚಿಕೆ ಬರೋಬ್ಬರಿ 7.8 ರೇಟಿಂಗ್ ಅಂಕಗಳನ್ನು ಪಡೆದುಕೊಂಡು ಭಾನುವಾರದ ನಂಬರ್1 ಕಾರ್ಯಕ್ರಮವಾಗಿ ಮಿಂಚಿತ್ತು. ಇವುಗಳಲ್ಲಿ ನಿಮ್ಮ ನೆಚ್ಚಿನ ಧಾರವಾಹಿ ಯಾವುದು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.